International Yoga Day 2021: ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುವ ಐದು ಯೋಗಾಸನ

| Updated By: preethi shettigar

Updated on: Jun 15, 2021 | 12:09 PM

ಈ 5 ಯೋಗ ಭಂಗಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಶೀತ, ಕೆಮ್ಮಿನಂತಹ ಸಮಸ್ಯೆಯಿಂದ ನಮ್ಮನ್ನು ದೂರವಿರಿಸುತ್ತದೆ. ನಮ್ಮ ಸುತ್ತಮುತ್ತಲ ವಾತಾವರಣ ಈಗ ಅಷ್ಟು ಸುರಕ್ಷಿತವಾಗಿಲ್ಲ. ಹೀಗಾಗಿ ಯಾವುದೇ ಕಾಯಿಲೆಯೂ ನಮ್ಮ ಮೇಲೆ ಪರಿಣಾಮ ಬೀರದಂತೆ ಈ ಯೋಗಾಭ್ಯಾಸವು ನಮ್ಮನ್ನು ಕಾಯುತ್ತದೆ.

International Yoga Day 2021: ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುವ ಐದು ಯೋಗಾಸನ
ಸಾಂದರ್ಭಿಕ ಚಿತ್ರ
Follow us on

ಅಂತರರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. 2014 ಸೆಪ್ಟೆಂಬರ್​ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಯೋಗ ದಿನಾಚರಣೆಯನ್ನು ಆಚರಿಸುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದರು. ಅಂತೆಯೇ ಮೊದಲ ಬಾರಿಗೆ 2015 ರಂದು ಈ ಆಚರಣೆಗೆ ಜಾರಿಗೆ ಬಂದಿದ್ದು, ವಿಶ್ವದಾದ್ಯಂತ ಜೂನ್ 21ಅನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಯೋಗದ ಅಭ್ಯಾಸ ಇಂದು ನಿನ್ನೆಯದಲ್ಲ ಪುರಾತನ ಕಾಲದಿಂದಲೂ ಇದಕ್ಕೆ ತನ್ನದೇ ಆದ ಮಹತ್ವ ಇದೆ. ಯೋಗ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಕೂಡ ಅಷ್ಟೇ ಅವಶ್ಯಕವಾಗಿದೆ. ಹೀಗಾಗಿ ಮಾಸಿಕವಾಗಿ ಕುಗ್ಗಿರುವವರು ಮತ್ತು ದೇಹವನ್ನು ಅರೋಗ್ಯಯುತವಾಗಿಡಲು ಈಗಲೂ ಹಲವರು ಯೋಗದ ಮೊರೆ ಹೋಗಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನ ಹತ್ತಿರ ಬರುತ್ತಿದ್ದಂತೆ ನಾವು ಒಂದಷ್ಟು ಯೋಗಾಭ್ಯಾಸದ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಅದರಲ್ಲೂ ಈ ಬಾರಿ ಕೊವಿಡ್ ಎರಡನೇ ಅಲೆ ತೀವ್ರತೆಯಿಂದಾಗಿ ಜನರು ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಅಂತಹವರು ಸುಲಭ ಭಂಗೀಯ ಜತೆ ಯೋಗ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ಈ 5 ಯೋಗ ಭಂಗಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಶೀತ, ಕೆಮ್ಮಿನಂತಹ ಸಮಸ್ಯೆಯಿಂದ ನಮ್ಮನ್ನು ದೂರವಿರಿಸುತ್ತದೆ. ನಮ್ಮ ಸುತ್ತಮುತ್ತಲ ವಾತಾವರಣ ಈಗ ಅಷ್ಟು ಸುರಕ್ಷಿತವಾಗಿಲ್ಲ. ಹೀಗಾಗಿ ಯಾವುದೇ ಕಾಯಿಲೆಯೂ ನಮ್ಮ ಮೇಲೆ ಪರಿಣಾಮ ಬೀರದಂತೆ ಈ ಯೋಗಾಭ್ಯಾಸವು ನಮ್ಮನ್ನು ಕಾಯುತ್ತದೆ.

ಹಸ್ತೋಸ್ತಾನ
ಈ ಆಸನದಲ್ಲಿ ಮೊದಲು ನೇರವಾಗಿ ನಿಂತುಕೊಳ್ಳಿ. ಬಳಿಕ ನಿಮ್ಮ ಕೈಗಳನ್ನು ಹಿಂಬದಿಯಾಗಿ ತಂದು ಬೆನ್ನಿನ ಮೇಲೆ ಇರಿಸಿ. ನಂತರ ಬೆನ್ನನ್ನು ಹಿಂಬದಿಯಾಗಿ ಭಾಗಿಸಿ ಮತ್ತು ತಲೆಯನ್ನು ಸ್ವಲ್ಪ ಹಿಂಬದಿಯಾಗಿಸಿ. ಈ ಭಂಗಿಯೂ ಮೂತ್ರಜನಕಾಂಗದ ಸಮಸ್ಯೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳುತ್ತಿರುವವರಿಗೆ ನೆರವಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಶೀತ ಹೆಚ್ಚಾಗಿ ಕಾಡುವುದರಿಂದ ಈ ಯೋಗ ಅದನ್ನು ನಿವಾರಿಸಲು ಸಹಾಯಕವಾಗಿದೆ.

