AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಜೀವನದಲ್ಲಿ ಇಂತಹ ಜನರಿದ್ದರೆ ಅವರಿಂದ ಆದಷ್ಟು ದೂರವಿರಿ; ಯಾಕೆ ಗೊತ್ತಾ?

ಪ್ರತಿಯೊಬ್ಬರ ಜೀವನದಲ್ಲೂ ಹೊಸ ಹೊಸ ಜನರ ಪರಿಚಯವಾಗುತ್ತಲೇ ಇರುತ್ತಾರೆ. ಆದರೆ ಇಂತಹ ಕೆಲವೊಂದಿಷ್ಟು ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಬಂದರೆ ಅಥವಾ ಇದ್ದರೆ ಅವರ ಸಹವಾಸದಿಂದ ಆದಷ್ಟು ದೂರವಿರಬೇಕಂತೆ. ಏಕೆಂದರೆ ಇದರಿಂದ ನಿಮಗೆ ಬಹಳಷ್ಟು ತೊಂದರೆಯಾಗುತ್ತದೆ. ಹಾಗಿರುವಾಗ ಎಂತಹ ಜನರಿಂದ ದೂರವಿದ್ದಷ್ಟು ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ನಿಮ್ಮ ಜೀವನದಲ್ಲಿ ಇಂತಹ ಜನರಿದ್ದರೆ ಅವರಿಂದ ಆದಷ್ಟು ದೂರವಿರಿ; ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Sep 07, 2025 | 8:26 PM

Share

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಭಿನ್ನ ವಿಭಿನ್ನ ಜನರನ್ನು ಭೇಟಿಯಾಗುತ್ತಾರೆ, ಸ್ನೇಹವನ್ನು (Friendship) ಬೆಳೆಸಿಕೊಳ್ಳುತ್ತಾರೆ. ಇದರಲ್ಲಿ ಕೆಲವರು ನಮ್ಮ ಒಳ್ಳೆಯದನ್ನು ಬಯಸುವವರು ಇದ್ದರೆ, ಇನ್ನೂ ಕೆಲವರು ಕೇಡು ಬಯಸುವವರಿರುತ್ತಾರೆ, ಅಸೂಯೆ ಪಡುವವರಿರುತ್ತಾರೆ. ಇಂತಹ ನಕಲಿ ಜನರಿಂದ ಸಾಧ್ಯವಾದಷ್ಟು ದೂರವಿದ್ದರೆ ಉತ್ತಮ. ಏಕೆಂದರೆ ಇಂತಹ ಜನರಿಂದ ಜೀವನವೇ ಹಾಳಾಗುವ ಸಾಧ್ಯವಿರುತ್ತದೆ. ಹಾಗಿದ್ರೆ ಜೀವನದಲ್ಲಿ ಎಂತಹ ಜನರ ಸ್ನೇಹವನ್ನು ಬೆಳೆಸಬಾರದು, ಯಾರಿಂದ ದೂರವಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಇಂತಹ ಜನರಿಂದ ಸಾಧ್ಯವಾದಷ್ಟು ದೂರವಿರುವುದು ಉತ್ತಮ:

ಸ್ವಾರ್ಥಿ ಜನರು: ಸ್ವಾರ್ಥಿ ಜನರಿಂದ ನೀವು ಸಾಧ್ಯವಾದಷ್ಟು ದೂರ ಇರುವುದೇ ಉತ್ತಮ. ಏಕೆಂದರೆ ಇಂತಹ  ಜನರು ತಮ್ಮ ಸ್ವಂತ ಲಾಭಕ್ಕಾಗಿ ಮಾತ್ರ ನಿಮ್ಮ ಬಳಿಗೆ ಬರುತ್ತಾರೆ, ನಿಮ್ಮ ಕಷ್ಟದ ಸಮಯದಲ್ಲಿ ಅವರು ನಿಮ್ಮ ಜೊತೆಯಾಗಿ ನಿಲ್ಲುವುದಿಲ್ಲ.  ಅಲ್ಲದೆ ಈ ಜನರು ನಿಮ್ಮ ಬಗ್ಗೆ ಎಂದಿಗೂ ಒಳ್ಳೆಯದನ್ನು ಯೋಚಿಸಲು ಸಾಧ್ಯವಿಲ್ಲ.

