Capsicum Recipe: ಪಂಜಾಬಿ ಶೈಲಿಯ ಕ್ಯಾಪ್ಸಿಕಂ ಬೋಂಡ ಈ ರೆಸಿಪಿಯನ್ನೊಮ್ಮೆ ಪ್ರಯತ್ನಿಸಿ
ಕ್ಯಾಪ್ಸಿಕಂ ಬೋಂಡ ಅನ್ನ, ಚಪಾತಿ, ರೊಟ್ಟಿಗಳಿಗೆ ಸೈಡ್ ಡಿಶ್ ಆಗಿ ಇದು ಒಂದು ಉತ್ತಮ ರುಚಿಯನ್ನು ನೀಡುತ್ತದೆ. ಆದ್ದರಿಂದ ಮನೆಯಲ್ಲಿಯೇ ತಯಾರಿಸಲು ಇಲ್ಲಿದೆ ಸುಲಭ ವಿಧಾನ. ಒಮ್ಮೆ ಪ್ರಯತ್ನಿಸಿ ನೋಡಿ.
ಕ್ಯಾಪ್ಸಿಕಂ ಬೋಂಡ ಇದು ಪಂಜಾಬಿ ಶೈಲಿಯ ರುಚಿಕರವಾದ ಭರ್ವಾ ಶಿಮ್ಲಾ ಮಿರ್ಚ್ ರೆಸಿಪಿಯಾಗಿದೆ. ಇದು ನಿಮ್ಮ ರಾತ್ರಿಯ ಅಥವಾ ಮಧ್ಯಾಹ್ನದ ಊಟಕ್ಕೆ ಒಂದು ಉತ್ತಮ ಜೋಡಿಯಾಗಿದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಈ ಪಾಕ ವಿಧಾನವನ್ನು ಪ್ರಯತ್ನಿಸಿ. ಇದು ನಿಮ್ಮ ಊಟಕ್ಕೆ ವಿಶೇಷ ರುಚಿ ಕೊಡುತ್ತದೆ.
ಕ್ಯಾಪ್ಸಿಕಂ ಬೋಂಡ ಅನ್ನ, ಚಪಾತಿ, ರೊಟ್ಟಿಗಳಿಗೆ ಸೈಡ್ ಡಿಶ್ ಆಗಿ ಇದು ಒಂದು ಉತ್ತಮ ರುಚಿಯನ್ನು ನೀಡುತ್ತದೆ. ಆದ್ದರಿಂದ ಮನೆಯಲ್ಲಿಯೇ ತಯಾರಿಸಲು ಇಲ್ಲಿದೆ ಸುಲಭ ವಿಧಾನ. ಒಮ್ಮೆ ಪ್ರಯತ್ನಿಸಿ ನೋಡಿ.
ಮಾಡುವ ವಿಧಾನ:
1. ಮೊದಲು, ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಬೇಯಿಸಿ. ನಂತರ ಆಲೂಗಡ್ಡೆಯ ಸಿಪ್ಪೆ ತೆಗೆದು, ಚೆನ್ನಾಗಿ ಸ್ಮ್ಯಾಶ್ ಮಾಡಿ. ಪಕ್ಕಕ್ಕೆ ಇರಿಸಿ. 2.ಕ್ಯಾಪ್ಸಿಕಂನ ಮೇಲ್ಭಾಗವನ್ನು ಕತ್ತರಿಸಿ. ನಂತರ ಬೀಜಗಳನ್ನು ತೆಗೆದು ನೀರಿನಲ್ಲಿ ತೊಳೆಯಿರಿ ಮತ್ತು ಸಲ್ಪ ಹೊತ್ತು ಒಣಗಿಸಿ. 3. ಒಂದು ಪ್ಯಾನ್ನಲ್ಲಿ ಸಣ್ಣ ಉರಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಮೊದಲು ಜೀರಿಗೆಯನ್ನು ಹಾಕಿ ಫ್ರೈ ಮಾಡಿ ನಂತರ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ. 