ಪ್ರಾಣಾಯಾಮ
ಆಳವಾದ ಉಸಿರಾಟ ಕ್ರಿಯೆಯನ್ನು ಈ ಯೋಗ ಭಂಗಿಯಲ್ಲಿ ಮಾಡುವುದರಿಂದ ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಯಿಂದ ಹೊರಬರಲು ನೆರವಾಗುತ್ತದೆ. ಅಸ್ತಮಾ, ತಲೆನೋವು ಮತ್ತು ಮೈಗ್ರೈನ್​ನಂತಹ ಸಮಸ್ಯೆಯಿಂದ ಬಳಲುತ್ತರುವವರು ಪ್ರಾಣಾಯಾಮ ಮಾಡುವುದು ಉತ್ತಮ. ಅಧಿಕ ರಕ್ತದೊತ್ತಡ ಇರುವವರಿಗೂ ಕೂಡ ಈ ಯೋಗಾಭ್ಯಾಸ ನೆರವಾಗುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪರಿವೃತ್ತ ಉತ್ಕಾಟಾಸನ
ಹೊಟ್ಟೆಯೊಳಗಿನ ಸಮಸ್ಯೆಗೆ ಈ ಆಸನ ನೆರವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಹೊಟ್ಟೆಯೊಳಗಿನ ಅಜೀರ್ಣ, ಕಿಡ್ನಿ ಸಮಸ್ಯೆ ಮತ್ತು ಗೆಡ್ಡೆ ಅಥವಾ ಹೊಟ್ಟೆಯೊಳಗೆ ದುರ್ಮಾಂಸ ಬೆಳೆಯುವಂತಹ ಸಮಸ್ಯೆಯಿಂದ ಬಳಲುತ್ತಿರುವವರು ಅಥವಾ ಇಂತಹ ಸಮಸ್ಯೆ ಬಾರದಂತೆ ಕಾಪಾಡಿಕೊಳ್ಳಲು ಈ ಪರಿವೃತ್ತ ಉತ್ಕಾಟಾಸನ ಮಾಡುವುದು ಒಳಿತು. ಅಲ್ಲದೇ ಈ ಆಸನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತ್ರಿಕೋನಾಸನ
ಸೊಂಟ ಮತ್ತು ತೊಡೆಯ ಸ್ನಾಯುವನ್ನು ಬಲಪಡಿಸುತ್ತದೆ. ಜತೆಗೆ ಶ್ವಾಸಕೊಶದ ಸಮಸ್ಯೆ ಮತ್ತು ಬೆನ್ನುಹುರಿಯ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ನೆರವಾಗುತ್ತದೆ. ತ್ರಿಕೋನಾಸನದಲ್ಲಿ ತೆಗೆದುಕೊಳ್ಳುವ ಆಳವಾದ ಉಸಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಗರುಡಾಸನ
ಗರುಡಾಸನವನ್ನು ಮಾಡುವುದರಿಂದ ತೊಡೆಗಳಲ್ಲಿರುವ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಮಂಡಿನೋವಿನಿಂದ ಬಳಲುತ್ತಿರುವವರು ಕೂಡ ಈ ಆಸನವನ್ನು ಮಾಡಬೇಕು. ಇನ್ನು ಗರುಡಾಸನ ಶ್ವಾಸಕೋಶದ ಮೇಲೂ ಪರಿಣಾಮ ಬೀರುವುದರಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಅನುಸರಿಸಬಹುದು.

ಇದನ್ನೂ ಓದಿ:

Health Tips: ಆಸಿಡಿಟಿ ನಿವಾರಣೆಗೆ ಯೋಗಾಭ್ಯಾಸ; ಯಾವ ಯೋಗ ಭಂಗಿ ಸೂಕ್ತ?

Rakhi Sawant: ವಿಚಿತ್ರ ಭಂಗಿ, ವಿಚಿತ್ರ ಬಟ್ಟೆ; ಹೀಗೂ ಯೋಗ ಮಾಡ್ತಾರಾ? ಟ್ರೋಲ್​ ಆದ ರಾಖಿ ಸಾವಂತ್​

 

Published On - 12:05 pm, Tue, 15 June 21