AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breast Feeding: ನಿಮ್ಮ ಮಗುವಿಗೆ ದಿನಕ್ಕೆ ಎಷ್ಟು ಗಂಟೆ ಎದೆ ಹಾಲುಣಿಸಬೇಕು?

ಎದೆ ಹಾಲು ಅಮೃತಕ್ಕೆ ಸಮ ಎನ್ನುವ ಮಾತಿದೆ. ಹುಟ್ಟಿದ ಮಗುವು ಆರೋಗ್ಯಯುತವಾಗಿ ಬೆಳೆಯಲು ತಾಯಿಯ ಎದೆ ಹಾಲು ಅತ್ಯವಶ್ಯಕವಾಗಿರುವ ಆಹಾರವಾಗಿದೆ. ಆದರೆ ಇಂದಿನ ಯುವತಿಯರು ಎದೆಹಾಲು ನೀಡುವುದರಿಂದ ಸೌಂದರ್ಯವು ಹಾಳಾಗುತ್ತದೆ ಎಂದುಕೊಳ್ಳುವವರೇ ಹೆಚ್ಚು. ಒಂದು ವೇಳೆ ನಿಮ್ಮ ಮಗು ಅಳುತ್ತದೆಯೆಂದು ಹಾಲುಣಿಸುತ್ತಾ ಇರಬೇಡಿ. ಮಗುವಿಗೆ ಎದೆಹಾಲನ್ನು ಇಂತಿಷ್ಟು ಗಂಟೆಗಳ ಕಾಲ ಮಾತ್ರ ನೀಡಿದರೆ ಒಳ್ಳೆಯದು.

Breast Feeding: ನಿಮ್ಮ ಮಗುವಿಗೆ ದಿನಕ್ಕೆ ಎಷ್ಟು ಗಂಟೆ ಎದೆ ಹಾಲುಣಿಸಬೇಕು?
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 28, 2024 | 3:39 PM

Share

ಹೆಣ್ಣು ತಾಯಿಯಾಗುವುದು ಆಕೆಯ ಜೀವನದ ಬಹುದೊಡ್ಡ ಹಂತವಾಗಿದೆ. ತಾಯ್ತತನವೆನ್ನುವುದು ಪ್ರಕೃತಿದತ್ತವಾಗಿ ಹೆಣ್ಣಿಗೆ ಸಿಕ್ಕಿರುವ ವರವಾಗಿದೆ. ಹುಟ್ಟಿದ ಮಗುವಿಗೆ ಎದೆ ಹಾಲು ಕುಡಿಸುವುದು ಕೂಡ ಸ್ವಾಭಾವಿಕ ಕ್ರಿಯೆಯಾಗಿದ್ದು, ತಾಯಿ ಹಾಗೂ ಮಗುವಿನ ಬಂಧವು ಬೆಳೆಯುತ್ತದೆ. ಅ ಆದರೆ ಮೊದಲು ತಾಯಿಯಾಗುವವರಲ್ಲಿ ಕೆಲವು ಅನುಮಾನಗಳು ಕಾಡುತ್ತದೆ. ತನ್ನ ಮಗುವನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನಾ, ಎದೆಹಾಲು ಸಾಕಾಗುತ್ತದೆಯೇ ಹೀಗೆ ಸಾಕಷ್ಟು ಪ್ರಶ್ನೆಗಳು ಕಾಡುತ್ತಿರುತ್ತದೆ. ಕೆಲವರು ಎದೆಹಾಲುಯಿದೆಯೆಂದು ಅತಿಯಾಗಿ ಹಾಲನ್ನು ನೀಡುತ್ತಾರೆ. ಹೀಗೆ ಮಾಡುವುದರಿಂದ ಮಗುವಿನ ಆರೋಗ್ಯವು ಕೆಡಬಹುದು.

ಮಗುವಿಗೆ ಎಷ್ಟು ಗಂಟೆಗಳಿಗೊಮ್ಮೆ ಹಾಲುಣಿಸಬೇಕು?

ಹಾಲು ಚೆನ್ನಾಗಿ ಉತ್ಪಾದನೆ ಆಗಬೇಕಾದರರೆ ಮಗುವಿಗೆ ನಿತ್ಯವೂ ಎದೆ ಹಾಲು ಕುಡಿಸಬೇಕು. ಪ್ರತೀ ಎರಡೂವರೆ ಗಂಟೆಗೊಮ್ಮೆ, ಎರಡೂ ಬದಿಯಿಂದ 20 ನಿಮಿಷ ಹಾಲುಣಿಸಬೇಕು. ಮಗುವಿಗೆ ಎರಡು ತಿಂಗಳು ತುಂಬಿದಾಗ ಪ್ರತಿ 3-4 ಗಂಟೆಗಳಿಗೊಮ್ಮೆ ಬೇಕಾಗುತ್ತದೆ. ಮಗುವಿಗೆ ಆರು ತಿಂಗಳು ತುಂಬುವ ವೇಳೆಗೆ ಪ್ರತಿ ನಾಲ್ಕು-ಐದು ಗಂಟೆಗಳಿಗೊಮ್ಮೆ ಹಾಲುಣಿಸಬೇಕು. ಆದರೆ ತಾಯಿಯು ಮಗುವಿಗೆ ಎರಡು ವರ್ಷಗಳವರೆಗೆ ಕಡ್ಡಾಯವಾಗಿ ಹಾಲುಣಿಸಲೇಬೇಕು.

ಇದನ್ನೂ ಓದಿ: ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆ

ಮಗುವು ಈ ಸೂಚನೆ ನೀಡಿದರೆ ಹಾಲುಣಿಸುವುದನ್ನು ನಿಲ್ಲಿಸಿ

* ಮಗುವಿನ ತೂಕವು ಅಸಾಮಾನ್ಯವಾಗಿ ಹೆಚ್ಚುತ್ತಿರುವಂತೆ ತೋರುತ್ತಿದ್ದರೆ, ಅದು ಹಾಲಿನ ಅತಿಯಾದ ಸೇವನೆಯ ಪರಿಣಾಮವಾಗಿದೆ.

* ಮಗು ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಅತಿಯಾದ ಹಾಲುಣಿಸುವ ಪರಿಣಾಮವಾಗಿದೆ.

* ಅತಿಯಾಗಿ ಹಾಲುಣಿಸಿದರೆ ಹೊಟ್ಟೆ ಉಬ್ಬರ, ಅರ್ಜಿರ್ಣ ಹಾಗೂ ಗ್ಯಾಸ್ಟಿಕ್ ನಂತಹ ಸಮಸ್ಯೆಯು ಕಾಡುತ್ತದೆ.

* ಹಾಲು ಕುಡಿಯುವಾಗ ಅಳುವುದು ಕೂಡ ಹೊಟ್ಟೆ ತುಂಬಿದೆ ಎನ್ನುವುದರ ಸೂಚಿಸುತ್ತದೆ.

* ಮಗುವು ಬಾಯಿಯಿಂದ ಹಾಲನ್ನು ಹೊರಹಾಕುತ್ತಿದ್ದರೆ ಮಗುವಿಗೆ ಹೊಟ್ಟೆ ತುಂಬಿದೆ ಎಂದರ್ಥ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