ಕೆಲವೊಮ್ಮೆ ಹಾರ್ಮೋನುಗಳ ಬದಲಾವಣೆಯ ಕಾರಣದಿಂದಾಗಿ ಕೆಲವು ಮಹಿಳೆಯರಲ್ಲಿ ಮುಖದಲ್ಲಿ ವಿಶೇಷವಾಗಿ ತುಟಿಯ ಮೇಲ್ಭಾಗದಲ್ಲಿ ಅನಗತ್ಯ ಕೂದಲುಗಳು ಬೆಳೆಯುತ್ತದೆ. ಇದು ಮಾತ್ರವಲ್ಲದೆ ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲೂ ತುಟಿಯ ಮೇಲ್ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಅನಗತ್ಯ ಕೂದಲುಗಳು ಬೆಳೆಯುತ್ತದೆ. ಖಂಡಿತವಾಗಿಯೂ ಈ ಅನಗತ್ಯ ಕೂದಲುಗಳು ಅವರಿಗೆ ಮುಜುಗುರವನ್ನು ಉಂಟು ಮಾಡುತ್ತದೆ. ಈ ಕಾರಣದಿಂದ ಅದನ್ನು ತೊಡೆದು ಹಾಕಲು ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತಾರೆ. ಆದರೆ ನೀವು ಪದೇ ಪದೇ ಪಾರ್ಲರ್ಗೆ ಹೋಗುವ ಬದಲು ಮನೆಯಲ್ಲಿಯೇ ಕೆಲವೊಂದು ಸುಲಭ ಮನೆಮದ್ದುಗಳ ಸಹಾಯದಿಂದ ತುಟಿಯ ಮೇಲ್ಭಾಗದಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆದುಹಾಕಬಹುದು.
ಹಾಲು ಮತ್ತು ಅರಶಿನ:
ಒಂದು ಚಮಚ ಅರಶಿನ ಪುಡಿ ಮತ್ತು ಒಂದು ಚಮಚ ಹಾಲನ್ನು ತೆಗೆದುಕೊಂಡು ಈ ಮಿಶ್ರಣವನ್ನು ಚೆನ್ನಾಗಿ ಬೆರಸಿಕೊಳ್ಳಿ. ನಂತರ ನಿಮ್ಮ ತುಟಿಯ ಮೇಲ್ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿ, ಒಣಗಲು ಬಿಡಿ. ನಂತರ ನಿಧಾನಕ್ಕೆ ಸ್ಕ್ರಬ್ ಮಾಡಿ ಬಳಿಕ ತನ್ನೀರಿನಿಂದ ಮುಖವನ್ನು ತೊಳೆಯಿರಿ. ಈ ಮಿಶ್ರಣವನ್ನು ವಾರಕ್ಕೆ ಮೂರು ಬಾರಿ ಅನ್ವಯಿಸಬಹುದು. ಏಕೆಂದರೆ ಹಾಲು ಮತ್ತು ಅರಶಿನ ಮುಖದ ಮೇಲೆ ಕಾಣಿಸಿಕೊಳ್ಳುವ ಅನಗತ್ಯ ಕೂದಲುಗಳನ್ನು ತೆಗೆದುಹಾಕಲು ಪರಿಣಾಮಕಾರಿಯಾಗಿದೆ.
ಕಡ್ಲೆಹಿಟ್ಟು ಮತ್ತು ಹಾಲು:
ಒಂದು ಚಮಚ ಕಡ್ಲೆ ಹಿಟ್ಟಿಗೆ ಸ್ವಲ್ಪ ಹಾಲನ್ನು ಬೆರೆಸಿ, ಇದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಮತ್ತು ಈ ಮಿಶ್ರಣವನ್ನು ತುಟಿಯ ಮೇಲ್ಭಾಗಕ್ಕೆ ಹಚ್ಚಿ, ಅದನ್ನು ಒಣಗಲು ಬಿಡಿ. ಒಣಗಿದ ನಂತರ ನಿಧಾನವಾಗಿ ಸ್ಕ್ರಬ್ ಮಾಡಿ ತನ್ನೀರಿನಿಂದ ಮುಖ ತೊಳೆಯಿರಿ. ಈ ಒಂದು ಮನೆಮದ್ದು ಅನಗತ್ಯ ಕೂದಲುಗಳನ್ನು ತೆಗೆದುಹಾಕಲು ಸಹಕಾರಿಯಾಗಿದೆ.
