AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಕಣ್ಣು ಮುಚ್ಚಿದರೂ ನಿದ್ದೆ ಬರಲ್ವಾ, ಈ ಮನೆಮದ್ದು ಬಳಸಿ

ದಿನವಿಡೀ ದಣಿಯುವ ಜೀವಕ್ಕೆ ನಿದ್ದೆ ಎನ್ನುವುದು ಬಹಳ ಮುಖ್ಯ. ಆದರೆ ಇತ್ತೀಚೆಗಿನ ದಿನಗಳಲ್ಲಿ ಜೀವನ ಶೈಲಿ, ಆಹಾರ ಶೈಲಿ ಹಾಗೂ ಒತ್ತಡದ ಜೀವನದಿಂದಾಗಿ ನಿದ್ದೆ ಎನ್ನುವುದು ಹತ್ತಿರ ಕೂಡ ಸುಳಿಯದಂತಾಗಿದೆ. ಸರಿಯಾಗಿ ನಿದ್ದೆ ಮಾಡಿಲ್ಲವಾದರೆ ಆರೋಗ್ಯವು ಸಹಜವಾಗಿಯೇ ಹದಗೆಡುತ್ತದೆ. ಹೀಗಾಗಿ ಒಬ್ಬ ವ್ಯಕ್ತಿಯ ಆರೋಗ್ಯವು ಚೆನ್ನಾಗಿ ಇರಬೇಕಾದರೆ ದಿನಕ್ಕೆ ಇಂತಿಷ್ಟು ಗಂಟೆಗಳ ನಿದ್ರಿಸಬೇಕು. ರಾತ್ರಿ ವೇಳೆ ಕಣ್ಣು ಮುಚ್ಚಿ ಮಲಗಿದರೂ ನಿದ್ದೆ ಬಾರದೆ ಒದ್ದಾಡುತ್ತಿದ್ದರೆ, ಈ ಮನೆ ಮದ್ದನ್ನು ಟ್ರೈ ಮಾಡಿದರೆ ಆರಾಮಾದಾಯಕವಾಗಿ ನಿದ್ರಿಸಬಹುದು.

ರಾತ್ರಿ ಕಣ್ಣು ಮುಚ್ಚಿದರೂ ನಿದ್ದೆ ಬರಲ್ವಾ, ಈ ಮನೆಮದ್ದು ಬಳಸಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 23, 2024 | 4:54 PM

ರಾತ್ರಿ ಕಣ್ಣು ಮುಚ್ಚಿದರೆ ಯಾರೂ ಆ ತಕ್ಷಣವೇ ನಿದ್ರೆಗೆ ಜಾರುತ್ತರೋ ಅವರಿಗಿಂತ ಸುಖಿಗಳು ಮತ್ತೊಬ್ಬರಿಲ್ಲ. ಆದರೆ ಕಣ್ಣು ಮುಚ್ಚಿದರೆ ಸಾವಿರ ಟೆನ್ಶನ್ ಗಳು, ನಾನಾ ರೀತಿಯ ಯೋಚನೆಗಳು ಬಂದರಂತೂ ನಿದ್ದೆಯೆನ್ನುವುದು ಹತ್ತಿರ ಸುಳಿಯುವುದೇ ಇಲ್ಲ. ಮನುಷ್ಯ ದಿನಕ್ಕೆ ಕನಿಷ್ಠ 8 ರಿಂದ 10 ಗಂಟೆಯಾದರೂ ನಿದ್ರಿಸಿದರೆ ಮಾತ್ರ ಆತನ ಆರೋಗ್ಯವು ಉತ್ತಮವಾಗಿರುತ್ತದೆ. ಆದರೆ ಕೆಲವರಿಗೆ ಎಷ್ಟೇ ಕಣ್ಣು ಮುಚ್ಚಿ ನಿದ್ದೆ ಮಾಡಲು ಯತ್ನಿಸಿದರೂ ನಿದ್ದೆ ಬರುವುದೇ ಇಲ್ಲ. ಕಣ್ಣು ಮುಚ್ಚಿದರೆ ನಿದ್ದೆ ಬರಬೇಕು ಎನ್ನುವವರು ಮನೆಯಲ್ಲೇ ಈ ಮನೆ ಮದ್ದನ್ನು ಮಾಡಿಕೊಳ್ಳಬಹುದು.

