International Everest Day 2024: ಮೌಂಟ್ ಎವರೆಸ್ಟ್ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳಿವು
ಪ್ರತಿ ವರ್ಷ ಮೇ 29 ರಂದು ಅಂತಾರಾಷ್ಟ್ರೀಯ ಎವರೆಸ್ಟ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ ಮತ್ತು ನೇಪಾಳದ ತೇನ್ಸಿಂಗ್ ನಾರ್ಗೆ ಶೆರ್ಪಾ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ 1953 ರಲ್ಲಿ ಏರಿದರು. ಈ ದಿನದಂದು ಅವರಿಬ್ಬರ ಈ ಸಾಧನೆಯನ್ನು ನೆನಪಿಸಲಾಗುತ್ತದೆ. ಈ ದಿನವನ್ನು ಆಚರಿಸುವುದರ ಹಿಂದಿನ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.
ಮೌಂಟ್ ಎವರೆಸ್ಟ್ ಈ ಹೆಸರು ಕೇಳುವಾಗಲೇ ಮೈಮನ ಜುಮ್ಮ್ ಎನ್ನುವಂತಹ ಅನುಭವಾಗುತ್ತದೆ. ವಿಶ್ವದ ಅತಿ ಎತ್ತರದ ಪರ್ವತವನ್ನು ಹತ್ತುವುದಕ್ಕೂ ಗಟ್ಟಿ ಗುಂಡಿಗೆ ಇರಲೇಬೇಕು. ಈಗಾಗಲೇ ಮೌಂಟ್ ಎವರೆಸ್ಟ್ ಹತ್ತಲು ಹೋಗಿ ಸಾವಿನ ಕದವನ್ನು ತಟ್ಟಿದವರು ಲೆಕ್ಕವಿಲ್ಲದಷ್ಟು ಜನರು. ಆದರೆ ಇವತ್ತಿಗೂ ಮೌಂಟ್ ಎವರೆಸ್ಟ್ ಪರ್ವತವನ್ನು ಏರುತ್ತಾ ಸಾಧನೆ ಮಾಡುತ್ತಿದ್ದಾರೆ. ಅದಲ್ಲದೇ, ಪ್ರತಿ ವರ್ಷ ಮೇ 29 ರಂದು ಅಂತಾರಾಷ್ಟ್ರೀಯ ಎವರೆಸ್ಟ್ ದಿನವನ್ನು ಆಚರಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಎವರೆಸ್ಟ್ ದಿನದ ಇತಿಹಾಸ ಹಾಗೂ ಮಹತ್ವ:
ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ ಹಾಗೂ ನೇಪಾಳದ ತೇನ್ಸಿಂಗ್ ನಾರ್ಗೆ ಶೆರ್ಪಾ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಏರಿದ ದಿನವೇ ಮೇ 29. ಹೌದು, ನೇಪಾಳದ ಶೆರ್ಪಾ ತೇನ್ಸಿಂಗ್ ನಾರ್ಗೆ ಮತ್ತು ನ್ಯೂಜಿಲೆಂಡ್‌ನ ಎಡ್ಮಂಡ್ ಹಿಲರಿ ಅವರು ಮೇ 29, 1953 ರಂದು ಬೆಳಿಗ್ಗೆ 11:30 ಕ್ಕೆ ಸಮುದ್ರ ಮಟ್ಟದಿಂದ 29,029 ಅಡಿ ಎತ್ತರದ ಮೌಂಟ್ ಎವರೆಸ್ಟನ್ನು ಏರಿದ್ದರು. ತೆನ್ಸಿಂಗ್ ನಾರ್ಗೆ ಅವರ ನಿಜವಾದ ಜನ್ಮ ದಿನಾಂಕವು ತಿಳಿದಿಲ್ಲ. ಹೀಗಾಗಿ 2008 ರಲ್ಲಿ ಹಿಲರಿ ನಿಧನರಾದ ನಂತರ, ನಾರ್ಗೆ ಅವರ ಶೃಂಗಸಭೆಯ ನೆನಪಿಗಾಗಿ ಈ ದಿನವನ್ನು ಅಂತರಾಷ್ಟ್ರೀಯ ಎವರೆಸ್ಟ್ ದಿನವೆಂದು ಆಚರಿಸಲು ನಿರ್ಧರಿಸಲಾಯಿತು. ಈ ದಿನವು ಅವರಿಬ್ಬರ ಮೊದಲ ಗಮನಾರ್ಹ ಸಾಧನೆಯನ್ನು ಸ್ಮರಿಸುತ್ತದೆ. ಹಾಗೂ ಪರ್ವತಾರೋಹಣದ ಮಹತ್ವವನ್ನು ತಿಳಿಸಲಾಗುತ್ತದೆ.