ನಿಂಬೆ ಮತ್ತು ಸಕ್ಕರೆ:
ತುಟಿ ಮೇಲ್ಭಾಗದಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆದುಹಾಕಲು ನಿಂಬೆ ಮತ್ತು ಸಕ್ಕರೆಯನ್ನು ಸಹ ಬಳಸಬಹುದು. ಇದಕ್ಕಾಗಿ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಒಂದು ಚಮಚ ಸಕ್ಕರೆ ಮತ್ತು ಸ್ವಲ್ಪ ನಿಂಬೆ ರಸವನ್ನು ಬೆರೆಸಿ, ಸಕ್ಕರೆ ಕರಗುವವರೆಗೆ ಈ ಮಿಶ್ರಣವನ್ನು ಬಿಸಿಮಾಡಿಕೊಳ್ಳಿ. ನಂತರ ಈ ಮಿಶ್ರಣ ತಣ್ಣಗಾದ ಬಳಿಕ ಅದನ್ನು ತುಟಿಯ ಮೇಲ್ಭಾಗಕ್ಕೆ ಹಚ್ಚಿ, 15 ನಿಮಿಷಗಳ ಬಳಿಕ ನೀರಿನ ಸಹಾಯದಿಂದ ತೊಳೆಯಿರಿ. ಈ ಮನೆಮದ್ದು ಅನಗತ್ಯ ಕೂದಲನ್ನು ಸುಲಭವಾಗಿ ತೆಗೆದುಹಾಕುತ್ತದೆ.
ಇದನ್ನು ಓದಿ: ಬೆಳಿಗ್ಗೆ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?
ಮೊಸರು, ಜೇನುತುಪ್ಪ ಮತ್ತು ಅರಶಿನ:
ಒಂದು ಚಮಚ ಮೊಸರಿಗೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ಅರಶಿನವನ್ನು ಹಾಕಿ ಚೆನ್ನಾಗಿ ಬೆರೆಸಿ ತುಟಿಯ ಮೇಲ್ಭಾಗಕ್ಕೆ ಹಚ್ಚಿ 15 ರಿಂದ 20 ನಿಮಿಷಗಳ ಬಳಿಕ ನಿಧಾನವಾಗಿ ಸ್ಕ್ರಬ್ ಮಾಡಿ ಮುಖವನ್ನು ತನ್ನೀರಿನಿಂದ ತೊಳೆಯಿರಿ. ಈ ಮಿಶ್ರಣ ಕೂದಲುಗಳನ್ನು ಕಿರುಚೀಲಗಳಿಂದಲೇ ತೆಗೆದುಹಾಕಲು ಸಹಾಯ ಮಾಡುತ್ತದೆ.
ಆಲೂಗಡ್ಡೆ ರಸ:
ಆಲೂಗಡ್ಡೆ ರಸ ಮುಖದ ಮೇಲೆ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆದುಹಾಕಲು ತುಂಬಾ ಉಪಯುಕ್ತವಾಗಿದೆ. ಇದಕ್ಕಾಗಿ ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ರುಬ್ಬಿಕೊಂಡ ಆಲೂಗಡ್ಡೆಯನ್ನು ಒಂದು ಸ್ವಚ್ಛ ಬಟ್ಟೆಯಲ್ಲಿ ಹಾಕಿ ಅದರ ರಸವನ್ನು ಚೆನ್ನಾಗಿ ಹಿಂಡಿ. ಈ ರಸವನ್ನು ರಾತ್ರಿ ಮಲಗುವ ಮುನ್ನ ತುಟಿಯ ಮೇಲ್ಭಾಗಕ್ಕೆ ಹಚ್ಚಿಕೊಳ್ಳಿ. ರಾತ್ರಿಯಿಡಿ ಹಾಗೇ ಬಿಡಿ ಮತ್ತು ಬೆಳಗ್ಗೆ ಮುಖ ತೊಳೆಯಿರಿ. ವಾರದಲ್ಲಿ ಕನಿಷ್ಠ ಮೂರು ಬಾರಿ ಈ ಮಿಶ್ರಣವನ್ನು ಹಚ್ಚಿಕೊಳ್ಳಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: