
ಬಿರು ಬಿಸಿಲು ಜೋರಾಗಿದೆ. ಈ ಬೇಸಿಗೆ (Summer) ಯಲ್ಲಿ ಪ್ರಾಣಿ ಪಕ್ಷಿಗಳು ಬಾಯಾರಿಕೆ ನೀಗಿಸಲು ಪರದಾಡುವುದನ್ನು ನೋಡಿರಬಹುದು. ಮನುಷ್ಯರಿಗೆ ದಾಹವಾದರೆ ಬಾಟಲಿ ನೀರು (water) ಖರೀದಿಸಿ ಕುಡಿಯುತ್ತಾರೆ. ಆದರೆ ಪ್ರಾಣಿಗಳ ಬಾಯಾರಿಕೆ ನೀಗಿಸಲು ರಸ್ತೆಬದಿ (road side), ಪಾರ್ಕ್ (park) ಸೇರಿದಂತೆ ಇನ್ನಿತ್ತರ ಸ್ಥಳ ಗಳಲ್ಲಿ ಕುಡಿಯುವ ನೀರಿನ ತೊಟ್ಟಿ (public water bowls) ಸೇರಿದಂತೆ ಮಡಿಕೆ ಕುಡಿಕೆಗಳಲ್ಲಿ ನೀರನ್ನು ಇಟ್ಟಿರುತ್ತಾರೆ. ಸಂಜೆಯ ವೇಳೆ ವಾಕಿಂಗ್ ಗೆಂದು ಮನೆಯ ಶ್ವಾನ (dog) ವನ್ನು ಕರೆದುಕೊಂಡು ಹೋದಾಗ ಈ ನೀರಿನ ತೊಟ್ಟಿಗಳಲ್ಲಿ ನೀರು ಕುಡಿದು ತಮ್ಮ ದಾಹ ತೀರಿಸಿಕೊಳ್ಳುತ್ತವೆ. ಆದರೆ ಈ ನೀರಿನ ಮೂಲಗಳು ನಿಮ್ಮ ಮನೆಯ ಸಾಕುಪ್ರಾಣಿಗಳಿಗೆ ಗಂಭೀರ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ. ಹಾಗಾದ್ರೆ ಸಾರ್ವಜನಿಕ ನೀರಿನ ತೊಟ್ಟಿಗಳಲ್ಲಿ ನೀರಿನ ಬದಲಾಗಿ ಮನೆ ಮಾಲೀಕನು ಸಾಕು ಪ್ರಾಣಿಗೆ ಕುಡಿಯಲು ಬೇಕಾದ ವ್ಯವಸ್ಥೆಯನ್ನು ಹೇಗೆ ಮಾಡಿಕೊಳ್ಳಬಹುದು? ನೀರಿನ ತೊಟ್ಟಿಗಳಲ್ಲಿ ನೀರು ಕುಡಿಯುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ? ಎಂದು ಟೆಕ್ಸಾಸ್ ಎ ಹಾಗೂ ಎಂ ಸ್ಕೂಲ್ ಆಫ್ ವೆಟರ್ನರಿ ಮೆಡಿಸಿನ್ ಮತ್ತು ಬಯೋಮೆಡಿಕಲ್ ಸೈನ್ಸಸ್‌ನ ಕ್ಲಿನಿಕಲ್ ಪ್ರೊಫೆಸರ್ ಡಾ. ಲೋರಿ ಟೆಲ್ಲರ್ (Dr. Lori Teller, clinical professor at the Texas A and M School of Veterinary Medicine and Biomedical Sciences) ವಿವರಿಸಿದ್ದಾರೆ.