ಇದನ್ನೂ ಓದಿ: ಅನಂತ್ ಅಂಬಾನಿಯ 2ನೇ ಪ್ರೀ ವೆಡ್ಡಿಂಗ್ ಸಂಭ್ರಮದ ಐಷಾರಾಮಿ ಹಡಗು ಹೇಗಿದೆ ನೋಡಿ
ಮೌಂಟ್ ಎವರೆಸ್ಟ್ ಬಗ್ಗೆ ಗೊತ್ತಿರದ ಕುತೂಹಲಕಾರಿ ವಿಚಾರಗಳು
- ಮೌಂಟ್ ಎವರೆಸ್ಟ್‌ನ ದಕ್ಷಿಣ ಭಾಗ ನೇಪಾಳಕ್ಕೆ ಹಾಗೂ ಉತ್ತರ ಭಾಗ ಚೀನಾಗೆ ಸೇರಿದೆ.
- ಮೌಂಟ್ ಎವರೆಸ್ಟ್ ಅತಿ ಎತ್ತರದ ಶಿಖರವಲ್ಲ. ಎವರೆಸ್ಟ್ ಎತ್ತರ 8,848.86 ಮೀಟರ್ ಆಗಿದೆ. ಹವಾಯಿನ ಮೌನಕೀ ಪರ್ವತ 10,210 ಮೀ. ಎತ್ತರದಲ್ಲಿದೆ. ಈ ಪರ್ವತವು ಸಮುದ್ರ ಮಟ್ಟದಿಂದ ಕೇವಲ 4205 ಮೀ ಎತ್ತರದಲ್ಲಿದೆ.
- ಎವರೆಸ್ಟ್‌ನ ಎಂಟು ಸಾವಿರ ಮೀಟರ್ ಸಾವಿನ ವಲಯ ಎಂದು ಕರೆಯಲಾಗಿದೆ.
- ಮೌಂಟ್ ಎವರೆಸ್ಟ್ ಪ್ರತಿ ನೂರು ವರ್ಷಕ್ಕೆ 40 ಸೆಂ.ಮೀ. ಬೆಳೆಯುತ್ತದೆ.
- ಮೌಂಟ್ ಎವರೆಸ್ಟ್ 60 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪರ್ವತವಾಗಿದೆ.
- ಈ ಮೌಂಟ್ ಎವರೆಸ್ಟ್ ಪರ್ವತವು ಕೊಳಕಾದ ಪರ್ವತ ಎನಿಸಿಕೊಂಡಿದೆ. ಇಲ್ಲಿ ಬಳಸದೆ ಬಿಟ್ಟ ವಸ್ತುಗಳು, ಪ್ಲಾಸ್ಟಿಕ್ ಗಳು ಸೇರಿದಂತೆ ಪರಿಸರವನ್ನು ಹಾಳು ಮಾಡಿಬಿಟ್ಟಿವೆ.
- ಮೌಂಟ್ ಎವರೆಸ್ಟ್‌ನ ತುದಿಯಲ್ಲಿ ಜೀವಿಸಲು ಸಾಧ್ಯವಿಲ್ಲ.
- ಎವರೆಸ್ಟ್ ಪರ್ವತವನ್ನು ಏರಿ ತುತ್ತತುದಿ ತಲುಪಲು 10 ವಾರ ಬೇಕಾಗುತ್ತದೆ.
- ಮೌಂಟ್ ಎವರೆಸ್ಟ್ ಹತ್ತಲು ತಗಲುವ ವೆಚ್ಚವು ಬರೋಬ್ಬರಿ 22 ಲಕ್ಷ ರೂಪಾಯಿಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