4. ಈರುಳ್ಳಿಯು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಅದಕ್ಕೆ ಕತ್ತರಿಸಿದ ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ನಂತರ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಇಂಗು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಇವಾಗ ಸ್ಮ್ಯಾಶ್ ಮಾಡಿದ ಆಲೂಗಡ್ಡೆ ಸೇರಿಸಿ ಮತ್ತೇ ಎಲ್ಲವನ್ನೂ ಮಿಶ್ರಣ ಮಾಡಿ. 5. ಮಿಶ್ರ ಮಾಡಿದ ಆಲೂಗಡ್ಡೆಯನ್ನು 2 ನಿಮಿಷಗಳ ಕಾಲ ಹುರಿಯಿರಿ ಮತ್ತು ನಂತರ ಗರಂ ಮಸಾಲಾ ಪುಡಿ, ಒಣ ಮಾವಿನ ಪುಡಿ ಮತ್ತು ಉಪ್ಪು ಸೇರಿಸಿ. 6. ಚೆನ್ನಾಗಿ ಬೆರೆಸಿ ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಮತ್ತೊಮ್ಮೆ ಮಿಶ್ರಣ ಮಾಡಿ ಮತ್ತು ಈ ಮಸಾಲೆಯುಕ್ತ ಆಲೂಗಡ್ಡೆ ಸ್ಟಫಿಂಗ್ ತಣ್ಣಗಾಗಲು ಬಿಡಿ. 7. ಒಂದು ಚಮಚ ಅಥವಾ ನಿಮ್ಮ ಕೈಗಳಿಂದ ಆಲೂಗಡ್ಡೆ ಮಿಶ್ರಣವನ್ನು ಕ್ಯಾಪ್ಸಿಕಂಗೆ ತುಂಬಿಸಿ. 8.ನಂತರ ಒಂದು ಬಾಣಲೆ ಅಥವಾ ಕಡಾಯಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಸ್ಟಫ್ ಮಾಡಿದ ಕ್ಯಾಪ್ಸಿಕಂ ಅನ್ನು ಬಾಣಲೆಯಲ್ಲಿ ಹುರಿಯಿರಿ. 9. ಪ್ಯಾನ್ ಅನ್ನು ಮುಚ್ಚಿ ಮತ್ತು ಸ್ಟಫ್ಡ್ ಕ್ಯಾಪ್ಸಿಕಮ್ ಅನ್ನು ಕಡಿಮೆ ಉರಿಯಲ್ಲಿ ಬೇಯಲು ಬಿಡಿ.
10 ನೀವು ಪ್ರತಿ 5 ರಿಂದ 6 ನಿಮಿಷಗಳ ನಂತರ ಆಗಾಗ್ಗೆ ಪರಿಶೀಲಿಸಬೇಕು ಮತ್ತು ಕ್ಯಾಪ್ಸಿಕಂನ ಬದಿಗಳನ್ನು ಬದಲಾಯಿಸುತ್ತಲೇ ಇರುತ್ತೀರಿ ಇದರಿಂದ ಎಲ್ಲಾ ಕಡೆ ಚೆನ್ನಾಗಿ ಸಹಾಯವಾಗುತ್ತದೆ. ಬದಿಗಳನ್ನು ತಿರುಗಿಸಿ ಮತ್ತು ಪ್ಯಾನ್ ಅನ್ನು ಮತ್ತೆ ಮುಚ್ಚಿ. 11.ಕ್ಯಾಪ್ಸಿಕಂ ಚೆನ್ನಾಗಿ ಎಲ್ಲಾ ಬದಿಗಳು ಬೇಯುವ ವರೆಗೂ ಕಡಿಮೆ ಉರಿಯಲ್ಲಿ 25 ನಿಮಿಷಗಳ ಕಾಲ ಬೇಯಿಸಿ. 12. ನಂತರ ತಯಾರದ ಕ್ಯಾಪ್ಸಿಕಂ ಬೋಂಡವನ್ನು ಕೊತ್ತಂಬರಿ ಸೊಪ್ಪು ಅಥವಾ ಪುದೀನ ಎಲೆಗಳಿಂದ ಅಲಂಕರಿಸಿ. ಇದನ್ನು ಬಿಸಿ ಅನ್ನ ಅಥವಾ ರೊಟ್ಟಿ, ಬ್ರೆಡ್ ಅಥವಾ ಸೈಡ್ ಡಿಶ್‌ನೊಂದಿಗೆ ಬೆಚ್ಚಗೆ ಬಡಿಸಿ ಸೇವಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:17 pm, Wed, 9 November 22