ಪಶುವೈದ್ಯ ಟೆಲ್ಲರ್ ಹೇಳುವ ಪ್ರಕಾರ, ‘ಸಾಕುಪ್ರಾಣಿ ಮಾಲೀಕರು ತಮ್ಮ ಸಾಕುಪ್ರಾಣಿಗಳಿಗೆ ನೀರಿನ ತೊಟ್ಟಿಗಳಲ್ಲಿ ನೀರು ಕುಡಿಯಲು ಬಿಡುವ ಮೊದಲು ಈ ನೀರಿನ ಗುಣಮಟ್ಟವನ್ನು ಮೌಲ್ಯಮಾಪನ ಮಾಡಬೇಕು. ಕುಡಿಯುವ ನೀರಿನ ತೊಟ್ಟಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ ಅಥವಾ ನೀರು ದೀರ್ಘಕಾಲದವರೆಗೆ ನಿಂತಿದ್ದರೆ ಇದು ಪ್ರಾಣಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ನೀರಿನ ತೊಟ್ಟಿಯಲ್ಲಿ ತರಗೆಲೆಗಳು, ಪರಿಸರ ಮಾಲಿನ್ಯಕಾರಕಗಳು ಹಾಗೂ ವಿಷಕಾರಿ ವಸ್ತುಗಳು ಸೇರಿಕೊಳ್ಳಬಹುದು. ಹೀಗಾಗಿ ಶ್ವಾನಗಳಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ, ಈ ಬಗ್ಗೆ ಮಾಲೀಕರು ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.
‘ಮನೆಯ ಮಾಲೀಕರು ತಮ್ಮ ಮನೆಯ ನಾಯಿಗೆ ನೀಡಲು ಮಡಿಸಬಹುದಾದ, ಪೋರ್ಟಬಲ್ ಬಟ್ಟಲು ಮತ್ತು ಸ್ವಲ್ಪ ತಾಜಾ ನೀರನ್ನು ತಮ್ಮೊಂದಿಗೆ ಕೊಂಡೊಯ್ಯುವುದು ಉತ್ತಮ. ಇಲ್ಲದಿದ್ದರೆ ರೆಸ್ಟೋರೆಂಟ್ ಅಥವಾ ಅಂಗಡಿಯಲ್ಲಿ ನೀರು ಖರೀದಿಸಿ ಬಾಯಾರಿಕೆ ಅದರ ನೀಗಿಸುವುದು ಒಳ್ಳೆಯದು. ಸಾರ್ವಜನಿಕವಾಗಿ ಲಭ್ಯವಿರುವ ನೀರಿನ ತೊಟ್ಟಿಗಳಲ್ಲಿ ಶ್ವಾನಗಳಿಗೆ ನೀರು ಕುಡಿಯಲು ಬಿಡುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎಂದಿದ್ದಾರೆ ಪಶುವೈದ್ಯರು.
ಇದನ್ನೂ ಓದಿ: ಕೂದಲಿನ ಬೆಳವಣಿಗೆಗೆ ಈರುಳ್ಳಿ ರಸ ಹೇಗೆ ಪ್ರಯೋಜನಕಾರಿ?
ಅದಲ್ಲದೇ, ಕುಡಿಯುವ ನೀರಿನ ತೊಟ್ಟಿಗಳಿಗೆ ಸಂಬಂಧಿಸಿದ ಸುರಕ್ಷತಾ ಕಾಳಜಿಗಳನ್ನು ಪರಿಗಣಿಸುವುದರ ಜೊತೆಗೆ, ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಸಾಕುಪ್ರಾಣಿಗಳಿದ್ದರೆ ಅದರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹೌದು, ಒಂದೇ ಬಟ್ಟಲಿನಲ್ಲಿ ಆಹಾರ ತಿನ್ನುವುದರಿಂದ ಆದರಿಂದ ಉಂಟಾಗುವ ಅಪಾಯಗಳನ್ನು ಸಹ ಮಾಲೀಕರು ಪರಿಗಣಿಸಬೇಕು. ಮನೆಯಲ್ಲಿರುವ ಸಾಕುಪ್ರಾಣಿಗಳ ನೀರಿನ ಬಟ್ಟಲು ಅಥವಾ ಆಹಾರ ಬಟ್ಟಲುಗಳು ನಿಯಮಿತವಾಗಿ ಸೋಪು ಮತ್ತು ಬಿಸಿ ನೀರಿನಿಂದ ತೊಳೆಯುವುದು ಬಹಳ ಮುಖ್ಯ ಎಂದು ತಿಳಿಸಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