AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Irretrievable Broken Relationship: ಇನ್ನು ಈ ಸಂಬಂಧವನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಸೂಚಿಸುವ ಚಿಹ್ನೆಗಳಿವು

ಸಂಬಂಧ(Relationship) ಯಾವುದೇ ಇರಲಿ ಚಿಕ್ಕ ಪುಟ್ಟ ಮನಸ್ತಾಪಗಳು, ಜಗಳಗಳು ನಡೆಯುವುದು ಸಾಮಾನ್ಯ, ಆದರೆ ಅದು ಅತಿರೇಕಕ್ಕೆ ಹೋದರೆ ಎಂದೂ ಸರಿಪಡಿಸಲಾಗದಷ್ಟು ವಿಚಾರಗಳು ಆಳವಾಗಬಹುದು.

Irretrievable Broken Relationship: ಇನ್ನು ಈ ಸಂಬಂಧವನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಸೂಚಿಸುವ ಚಿಹ್ನೆಗಳಿವು
ಸಂಬಂಧ
ನಯನಾ ರಾಜೀವ್
|

Updated on: May 12, 2023 | 10:00 AM

Share

ಸಂಬಂಧ(Relationship) ಯಾವುದೇ ಇರಲಿ ಚಿಕ್ಕ ಪುಟ್ಟ ಮನಸ್ತಾಪಗಳು, ಜಗಳಗಳು ನಡೆಯುವುದು ಸಾಮಾನ್ಯ, ಆದರೆ ಅದು ಅತಿರೇಕಕ್ಕೆ ಹೋದರೆ ಎಂದೂ ಸರಿಪಡಿಸಲಾಗದಷ್ಟು ವಿಚಾರಗಳು ಆಳವಾಗಬಹುದು. ಪ್ರೀತಿಯು ಜೀವನದ ಶೂನ್ಯತೆಯನ್ನು ತುಂಬುತ್ತದೆ ಮತ್ತು ಸಂಪೂರ್ಣತೆಯನ್ನು ಒದಗಿಸುತ್ತದೆ. ಆದರೆ ಅದು ಎಷ್ಟು ಮುಖ್ಯವೋ, ಅದನ್ನು ಪಡೆಯುವುದು ಅಷ್ಟೇ ಕಷ್ಟ. ಕೆಲವೊಮ್ಮೆ ನೀವು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೀರಿ, ಆದರೆ ಸಂಬಂಧವು ಸುಧಾರಿಸುವುದಿಲ್ಲ. ಅದನ್ನು ಸರಿಪಡಿಸಲಾಗದ ಸಂಬಂಧ ಎಂದು ಹೇಳಬಹುದು.

ನಿಮ್ಮ ಮಾತುಗಳು ಮನಸ್ಸಿನ ಆಳಕ್ಕೆ ನಾಟಿರಬಹುದು ಕುಟುಂಬದ ಬಗ್ಗೆ ಅಥವಾ ನಿಮ್ಮ ಚಾರಿತ್ರ್ಯದ ಬಗ್ಗೆ ಅಥವಾ ನಿಮ್ಮ ಹಾವ-ಭಾವದ ಬಗ್ಗೆ ಪದೇ ಪದೇ ಟೀಕೆ ಮಾಡಿದರೆ ಎಂದೂ ಸಹಿಸಲಾಗುವುದಿಲ್ಲ. ಸರಿಪಡಿಸಲಾಗದ ಮುರಿದ ಸಂಬಂಧ ಎಂದರೆ ಅದು ತನ್ನ ಆಕರ್ಷಣೆಯನ್ನು ಕಳೆದುಕೊಂಡಿರುವುದು ಮಾತ್ರವಲ್ಲದೆ ಇಬ್ಬರಿಗೂ ಮಾರಕವಾಗಬಹುದು, ಗಂಡ ಅಥವಾ ಹೆಂಡತಿಯ ನಡುವಿನ ಸಂಬಂಧವನ್ನು ಸುಧಾರಿಸಲು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ.

ಭಾವನಾತ್ಮಕ ನೆಲೆಯ ಕೊರತೆ ಪರಸ್ಪರ ಸಾಮರಸ್ಯ ಇಲ್ಲದಿದ್ದರೆ ಪರಸ್ಪರ ದಾಂಪತ್ಯದ ಅಂತ್ಯಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ಪದೇ ಪದೇ ನಿಮ್ಮ ತಪ್ಪನ್ನೇ ಹೇಳುವುದು ತಾವು ಎಷ್ಟೇ ತಪ್ಪು ಮಾಡಿದ್ದರೂ ಪದೇ ಪದೇ ನಿಮ್ಮ ತಪ್ಪುಗಳನ್ನು ಎತ್ತಿ ಹೇಳುವುದು, ನಾಲ್ಕು ಜನರ ಮುಂದೆ ಅವಮಾನ ಮಾಡುವುದು, ಮಕ್ಕಳು, ಹಿರಿಯರ ಮುಂದೆ ಕೆಟ್ಟದಾಗಿ ಮಾತನಾಡುವುದು ಇದು ಸಂಬಂಧಗಳ ಹಳಸುವಿಕೆಗೆ ಕಾರಣವಾಗುತ್ತದೆ.

