International Nurses Day 2026: ರೋಗಿಗಳ ಆರೈಕೆಗಾಗಿ ಹಗಲಿರುಳು ಶ್ರಮಿಸುವ ದಾದಿಯರಿಗೆ ನಮನ

ರೋಗಿಗಳ ಆರೈಕೆ ಮಾಡುವುದರ ಜೊತೆಗೆ ಅವರಿಗೆ ಮಾನಸಿಕ ಮತ್ತು ಭಾವನಾತ್ಮಕ ಬೆಂಬಲ ನೀಡುವ ಮೂಲಕ ಜೀವಗಳನ್ನು ಉಳಿಸುವಲ್ಲಿ ನರ್ಸ್‌ಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ದಾದಿಯರು ರೋಗಿಗಳ ಆರೈಕೆಗಾಗಿ ಹಗಲಿರುಳು ಶ್ರಮಿಸುತ್ತಾರೆ. ಇವರ ಈ ಸೇವೆ, ಪರಿಶ್ರಮಕ್ಕೆ ಗೌರವ ಸಲ್ಲಿಸಲೆಂದೇ ಪ್ರತಿವರ್ಷ ಮೇ 12 ರಂದು ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ನರ್ಸ್‌ಗಳಿಗೆ ಕೃತಜ್ಞತೆ ಸಲ್ಲಿಸಲು ಮೀಸಲಾದ ಈ ದಿನದ ಇತಿಹಾಸ, ಮಹತ್ವವನ್ನು ತಿಳಿಯೋಣ ಬನ್ನಿ.

International Nurses Day 2026: ರೋಗಿಗಳ ಆರೈಕೆಗಾಗಿ ಹಗಲಿರುಳು ಶ್ರಮಿಸುವ ದಾದಿಯರಿಗೆ ನಮನ
ಅಂತಾರಾಷ್ಟ್ರೀಯ ದಾದಿಯರ ದಿನ
Image Credit source: png magic

Updated on: May 12, 2026 | 10:08 AM

ಅಮೂಲ್ಯವಾದ ಜೀವಗಳನ್ನು ಉಳಿಸುವಲ್ಲಿ ವೈದ್ಯರಷ್ಟೇ ನರ್ಸ್‌ಗಳು (Nurses) ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಹೌದು ರೋಗಿಗಳು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಔಷಧಿಗಳು ಮತ್ತು  ವೈದ್ಯರ ಸೂಕ್ತ ಚಿಕಿತ್ಸೆಯು ಮಹತ್ವದ ಪಾತ್ರ ವಹಿಸುವಂತೆ ರೋಗಿಗಳು ಬೇಗನೇ ಚೇತರಿಸಿಕೊಳ್ಳಲು ಸರಿಯಾದ ಆರೈಕೆಯೂ ಮುಖ್ಯ. ರೋಗಿಗಳಿಗೆ ಈ ಸರಿಯಾದ ಆರೈಕೆ, ಉಪಚಾರ ನೀಡುವವರು ದಾದಿಯರು. ಇವರು ಅತ್ಯಂತ ನಿಷ್ಠೆಯಿಂದ ಪ್ರಾಮಾಣಿಕವಾಗಿ ಜೀವ ರಕ್ಷಣೆ ಮಾಡುವ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ದಾದಿಯರು ಆರೋಗ್ಯ ವ್ಯವಸ್ಥೆಯ ಆಧಾರಸ್ತಂಭ ಇದ್ದಂತೆ. ಜನರ ಆರೋಗ್ಯ ರಕ್ಷಣೆಗಾಗಿ ಹಗಲು ರಾತ್ರಿಯೆನ್ನದೆ ಶ್ರಮಿಸುವ, ಸೇವೆ ಸಲ್ಲಿಸುವ ದಾದಿಯರಿಗೆ ಹಾಗೂ ಅವರ ಸೇವೆಗೆ ಗೌರ ಸಲ್ಲಿಸಲು ಪ್ರತಿ ವರ್ಷ ಮೇ 12 ರಂದು ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವ ಏನೆಂಬುದನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ದಾದಿಯರ ದಿನದ ಇತಿಹಾಸವೇನು?

