ನಿಮಗೆ ಮದ್ಯಪಾನ ಮಾಡುವ ಅಭ್ಯಾಸವಿದೆಯೇ? ನಿಮ್ಮ ಮಗುವಿಗೆ ಈ ಸಮಸ್ಯೆಗಳು ಕಾಡಬಹುದು ಎಚ್ಚರಾ

ಕುಡಿತದ ಚಟಕ್ಕೆ ಬಿದ್ದಿರುವ ಪೋಷಕರ ಮಕ್ಕಳೂ ಕುಡಿತದ ಚಟಕ್ಕೆ ಒಳಗಾಗುವ ಅಪಾಯವಿದೆ ಎನ್ನುತ್ತಾರೆ ತಜ್ಞರು. ಸಂಶೋಧನೆ ನಡೆಸಿದ ನಂತರವೇ ಈ ವಿಷಯ ಬಹಿರಂಗವಾಗಿದೆ, ಇದರಲ್ಲಿ ಯಾವುದೇ ಅನುಮಾನವಿಲ್ಲ. ವಯಸ್ಕರರ ಕ್ರಿಯೆಗಳು ಮಕ್ಕಳ ಮೇಲೆ ಪರಿಣಾಮ ಬೀರುವಂತೆಯೇ ಅವರ ಅಭ್ಯಾಸಗಳು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುವ ಅಪಾಯವಿದೆ ಎಂದು ಹೇಳಲಾಗುತ್ತದೆ.

ನಿಮಗೆ ಮದ್ಯಪಾನ ಮಾಡುವ ಅಭ್ಯಾಸವಿದೆಯೇ? ನಿಮ್ಮ ಮಗುವಿಗೆ ಈ ಸಮಸ್ಯೆಗಳು ಕಾಡಬಹುದು ಎಚ್ಚರಾ
ಮದ್ಯಪಾನ ಅಭ್ಯಾಸವಿದೆಯೇ? ನಿಮ್ಮ ಮಗುವಿಗೂ ಈ ಸಮಸ್ಯೆಗಳು ಕಾಡಬಹುದು
Follow us
ಸಾಧು ಶ್ರೀನಾಥ್​
|

Updated on: Sep 26, 2023 | 5:21 PM

ದೊಡ್ಡವರು ಮಾಡುವ ಎಲ್ಲವನ್ನೂ ಚಿಕ್ಕ ಮಕ್ಕಳು ಮಾಡುತ್ತಾರೆ ಎಂದು ಒತ್ತಿ ಹೇಳಬೇಕಾಗಿಲ್ಲ. ಆದ್ದರಿಂದಲೇ ಮನೆಯಲ್ಲಿ ಮಕ್ಕಳಿರುವಾಗ ಎಚ್ಚರದಿಂದಿರಿ ಎನ್ನುತ್ತಾರೆ ಪೇರೆಂಟಿಂಗ್ ಟಿಪ್ಸ್ ಕೊಡುವವರು. ಮನೆಯಲ್ಲಿ ದಂಪತಿ ( Parents ) ನಡುವಿನ ಜಗಳ ಮಕ್ಕಳ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ವಯಸ್ಕರರು ಏನು ಮಾಡುತ್ತಾರೆ ಎಂಬುದನ್ನು ನೋಡಿ ಮಕ್ಕಳು ಕಲಿಯುತ್ತವೆ (LifeStyle ) ಎಂದು ತಿಳಿದಿದೆ. ಇನ್ನು, ದೊಡ್ಡವರ ಆರೋಗ್ಯವು ಮಕ್ಕಳ (Children) ಆರೋಗ್ಯದ ಮೇಲೂ (health Problems) ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕುಡಿತದ ಚಟಕ್ಕೆ ಬಿದ್ದಿರುವ ಪೋಷಕರ ಮಕ್ಕಳೂ ಕುಡಿತದ ಚಟಕ್ಕೆ ಒಳಗಾಗುವ ಅಪಾಯವಿದೆ ಎನ್ನುತ್ತಾರೆ ತಜ್ಞರು. ಸಂಶೋಧನೆ ನಡೆಸಿದ ನಂತರವೇ ಈ ವಿಷಯ ಬಹಿರಂಗವಾಗಿದೆ, ಇದರಲ್ಲಿ ಯಾವುದೇ ಅನುಮಾನವಿಲ್ಲ. ವಯಸ್ಕರರ ಕ್ರಿಯೆಗಳು ಮಕ್ಕಳ ಮೇಲೆ ಪರಿಣಾಮ ಬೀರುವಂತೆಯೇ ಅವರ ಅಭ್ಯಾಸಗಳು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುವ ಅಪಾಯವಿದೆ ಎಂದು ಹೇಳಲಾಗುತ್ತದೆ. ಮಿಚಿಗನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ವಿಷಯಗಳು ಬಹಿರಂಗವಾಗಿವೆ. ಪೋಷಕರಲ್ಲಿ ಒಬ್ಬರು ಕುಡಿತದ ವ್ಯಸನಿಯಾಗಿದ್ದರೂ ಮಕ್ಕಳು ಮದ್ಯದ ವ್ಯಸನಿಯಾಗುವ ಅಪಾಯವಿದೆ ಎಂದು ಸಮೀಕ್ಷೆ ತೋರಿಸಿದೆ.

