Sign In

By signing in or creating an account, you agree with Associated Broadcasting Company's Terms & Conditions and Privacy Policy.

Tumakuru: ತುಮಕೂರಿನಲ್ಲಿ ಭೇಟಿ ನೀಡಬಹುದಾದ ಪ್ರಮುಖ ಪ್ರವಾಸಿ ತಾಣಗಳ ಕುರಿತ ಮಾಹಿತಿ ಇಲ್ಲಿದೆ

ತುಮಕೂರು ತನ್ನ ಕೆಲವೊಂದಿಷ್ಟು ಕೋಟೆಗಳಿಗೂ ಹಾಗೂ ಇತರ ತಾಣಗಳಿಗೆ ಹೆಸರುವಾಸಿಯಾಗಿದ್ದರೂ, ಸಹ ತುಮಕೂರಿನ ದೇವಾಲಯಗಳು ಅಷ್ಟೇ ಪ್ರಸಿದ್ಧಿಯನ್ನು ಪಡೆದಿದೆ.

Tumakuru: ತುಮಕೂರಿನಲ್ಲಿ ಭೇಟಿ ನೀಡಬಹುದಾದ ಪ್ರಮುಖ ಪ್ರವಾಸಿ ತಾಣಗಳ ಕುರಿತ ಮಾಹಿತಿ ಇಲ್ಲಿದೆ
TumkuruImage Credit source: MetroSaga
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 09, 2022 | 5:02 PM

ಐತಿಹಾಸಿಕ ಪುರಾಣ ಕಥೆಗಳು,ಭವ್ಯವಾದ ಕೋಟೆಗಳು, ದೇವಾಲಯಗಳು ಮತ್ತು ರಮಣೀಯ ವೈಭವದ ನಾಡು ತುಮಕೂರು. ನಿಮ್ಮ ವಾರಾಂತ್ಯದ ವಿಹಾರಕ್ಕೆ ಒಂದು ಉತ್ತಮ ತಾಣವಾಗಿದೆ. ಇಲ್ಲಿ ಮನೋರಂಜನೆಯ ಜೊತೆಗೆ ಇಲ್ಲಿನ ಪುರಾತನ ತಾಣಗಳ ಬಗ್ಗೆ ಉತ್ತಮ ಮಾಹಿತಿಯನ್ನು ಕೂಡ ಪಡೆಯಬಹುದು.

ಇಲ್ಲಿನ ಪ್ರಮುಖ ದೇವಾಲಯಗಳು: ತುಮಕೂರು ತನ್ನ ಕೆಲವೊಂದಿಷ್ಟು ಕೋಟೆಗಳಿಗೂ ಹಾಗೂ ಇತರ ತಾಣಗಳಿಗೆ ಹೆಸರುವಾಸಿಯಾಗಿದ್ದರೂ, ಸಹ ತುಮಕೂರಿನ ದೇವಾಲಯಗಳು ಅಷ್ಟೇ ಪ್ರಸಿದ್ಧಿಯನ್ನು ಪಡೆದಿದೆ. ಕೆಲವು ಪ್ರಾಚೀನ ದೇವಾಲಯಗಳು ತಮ್ಮ ಭವ್ಯವಾದ ವಾಸ್ತುಶಿಲ್ಪ ಮತ್ತು ಕರಕುಶಲತೆಗೆ ಹೆಸರುವಾಸಿಯಾಗಿದೆ.

ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ: ತುಮಕೂರಿನಿಂದ ಕೇವಲ 30 ಕಿಮೀ ದೂರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನವು ಕೊರಟಗೆರೆ ತಾಲ್ಲೂಕಿನಲ್ಲಿದೆ. ಇಲ್ಲಿ ಭಕ್ತಿ ಮತ್ತು ಸಾಕಷ್ಟು ನಂಬಿಕೆಯಿಂದ ಪೂಜಿಸುವ ದೇವತೆಯೇ ಮಹಾಲಕ್ಷ್ಮಿ. ಇತಿಹಾಸಕಾರರ ಪ್ರಕಾರ, ಈ ದೇವಿಯ ವಿಗ್ರಹವು 1900 ರ ಆರಂಭದಲ್ಲಿ ಪ್ರತ್ಯಕ್ಷವಾಗಿತು ಎಂದು ಹೇಳಲಾಗುತ್ತದೆ. ಈ ವಿಗ್ರಹದ ಎರಡೂ ಬದಿಗಳಲ್ಲಿ 2 ಕಮಾನುಗಳನ್ನು ಹೊಂದಿರುವ ಬೃಹತ್ ಗೋಪುರ ಅಥವಾ ಎರಡು ಜಗುಲಿಗಳು ದೇವಾಲಯದ ಪ್ರಮುಖ ಅಂಶವಾಗಿದೆ. ಈ ದೇವಾಲಯವು 1952 ರಿಂದಲೂ ಇಲ್ಲಿನ ವರೆಗೆ ಪ್ರತಿ ದಿನ ಬೆಳಿಗ್ಗೆ 6 ರಿಂದ ರಾತ್ರಿ 8ರ ವರೆಗೆ ತೆರೆದಿರುತ್ತದೆ ಹಾಗೂ ಮಧ್ಯಾಹ್ನ 12.30 ರಿಂದ ಸಂಜೆ 5.30 ರವರೆಗೆ ವಿರಾಮವಿದೆ.

ಚೆನ್ನಕೇಶವ ದೇವಸ್ಥಾನ, ಕೈದಾಳ: ಈ ದೇವಾಲಯವು ತುಮಕೂರು ಜಿಲ್ಲೆಯ ತುರುವೇಕೆರೆ ಎಂಬ ಸಣ್ಣ ಪಟ್ಟಣದಲ್ಲಿದೆ. ಬೇಲೂರಿನ ಚೆನ್ನಕೇಶವ ದೇವಾಲಯದಂತೆಯೇ ಈ ದೇವಾಲಯವಿದ್ದು, ಇದು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಹೊಯ್ಸಳ ಸಾಮ್ರಾಜ್ಯದ ಕಾಲದಲ್ಲಿನ ವಾಸ್ತುಶಿಲ್ಪ ಶೈಲಿಯನ್ನು ಇಲ್ಲಿ ಕಾಣಬಹುದು. ಈ ದೇವಾಲಯವನ್ನು ಜನಕಚಾರಿ ಮತ್ತು ಡಂಕಚಾರಿ ಎಂಬ ಇಬ್ಬರು ಶಿಲ್ಪಿಗಳಿಂದ ನಿರ್ಮಿಸಲಾಗಿದೆ. ಈಗ ಈ ದೇವಾಲಯವು ಭಾರತೀಯ ಪುರಾತತ್ವ ಇಲಾಖೆಯಿಂದ ರಕ್ಷಿಸಲ್ಪಟ್ಟಿದೆ.

ಗಂಗಾಧರೇಶ್ವರ ದೇವಸ್ಥಾನ ತುರುವೇಕೆರೆ:

13ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದ ಅನೇಕ ದೇವಾಲಯಗಳಲ್ಲಿ ಇದು ಒಂದಾಗಿದೆ. ಅಗ್ರಹಾರವು ವಿದ್ವಾಂಸ ಬ್ರಾಹ್ಮಣರು ಮತ್ತು ಪುರೋಹಿತರಿಗೆ ಒದಗಿಸಲಾಗುತ್ತಿದ್ದ ಭೂಮಿ ಪ್ರದೇಶವಾಗಿದೆ. ವಿಷ್ಣುವಿಗೆ ಸಮರ್ಪಿತವಾದ ಚೆನ್ನಕೇಶವ ದೇವಾಲಯವು ಪ್ರಮುಖ ಆಕರ್ಷಣೆಯಾಗಿದೆ. ದೇವಾಲಯದ ಪ್ರದೇಶವು ಕ್ರಿ.ಶ 1260 ರಲ್ಲಿ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ ಮತ್ತು ಇದು ಉತ್ತರ ಭಾರತೀಯ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.