ಕೌಟುಂಬಿಕ ಹಿಂಸೆ ಮತ್ತು ಭಾವನಾತ್ಮಕ ನಿಂದನೆ ದೈಹಿಕ ಕಿರುಕುಳ, ಲೈಂಗಿಕ ಕಿರುಕುಳ, ಕೌಟುಂಬಿಕ ಹಿಂಸೆ, ಸಂಗಾತಿಯಿಂದ ಭಾವನಾತ್ಮಕ ನಿಂದನೆಗಳಿದ್ದರೆ ಅದರಿಂದ ಮನಸ್ಸು ಮುರಿಯಬಹುದು.

ಸಂಬಂಧಗಳ ಅಂತ್ಯ ಒಮ್ಮೊಮ್ಮೆ ಒಬ್ಬರಿಗೊಬ್ಬರು ಅಸಡ್ಡೆ ತೋರುವುದು ಸಹಜ. ಅದನ್ನು ಮುಂದುವರಿಸುವುದು ಸರಿಯಲ್ಲ. ಇವರಿಬ್ಬರ ನಡುವಿನ ಪ್ರೀತಿ ಈಗ ಕಳೆಗುಂದಿದೆ ಎನ್ನುವುದಕ್ಕೆ ಇದು ಸಂಕೇತ ಎನ್ನಬಹುದು. ಈ ಸ್ಥಿತಿ ಮುಂದುವರಿದರೆ, ನಿಮ್ಮ ಸಂಬಂಧವನ್ನು ಮರುಪರಿಶೀಲಿಸುವುದು ಮುಖ್ಯ.

ಒಂದು ವಯಸ್ಸಿನ ನಂತರ, ಹೆಚ್ಚಿನ ದಂಪತಿ ಸಂಬಂಧದಲ್ಲಿ ಮೊದಲಿನಂತೆಯೇ ಅದೇ ಆಕರ್ಷಣೆಯನ್ನು ಅನುಭವಿಸುವುದಿಲ್ಲ. ಇದರ ಹೊರತಾಗಿಯೂ, ಅವರು ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಅಗತ್ಯಗಳಲ್ಲಿ ಪರಸ್ಪರರ ಕಂಪನಿಯನ್ನು ಇಷ್ಟಪಡುತ್ತಾರೆ. ನೀವಿಬ್ಬರೂ ಪರಸ್ಪರ ಈ ಅಗತ್ಯವನ್ನು ಅನುಭವಿಸದಿದ್ದರೆ, ಈ ಸಂಬಂಧದ ಭವಿಷ್ಯದ ಬಗ್ಗೆ ನೀವು ಯೋಚಿಸಬೇಕು.

ಸಂಬಂಧವನ್ನು ಉಳಿಸಿಕೊಳ್ಳಲು, ಉಳಿಸಿಕೊಳ್ಳಬೇಕು ಎನ್ನುವ ಮನೋಭಾವನೆ ಇರಬೇಕು ಸಂಬಂಧವು ಒಬ್ಬರಿಗೊಬ್ಬರು ಮುಖ ನೋಡದಂತಾಗಬಾರದು, ಸಂಬಂಧವನ್ನು ಉಳಿಸಿಕೊಳ್ಳುವ ಮನೋಭಾವ ಇಬ್ಬರಿಗೂ ಇರಬೇಕು.

ಮಕ್ಕಳ ಭವಿಷ್ಯಕ್ಕಾಗಿ ಮತ್ತು ಅವರ ಯೋಗಕ್ಷೇಮಕ್ಕಾಗಿ ಅನೇಕ ದಂಪತಿ ತಮ್ಮ ಮಕ್ಕಳು ಏಕಾಂಗಿಯಾಗಿ ಬಿಡುತ್ತಾರೆ ಎಂಬ ಭಯದಿಂದ ಪರಸ್ಪರ ಒಟ್ಟಿಗೆ ಇರುತ್ತಾರೆ. ಯಾವುದೇ ಪ್ರೀತಿ ಇಲ್ಲದಿದ್ದರೂ ಒಟ್ಟಿ ವಾಸಿಸುತ್ತಾರೆ, ತಪ್ಪಿತಸ್ಥ ಭಾವನೆಯೂ ಅವರಲ್ಲಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್