ಸಂಗಾತಿಯ ಬಳಿ ಕ್ಷಮೆ ಕೇಳುವ ಮುನ್ನ ಈ ವಿಚಾರಗಳು ತಲೆಯಲ್ಲಿರಲಿ

ಜೀವನದಲ್ಲಿ ಹುಟ್ಟುತ್ತಲೇ ಜೊತೆಯಾಗುವ ಸಂಬಂಧಿಕರು ನಿಮ್ಮ ಗುಣ ಸ್ವಭಾವವನ್ನು ಹುಟ್ಟಿನಿಂದಲೇ ಅರಿತಿರುತ್ತಾರೆ. ಆದರೆ ಜೀವನದಲ್ಲಿ ಕೆಲವು ಸಂಬಂಧಗಳು ಬೆಳೆಯುತ್ತಾ ಹೋದಂತೆ ಜೊತೆಯಾಗುತ್ತವೆ. ಅದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಿಮ್ಮ ಜೊತೆಗೆ ಜೀವನವನ್ನು ಹಂಚಿಕೊಳ್ಳುವ ಸಂಗಾತಿಯು ಕೂಡ ಸೇರಿಕೊಳ್ಳುತ್ತಾರೆ. ಮದುವೆ ಜೀವನಕ್ಕೆ ಕಾಲಿಟ್ಟ ಬಳಿಕ ನಿಮ್ಮ ಗುಣ ಅವಗುಣಗಳನ್ನು ಎಲ್ಲವನ್ನು ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಕೆಲವೊಮ್ಮೆ ನಿಮ್ಮಿಂದ ಅಥವಾ ಸಂಗಾತಿಯಿಂದ ತಪ್ಪುಗಳಾಗಬಹುದು. ಆ ಸಮಯದಲ್ಲಿ ಕ್ಷಮೆ ಕೇಳುವಾಗ ಅಥವಾ ಕ್ಷಮಿಸುವ ವೇಳೆ ನೀವು ಈ ವಿಚಾರಗಳ ಬಗ್ಗೆ ಗಮನ ಕೊಡುವುದು ಅಗತ್ಯ.

ಸಂಗಾತಿಯ ಬಳಿ ಕ್ಷಮೆ ಕೇಳುವ ಮುನ್ನ ಈ ವಿಚಾರಗಳು ತಲೆಯಲ್ಲಿರಲಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 19, 2024 | 7:00 PM

ತಪ್ಪು ಯಾರು ಮಾಡಲ್ಲ ಹೇಳಿ. ತಪ್ಪು ಮಾಡಿದಾಗ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳುವ ಮನೋಭಾವ ಬಹಳ ಮುಖ್ಯವಾಗುತ್ತದೆ. ಒಬ್ಬರ ಮುಂದೆ ಹೋಗಿ ಕ್ಷಮಿಸಿ ಎಂದು ಕೇಳುವಾಗ ನಿಮ್ಮ ಸ್ವಾಭಿಮಾನವು ಅಡ್ಡಬರಬಹುದು. ಆದರೆ ಸಂಬಂಧಗಳೇ ಮುಖ್ಯ ಎನ್ನುವ ಸಂದರ್ಭದಲ್ಲಿ ಕ್ಷಮಾಗುಣ ಅಥವಾ ಕ್ಷಮೆ ಕೇಳುವ ಗುಣವನ್ನು ರೂಢಿಸಿಕೊಳ್ಳಬೇಕು. ಆದರೆ ಕ್ಷಮೆ ಕೇಳುವುದು ಎಂದರೆ ನೀವು ಒಬ್ಬರ ಎದುರಲ್ಲಿ ಚಿಕ್ಕವರು ಆಗುವುದು ಖಂಡಿತವಲ್ಲ. ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಬಹುದು.

ಸಂಗಾತಿಯ ಬಳಿ ಕ್ಷಮೆ ಕೇಳುವಾಗ ಈ ಬಗ್ಗೆ ತಿಳಿದಿರಲಿ

* ಸಂಗಾತಿಯ ಬಳಿ ತನ್ನ ಕ್ಷಮೆ ಕೇಳುವುದು ಒಳ್ಳೆಯದು. ಈ ವೇಳೆಯಲ್ಲಿ ತಾನು ಮಾಡಿದ ತಪ್ಪಿನಿಂದಾದ ತೊಂದರೆಗಳಿಗೆ ತಾನು ಅನುಭವಿಸುತ್ತಿರುವ ನೋವಿನ ಬಗ್ಗೆ ಹೇಳಿ ಬಿಡಿ. ಈ ವೇಳೆಯಲ್ಲಿ ಸಂಗಾತಿಯು ನಿಮ್ಮ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

* ತಾನು ಮಾಡಿದ ತಪ್ಪುಗಳಿಂದ ಈಗಾಗಲೇ ಏನೆಲ್ಲಾ ಸಮಸ್ಯೆಗಳಾಗಿವೆ. ಅದನ್ನೆಲ್ಲಾ ಒಪ್ಪಿಕೊಂಡು, ಸಮಸ್ಯೆಗಳಿಗೆ ಜವಾಬ್ದಾರಿಯುತವಾಗಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಂಗಾತಿಯ ಬಳಿ ಮಾತನಾಡಿ.

* ಸಣ್ಣ ತಪ್ಪಿನಿಂದ ಸಂಬಂಧದಲ್ಲಿ ಬಿರುಕು ಮೂಡಿದರೆ, ಸಂಗಾತಿಯನ್ನು ಮಾತುಕತೆಗೆ ಕರೆಯಿರಿ. ಇಬ್ಬರೂ ಜೊತೆಯಾಗಿ ಚರ್ಚಿಸಿ ಈಗಾಗಲೇ ಆಗಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ.

ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಈ ಸೂತ್ರಗಳನ್ನು ಬಳಸಿದರೆ ಲೈಫ್ ಇನ್ನಷ್ಟು ಕಲರ್ ಫುಲ್

* ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಸಂಗಾತಿಯ ಬಳಿ ಹೇಳಿ ಅವರಿಗೆ ನಿಮ್ಮ ಮೇಲೆ ನಂಬಿಕೆ ಬರುವಂತೆ ಮಾತನಾಡಿ. ನಿಮ್ಮ ಭರವಸೆಯ ಮಾತುಗಳಿಂದ ನಿಮ್ಮನ್ನು ಕ್ಷಮಿಸುತ್ತಾರೆ.

* ಸಂಗಾತಿಯ ಬಳಿ ತನ್ನನ್ನು ಕ್ಷಮಿಸಿ ಎಂದು ಕೇಳಿಕೊಳ್ಳಿ. ನೀವು ಮಾಡಿದ ತಪ್ಪಿನಿಂದ ಸಂಗಾತಿಗೆ ನೋವಾಗಿರಬಹುದು. ಹೀಗಾಗಿ ಸಂಬಂಧವು ಮೊದಲಿನಂತೆ ಆಗಲು ಸಮಯವಕಾಶವನ್ನು ನೀಡಿದರೆದರೆ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