
ಭಾರತೀಯರು ಪ್ರತಿಯೊಂದು ಸಂಬಂಧಕ್ಕೂ (Relationship) ಹೆಚ್ಚು ಮಹತ್ವ ನೀಡುತ್ತಾರೆ. ಆದರೆ ಈಗಿನ ಯುವಪೀಳಿಗೆಯೂ ಆಧುನಿಕತೆಗೆ ಒಗ್ಗಿಕೊಳ್ಳುತ್ತಿದ್ದಂತೆ ಸಂಬಂಧಗಳಿಗೆ ಬೆಲೆ ನೀಡುತ್ತಿಲ್ಲ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಅಕ್ರಮ ಸಂಬಂಧ, ದಾಂಪತ್ಯದಲ್ಲಿ ಬಿರುಕು ಹಾಗೂ ಅನ್ಯೋನ್ಯತೆಯ ಕೊರತೆ ಹೆಚ್ಚುತ್ತಲೇ ಇದೆ. ಆದರೆ ಇದೀಗ ಗ್ಲೀಡನ್ (Gleeden) ಬಹಿರಂಗ ಪಡಿಸಿರುವ ಅಧ್ಯಯನದ ವರದಿಯಲ್ಲಿ ಬೆಂಗಳೂರು ಅತೀ ಹೆಚ್ಚು ಅಕ್ರಮ ಸಂಬಂಧ ಹೊಂದಿರುವ ನಗರ ಎನ್ನುವ ಆಘಾತಕಾರಿ ಅಂಶವು ಹೊರಬಿದ್ದಿದೆ.
ಗ್ಲೀಡನ್ ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧ ಹಾಗೂ ದಾಂಪತ್ಯ ದ್ರೋಹ ಹೊಂದಿರುವ ಟಾಪ್ ಐದು ನಗರಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಸಾಲಿನಲ್ಲಿ ಮೊದಲ ಸ್ಥಾನವನ್ನು ಬೆಂಗಳೂರು ಪಡೆದುಕೊಂಡರೆ, ಉಳಿದ ನಾಲ್ಕು ಸ್ಥಾನಗಳನ್ನು ಕ್ರಮವಾಗಿ ಮುಂಬೈ, ಕೋಲ್ಕತಾ, ದೆಹಲಿ ಹಾಗೂ ಪುಣೆ ಪಡೆದುಕೊಂಡಿವೆ.
ದಾಂಪತ್ಯ ದ್ರೋಹ, ಅಕ್ರಮ ಸಂಬಂಧ ಹೆಚ್ಚಾಗಲು ಭಾವನಾತ್ಮಕ ಅತೃಪ್ತಿ, ವೈಯಕ್ತಿಕ ಅಗತ್ಯಗಳನ್ನು ಪೂರೈಕೆಯ ಕೊರತೆ, ದೈಹಿಕ ಹಾಗೂ ಮಾನಸಿಕ ಅನ್ಯೋನ್ಯತೆಯ ಕೊರತೆ, ವಿವಾಹೇತರ ಅಪ್ಲಿಕೇಶನ್‌ಗಳ ಬಳಕೆಯೇ ಕಾರಣ ಎಂದು ವಿವಾಹ ವಿಚ್ಛೇದನ ಪ್ರಕರಣಗಳನ್ನು ನಿರ್ವಹಿಸುವ ವಕೀಲರು ಹಾಗೂ ಸಂಬಂಧ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ:ದಾಂಪತ್ಯ ಜೀವನ ಸುಖವಾಗಿ ಸಾಗಲು ಪತಿ-ಪತ್ನಿ ಪ್ರತಿನಿತ್ಯ ಈ ಕೆಲಸಗಳನ್ನು ಮಾಡಬೇಕು
ಗ್ಲೀಡನ್‌ನ ಭಾರತದ ವ್ಯವಸ್ಥಾಪಕಿ ಸಿಬಿಲ್ ಶಿಡೆಲ್ ಅವರು, ಭಾರತದಲ್ಲಿ 30 ಲಕ್ಷ ಜನರರು ಈ ವಿವಾಹೇತರು ಆ್ಯಪ್ ಗ್ಲೀಡನ್ ಬಳಸುತ್ತಿದ್ದಾರೆ. ಅದರಲ್ಲಿ ಶೇ. 17 ರಷ್ಟು ಮಂದಿ ಬೆಂಗಳೂರಿನವರೇ ಆಗಿದ್ದಾರೆ. ಇವರಲ್ಲಿ ಹೆಚ್ಚಿನವರು 30 ರಿಂದ 45 ವರ್ಷ ವಯಸ್ಸಿನ ವೃತ್ತಿಪರರೇ ಆಗಿದ್ದಾರೆ. ಈ ಆ್ಯಪ್‌ನ ಬಳಸುವವರಲ್ಲಿ ಶೇ. 65 ರಷ್ಟು ಪುರುಷರಿದ್ದಾರೆ. ಶೇಕಡಾ 35 ರಷ್ಟು ಮಹಿಳೆಯರು ಈ ಆ್ಯಪ್ ಬಳಸುತ್ತಿದ್ದಾರೆ, ಇನ್ನು ಆ್ಯಪ್ ಬಳಸುವವರು ಹೆಚ್ಚಾಗಿ ಹಣಕಾಸು, ಕಾನೂನು, ಎಂಜಿನಿಯರಿಂಗ್ ಮತ್ತು ಉದ್ಯಮಶೀಲತೆಯಂತಹ ಹಿನ್ನಲೆಯಲ್ಲಿ ಬಂದವರು ಈ ಅಧ್ಯಯನದ ವರದಿಯ ಬಳಿಕ ದೈಹಿಕ ಸಂಪರ್ಕಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಬೆಂಬಲವನ್ನು ಹುಡುಕುವ ಸಲುವಾಗಿಯೇ ಈ ಆ್ಯಪ್ ಬಳಕೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