ಪ್ರತಿ ವರ್ಷ ಮೇ 12 ರಂದೇ  ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. 1820 ರ ಮೇ 12 ರಂದು  ಆಧುನಿಕ ನರ್ಸಿಂಗ್‌ನ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಜನಿಸಿದರು. ಇವರ ಜನ್ಮ ದಿನದ ಸವಿ ನೆನಪಿಗಾಗಿಯೇ 1974 ರಲ್ಲಿ ಅಂತಾರಾಷ್ಟ್ರೀಯ ದಾದಿಯರ ಮಂಡಳಿಯು ದಾದಿಯರ ದಿನವನ್ನು ಆಚರಿಸಲು ಪ್ರಾರಂಭಿಸಿತು.

ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಅಧಿಕಾ ಡೊರೊಥಿ ಸದರ್ಲ್ಯಾಂಡ್‌ ಈ ದಿನವನ್ನು ಆಚರಿಸುವ ಕಲ್ಪನೆಯನ್ನು ಬಹು ಹಿಂದೆಯೇ ಪ್ರಸ್ತಾಪಿಸಿದ್ದರು. ನಂತರ 1974 ರಲ್ಲಿ ಸಮಾಜ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಕೊಡುಗೆಯನ್ನು ಸ್ಮರಿಸಲು, ಈ ವೃತ್ತಿಯನ್ನು ಉತ್ತೇಜಿಸಲು ಮತ್ತು ದಾದಿಯರನ್ನು ಗೌರವಿಸಲು ಇಂಟರ್‌ನ್ಯಾಶನಲ್‌ ಕೌನ್ಸಿಲ್‌ ಆಫ್‌ ನರ್ಸಸ್‌ ಮಂಡಳಿ ಈ ದಿನವನ್ನು ಆಚರಿಸಲು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ ಅಪಾರ

ಅಂತಾರಾಷ್ಟ್ರೀಯ ದಾದಿಯರ ದಿನದ ಮಹತ್ವವೇನು?

  • ಅಂತಾರಾಷ್ಟ್ರೀಯ ದಾದಿಯರ ದಿನವು ಸಮಾಜದಲ್ಲಿ ದಾದಿಯರ ಮಹತ್ವ ಮತ್ತು ರೋಗಿಗಳ ಜೀವನದಲ್ಲಿ ಬದಲಾವಣೆ, ಹೊಸ ಬೆಳಕು ತರುವಲ್ಲಿ ದಾದಿಯರ ಪಾತ್ರದ ಬಗ್ಗೆ ತಿಳಿಸುತ್ತದೆ.
  • ಅಂತರರಾಷ್ಟ್ರೀಯ ದಾದಿಯರ ದಿನವು ದಾದಿಯರ ಪ್ರಯತ್ನಗಳು ಮತ್ತು ಕೊಡುಗೆಗಳನ್ನು ಗೌರವಿಸುವ ಸಂದರ್ಭ ಮಾತ್ರವಲ್ಲದೆ, ದಾದಿಯರ ವೃತ್ತಿಯ ಮಹತ್ವವನ್ನು ಉತ್ತೇಜಿಸುವ ಸಂದರ್ಭವಾಗಿದೆ.
  • ಈ ದಿನದ ಮೂಲಕ ದಾದಿಯರ ಕಠಿಣ ಪರಿಶ್ರಮ, ಸೇವೆ, ಸಮರ್ಪಣೆಗೆ ಧನ್ಯವಾದ ತಿಳಿಸಬಹದು
  • ಈ ವಿಶೇಷ ದಿನ ಪ್ರಪಂಚದಾದ್ಯಂತ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳು ದಾದಿಯರನ್ನು ಅಥವಾ ನರ್ಸಿಂಗ್‌ ವೃತ್ತಿಪರರನ್ನು ಗೌರವಿಸಲು ಹಲವಾರು ಸನ್ಮಾನ ಕಾರ್ಯಕ್ರಮಗಳು, ಸೆಮಿನಾರ್‌ಗಳು, ಅಭಿಯಾನಗಳನ್ನು ಆಯೋಜಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us