ಇತರ ಪ್ರೇಕ್ಷಣೀಯ ಸ್ಥಳಗಳು:

ಇಲ್ಲಿನ ಪ್ರಮುಖ ಆಕರ್ಷಣೆಯಾದ ದೇವಾಲಯದ ಜೊತೆಗೆ ಇಲ್ಲಿನ ಶಿಕ್ಷಣ ಕೇಂದ್ರ ಮುಂತಾದ ಪ್ರೇಕ್ಷಣೀಯ ಸ್ಥಳಗಳು ಸಾಹಸ ಅನ್ವೇಷಕರು, ಪ್ರಕೃತಿ ಪ್ರೇಮಿಗಳು ಮತ್ತು ಛಾಯಾಗ್ರಾಹಕರಿಗೆ ಉತ್ತಮ ಸ್ಥಳವಾಗಿದೆ.

ಮಧುಗಿರಿ ಕೋಟೆ: ಬೆಂಗಳೂರಿಗೆ ಸಮೀಪವಿರುವ ಈ ಮಧುಗಿರಿ ಕೋಟೆಯೂ ಸಾಹಸಿ ಪ್ರೇಕ್ಷಕರಿಗೆ ಉತ್ತಮ ತಾಣವಾಗಿದೆ. ಏಷ್ಯಾದ ಎರಡನೇ ಅತಿ ದೊಡ್ಡ ಏಕಶಿಲಾ ಶಿಲೆ ಎಂದು ನಂಬಲಾಗಿದೆ. ಬಂಡೆಗಳ ಮೂಲಕ ಸಾಗುವ ಸಾಹಸಮಯ ಪಾದಯಾತ್ರೆಯು ಮಧುಗಿರಿ ಕೋಟೆಗೆ ದಾರಿ ಮಾಡಿಕೊಡುತ್ತದೆ. ಐತಿಹಾಸಿಕ ಕೋಟೆಯ ಅವಶೇಷಗಳು ಮತ್ತು ಮೇಲಿನ ನೋಟಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಇತರ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಣೆಕಟ್ಟುಗಳು, ಜಲಾಶಯಗಳು, ಚಾರಣಗಳು, ಕೋಟೆಗಳು, ಅರಣ್ಯ ಮೀಸಲುಗಳು ಮತ್ತು ಇನ್ನೂ ಹೆಚ್ಚಿನವು ಸೇರಿವೆ. ಇವೆಲ್ಲವೂ ಪಟ್ಟಣದಿಂದ ಸುಲಭವಾಗಿ ತಲುಪಬಹುದು. ಮಾರ್ಕೋನಹಳ್ಳಿ, ಪಾವಗಡ, ಜಯಮಂಗಲಿ ಕೃಷ್ಣಮೃಗ ಸಂರಕ್ಷಿತ ಪ್ರದೇಶ, ನಾಮದ ಚಿಲುಮೆ, ಹುಲಿಯೂರು ದುರ್ಗ, ಹುತ್ರಿದುರ್ಗ, ಚೆನ್ನೈರಾಯನ ದುರ್ಗ, ಕಂದಿಕೆರೆ, ಮಿಡಿಗೇಶಿ, ನಾಗಲಾಪುರ, ನಿಡುಗಲ್, ನಿಟ್ಟೂರು, ನೊಣವಿನಕೆರೆ ಮತ್ತು ತೀತ ಜಲಾಶಯಗಳು ತುಮಕೂರಿನ ಕೆಲವು ಜನಪ್ರಿಯ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಜೀವನ ಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ಧಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್