Kannada News Lifestyle How to wash and remove stains from white clothes? Lifestyle News in Kannada
Cleaning Tips : ತೊಳೆದ್ರು ಬಿಳಿ ಬಟ್ಟೆ ಮೇಲಿನ ಕಲೆ ಹೋಗ್ತಿಲ್ವಾ? ಹೀಗೆ ಮಾಡಿ
ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದಾಗ ಎಷ್ಟೇ ಕಾಳಜಿ ವಹಿಸಿದರೂ ಕೆಲವೊಮ್ಮೆ ಕಲೆಗಳಾಗಿ ಬಿಡುತ್ತದೆ. ಈ ಮಳೆಗಾಲದಲ್ಲಿ ಬಿಳಿ ಬಣ್ಣದ ಉಡುಪನ್ನು ಧರಿಸಿದರಂತೂ, ಕಲೆಯಾಗದಂತೆ ನೋಡಿಕೊಳ್ಳುವುದು ಸವಾಲಿನ ಸಂಗತಿ. ಒಂದು ವೇಳೆ ಬಿಳಿ ಬಟ್ಟೆಯಲ್ಲಿ ಕಲೆಯೇನಾದ್ರೂ ಇದ್ರೆ, ಈ ವಸ್ತುಗಳಿಂದ ಸುಲಭ ಪರಿಹಾರ ಸಾಧ್ಯ.
ಸಾಂದರ್ಭಿಕ ಚಿತ್ರ
Follow us on
ಬಿಳಿ ಬಟ್ಟೆಯನ್ನು ಕಲೆಯಾಗದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ಕೈ ತಪ್ಪಿ ಟೀ ಕಾಫಿ ಚೆಲ್ಲಿಯೋ, ಪೆನ್ನಿನ ಇಂಕ್ ತಾಗಿಯೋ ಬಿಳಿ ಬಟ್ಟೆಯ ಅಂದವನ್ನು ಹಾಳು ಮಾಡುತ್ತದೆ. ಈ ವೇಳೆ ಯಾವುದೇ ಡಿಟರ್ಜೆಂಟ್, ಸೋಪ್ ಬಳಸಿ ತಿಕ್ಕಿ ತೊಳೆದರೂ ಪ್ರಯೋಜನವಂತೂ ಆಗುವುದೇ ಇಲ್ಲ. ಬಟ್ಟೆಯನ್ನು ಜಾಸ್ತಿ ಉಜ್ಜಿದರೆ, ಆ ಬಟ್ಟೆಗಳು ಹಾಳಾಗುವ ಸಾಧ್ಯತೆ ಇರುತ್ತದೆ. ನಿಮಗೂ ಈ ರೀತಿ ಅನುಭವವಾಗಿದ್ದರೆ ಟೆನ್ಶನ್ ಮಾಡಿಕೊಳ್ಬೇಡಿ, ಈ ವಸ್ತುಗಳನ್ನು ಬಳಸಿ ಕಲೆಯನ್ನು ನಿವಾರಿಸಿಕೊಳ್ಳಬಹುದು.
ಅರ್ಧ ಕಪ್ ನೀರಿಗೆ ಅರ್ಧ ಕಪ್ ವಿನೆಗರ್ ಮಿಶ್ರಣ ಮಾಡಿ ಬಿಳಿ ಬಟ್ಟೆಯ ಮೇಲೆ ಇರುವ ಕಲೆಗೆ ಸ್ಪ್ರೇ ಮಾಡಿ, ಸ್ವಲ್ಪ ಸಮಯ ಹಾಗೆ ಬಿಡಬೇಕು. ತದನಂತರದಲ್ಲಿ ಅದೇ ನೀರಿನಿಂದ ತಿಕ್ಕಿ ತೊಳೆದರೆ ಕಲೆ ಬಿಡುತ್ತದೆ.
ಬಿಳಿ ಬಟ್ಟೆ ಮೇಲಿನ ಕಲೆಯನ್ನು ತೆಗೆದು ಹಾಕಲು ಅಡುಗೆ ಸೋಡಾ ಬೆಸ್ಟ್ ಎನ್ನಬಹುದು. ನೀರಿಗೆ ಅಡುಗೆ ಸೋಡಾ ಸೇರಿಸಿ, ಕಲೆಯಾದ ಬಟ್ಟೆಯನ್ನು ಆ ನೀರಿನಲ್ಲಿ ನೆನೆಸಿಡಬೇಕು. ಸ್ವಲ್ಪ ಸಮಯದ ಬಳಿಕ ಬಟ್ಟೆಯನ್ನು ತೊಳೆದರೆ ಕಲೆಯೂ ಹೋಗುತ್ತದೆ.
ಬಿಳಿ ಬಟ್ಟೆಯಲ್ಲಿ ಕಲೆಯಿದ್ದರೆ ಆ ಜಾಗಕ್ಕೆ ನಿಂಬೆರಸ ಹಾಕಿ ಉಪ್ಪು ಮತ್ತು ಸೋಪಿನಿಂದ ಚೆನ್ನಾಗಿ ತೊಳೆದರೆ ಕಲೆಯೂ ಇಲ್ಲದಂತಾಗುತ್ತದೆ.
ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಉಜ್ಜುವುದರಿಂದ ಬಿಳಿ ಬಟ್ಟೆ ಮೇಲಿನ ಕಲೆಯೂ ನಿವಾರಣೆಯಾಗುತ್ತದೆ.
ಬಿಳಿ ಬಟ್ಟೆಯಲ್ಲಿ ಕಲೆಯಿದ್ದರೆ ಸ್ವಲ್ಪ ಬಿಸಿ ನೀರನ್ನು ಆ ಜಾಗಕ್ಕೆ ಹಾಕಿ, ಡಿರ್ಟಜೆಂಟ್ ನಿಂದ ಉಜ್ಜಿ ಕಲೆಯನ್ನು ತೆಗೆದು ಹಾಕಬಹುದು.
ಬಿಳಿ ಬಟ್ಟೆ ಮೇಲಿನ ಕಲೆ ನಿವಾರಣೆಗೆ ಟೂತ್ ಪೇಸ್ಟ್ ಬಳಸುವುದು ಪರಿಣಾಮಕಾರಿಯಾಗಿದೆ. ಕಲೆ ಮೇಲೆ ಟೂತ್ಪೇಸ್ಟ್ ಅನ್ವಯಿಸಿ, ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆ ಬಿಡಬೇಕು. ಆ ಬಳಿಕ ಡಿಟೆರ್ಜಂಟ್ ಬಳಸಿ ಸ್ವಚ್ಛಗೊಳಿಸಿದರೆ ಕಲೆ ಉಳಿಯುವುದಿಲ್ಲ.