ನಿದ್ದೆ ಬಾರದಿದ್ದರೆ ಈ ಮನೆ ಮದ್ದನ್ನು ಒಮ್ಮೆ ಟ್ರೈ ಮಾಡಿ

* ಮಕ್ಕಳಿಗೆ ನಿದ್ದೆ ಬಾರದಿದ್ದರೆ ಬಿಸಿನೀರಲ್ಲಿ ಜಾಯಿಕಾಯಿ ಅಥವಾ ಬಜೆಯನ್ನು ತೇದು ಕೊಟ್ಟರೆ ಚೆನ್ನಾಗಿ ನಿದ್ದೆ ಬರುತ್ತದೆ.

* ನಿದ್ದೆ ಬಾರದಿದ್ದರೆ ಶುದ್ಧ ತುಪ್ಪವನ್ನು ಜಾಯಿಕಾಯಿ ಜೊತೆ ಅರೆದು ಹಣೆಗೆ ಹಚ್ಚಿದರೆ ನಿದ್ದೆ ಬೇಗನೆ ಬರುತ್ತದೆ.

* ನಿದ್ರಾಹೀನತೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮುನ್ನ ಗಸಗಸೆ ಪಾಯಸ ಸೇವಿಸಿದರೆ ನಿದ್ದೆಯೂ ಬರುತ್ತದೆ.

* ಹಸಿ ಹಲಸಂದಿ ಕಾಳನ್ನು ಬೆಲ್ಲದೊಂದಿಗೆ ಅಗಿದು ತಿಂದರೆ ನಿದ್ರೆ ಚೆನ್ನಾಗಿ ಬರುತ್ತದೆ.

* ಹುರುಳಿಕಾಳು ಮೊಳಕೆ ಸಾರನ್ನು ಸೇವಿಸಿದರೆ ದೇಹವು ತಂಪಾಗುವುದರೊಂದಿಗೆ ನಿದ್ರೆ ಚೆನ್ನಾಗಿ ಬರುತ್ತದೆ.

* ರಾತ್ರಿ ಮಲಗುವುದಕ್ಕೆ ಅರ್ಧ ಗಂಟೆ ಮುಂಚಿತವಾಗಿ ಬಿಸಿಯಾದ ಹಾಲಿಗೆ ಎರಡು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ನಿದ್ರೆ ಬರುತ್ತದೆ.

ಇದನ್ನೂ ಓದಿ: ಮಕ್ಕಳ ಜೊತೆಗೆ ಟ್ರಿಪ್ ಹೋಗುವಾಗ ಈ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಟ್ರಿಪ್ ಇನ್ನಷ್ಟು ವಂಡರ್‌ಫುಲ್!

* ನಿದ್ದೆ ಬಾರದಿದ್ದರೆ ಹಾಲಿಗೆ ಸ್ವಲ್ಪ ಕೇಸರಿ ಹಾಕಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.

* ಸೌತೆಕಾಯಿ ತಿರುಳನ್ನು ಅಂಗಾಲಿಗೆ ಚೆನ್ನಾಗಿ ಉಜ್ಜಿಕೊಂಡರೂ ನಿದ್ದೆ ಚೆನ್ನಾಗಿ ಬರುವುದರ ಜೊತೆಗೆ ದೇಹದ ತಂಪು ವೃದ್ಧಿಸುವುದು.

* ಸಬ್ಬಕ್ಕಿ ಸೊಪ್ಪನ್ನು ಬಸಿದು ಮಾಡಿದ ಸಾರನ್ನು ಉಪಯೋಗಿಸುತ್ತಿದ್ದರೆ ಚೆನ್ನಾಗಿ ನಿದ್ರೆ ಬರುವುದರ ಮೂಲಕ ಆರೋಗ್ಯವು ಸುಧಾರಿಸುತ್ತದೆ.

* ಪ್ರತಿ ವಾರವೂ ಒಂದೊಂದು ಬಾರಿ ಹರಳಣ್ಣೆಯಲ್ಲಿ ಅಭ್ಯಂಜನ ಸ್ನಾನ ಮಾಡುವುದರಿಂದ ನಿದ್ರೆ ಚೆನ್ನಾಗಿ ಬರುವುದರ ಜೊತೆಗೆ ದೇಹದ ಉಷ್ಣತೆಯೂ ಕಡಿಮೆಯಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