ಭಾವನೆಗಳೊಂದಿಗೆ ಆಟವಾಡುವವರು:  ನಿಮ್ಮ ಭಾವನೆಗಳ ಜೊತೆ ಆಟವಾಡುವವರು, ಭಾವನೆಗಳಿಗೆ ನೋವುಂಟು ಮಾಡುವ ಜನರಿಂದ ಸಾಧ್ಯವಾದಷ್ಟು ದೂರವಿರಿ.  ಏಕೆಂದರೆ ಇಂತಹ ಜನರಿಂದ ಪದೇ ಪದೇ ನಿಮ್ಮ ಮನಸ್ಸಿಗೆ ನೋವಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ
Image
ಈ ಅಭ್ಯಾಸಗಳು ಒಬ್ಬ ವ್ಯಕ್ತಿಯನ್ನು ಖಂಡಿತವಾಗಿ ಬಡವನನ್ನಾಗಿ ಮಾಡುತ್ತದೆ
Image
ಸಂಗಾತಿಗಳ ಈ ಅಭ್ಯಾಸಗಳೇ ಸಂಬಂಧ ಹಾಳಾಗಲು ಮುಖ್ಯ ಕಾರಣ
Image
ಈ ಎರಡು ವಿಷಯಗಳಿಗೆ ಹೆದರುವವರು ಎಂದಿಗೂ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ
Image
ಈ ನಾಲ್ಕು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಜೀವನದ ದುಃಖವೆಲ್ಲಾ ಮಾಯವಾಗುತ್ತದೆ

ನಕಾರಾತ್ಮಕ ಚಿಂತಕರು: ಎಲ್ಲದರಲ್ಲೂ ತಪ್ಪು ಹುಡುಕುವವರು, ಪ್ರತಿ ಹೆಜ್ಜೆಯಲ್ಲೂ ನಿಮಗೆ ಪ್ರೇರಣೆ ನೀಡದೆ ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರಿ. ಏಕೆಂದರೆ ಇಂತಹ ಜನರಿಂದ ನಿಮ್ಮ ಜೀವನವೇ ನಕಾರಾತ್ಮಕತೆಯಿಂದ ತುಂಬುವ ಸಾಧ್ಯತೆ ಇರುತ್ತವೆ. ಹಾಗಾಗಿ ಸಕಾರಾತ್ಮಕ ಮನೋಭಾವವನ್ನು ಹೊಂದಿರುವ ಜನರೊಂದಿಗೆ ಸ್ನೇಹ ಬೆಳೆಸಿ.

ಇದನ್ನೂ ಓದಿ: ಅಭ್ಯಾಸಗಳು ಒಬ್ಬ ವ್ಯಕ್ತಿಯನ್ನು ಖಂಡಿತವಾಗಿ ಬಡವನನ್ನಾಗಿ ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ

ಅಸೂಯೆ ಪಡುವವರು: ನಿಮ್ಮ ಪ್ರಗತಿ, ಯಶಸ್ಸಿನ  ಬಗ್ಗೆ ಸಂತೋಷಪಡುವ ಬದಲು, ನಿಮ್ಮ ಸಂತೋಷವನ್ನು ಕಂಡು ಅಸೂಯೆ ಪಟ್ಟು ನಕಾರಾತ್ಮಕವಾಗಿ ಮಾತನಾಡುವವರು. ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಂದ ನೀವು ದೂರವಿದ್ದಷ್ಟು ಒಳ್ಳೆಯದು.

ಅಧಿಕಾರ ಚಲಾಯಿಸುವವರು: ಪ್ರತಿಯೊಂದು ನಿರ್ಧಾರದಲ್ಲೂ ಹಸ್ತಕ್ಷೇಪ ಮಾಡುವ, ನಿಮ್ಮ ಆಲೋಚನೆಗಳು ಮತ್ತು ಆಯ್ಕೆಗಳನ್ನು ಪ್ರಶ್ನಿಸುವ ಸ್ನೇಹಿತರು ನಿಮ್ಮನ್ನು ಮುಂದುವರಿಯಲು ಬಿಡುವುದಿಲ್ಲ. ಅಂತಹ ಜನರು ಪ್ರತಿಯೊಂದು ಹೆಜ್ಜೆಯಲ್ಲೂ ನಿಮ್ಮ ಮೇಲೆ ಅಧಿಕಾರವನ್ನು ಚಲಾಯಿಸುತ್ತಾರೆ. ಸುತ್ತಮುತ್ತ ಇಂತಹ ಜನರಿದ್ದರೆ, ವಾತಾವರಣವೇ ಉಸಿರುಗಟ್ಟಿದಂತಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