ಸಮೀಕ್ಷೆಯ ಭಾಗವಾಗಿ, ಕುಡಿಯುವ ಅಭ್ಯಾಸ ಹೊಂದಿರುವ 2,000 ಪೋಷಕರ ಮೇಲೆ ಸಮೀಕ್ಷೆಯನ್ನು ನಡೆಸಲಾಯಿತು. ಸುಮಾರು 10 ವರ್ಷಗಳ ಕಾಲ ಈ ಸಮೀಕ್ಷೆ ನಡೆಸಿದ ಬಳಿಕ ಈ ವಿಷಯಗಳು ಬಹಿರಂಗವಾಗಿವೆ. ಇದಲ್ಲದೆ, ಮದ್ಯಪಾನ ಮಾಡುವ ಅಭ್ಯಾಸವನ್ನು ಹೊಂದಿರುವ ಪೋಷಕರ ಮಕ್ಕಳಲ್ಲೂ ಸಂಸ್ಕರಿತ, ಪ್ಯಾಕ್ಡ್​​ ಆಹಾರ ತಿನ್ನುವ ಆಸೆ ಹೆಚ್ಚುತ್ತದೆ ಎನ್ನುತ್ತಾರೆ. ಮಕ್ಕಳು ಒಳ್ಳೆಯ ಆಹಾರ ತಿನ್ನುವ ಆಸಕ್ತಿ ತೋರಿಸುವುದಿಲ್ಲ ಎಂದೂ ಅಧ್ಯಯನವು ತೋರಿಸಿದೆ.

ಇದನ್ನೂ ಓದಿ: Age reversal ಎಂಬುದು ಸಾಧ್ಯವಾ? ವಯಸ್ಸು 45 -ಹದಿಹರೆಯ ಹಂಬಲಿಸಿ ದಿನಕ್ಕೆ 111 ಮಾತ್ರೆ ತಗೋತಿದ್ದಾನೆ

ಆಲ್ಕೋಹಾಲ್ ಅಭ್ಯಾಸವಿರುವವರಿಗೆ ಹುಟ್ಟುವ ಮಕ್ಕಳು ಅಲ್ಟ್ರಾ-ಪ್ರೊಸೆಸ್ಡ್ ಆಹಾರ, ರಿಫೈನ್ಡ್ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಆಹಾರವನ್ನು ತಿನ್ನಲು ಹೆಚ್ಚಿನ ಆಸೆಯನ್ನು ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಇವುಗಳಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಹಾನಿಯಾಗಲಿದೆ ಎಂದು ಎಚ್ಚರಿಸಲಾಗಿದೆ. ಇಂತಹ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ಬಿಪಿ, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂದು ಎಚ್ಚರಿಸಲಾಗಿದೆ. ಹಾಗಾಗಿ ಮುಂದಿನ ಪೀಳಿಗೆ ಆರೋಗ್ಯವಾಗಿರಬೇಕಾದರೆ ಪೋಷಕರು ತಮ್ಮ ಅಭ್ಯಾಸವನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮದ್ಯಪಾನ ಮಾಡುವ ಪುರುಷರಲ್ಲಿ ಆಲ್ಕೋಹಾಲ್ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದ ವಿಷಯವೇ ಸರಿ. ಅತಿಯಾಗಿ ಮದ್ಯಪಾನ ಮಾಡುವ ಪುರುಷರಲ್ಲಿ ವೀರ್ಯ ಕೋಶಗಳ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಎಚ್ಚರಿಸಲಾಗಿದೆ. ಇದು ದೀರ್ಘಾವಧಿಯಲ್ಲಿ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅವರು ಮದ್ಯದ ಜೊತೆಗೆ ಧೂಮಪಾನದ ಅಭ್ಯಾಸವನ್ನು ಹೊಂದಿದ್ದರೆ ಈ ವಿಷಯದಲ್ಲಿ ಇನ್ನೂ ಹೆಚ್ಚು ಅಪಾಯಕಾರಿ ಎಂಬುದನ್ನು ಮರೆಯಬೇಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