AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sakleshpur: ಪಶ್ಚಿಮ ಘಟ್ಟಗಳ ತಪ್ಪಲಿನ ನಾಡು ಸಕಲೇಶಪುರದ ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತ ಮಾಹಿತಿ ಇಲ್ಲಿದೆ

ಬೆಂಗಳೂರಿನಿಂದ ಕೇವಲ 220 ಕಿಮೀ ದೂರದಲ್ಲಿರುವ ಸಕಲೇಶಪುರದ ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತಾದ ಮಾಹಿತಿ ಇಲ್ಲಿದೆ.

Sakleshpur: ಪಶ್ಚಿಮ ಘಟ್ಟಗಳ ತಪ್ಪಲಿನ ನಾಡು ಸಕಲೇಶಪುರದ ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತ ಮಾಹಿತಿ ಇಲ್ಲಿದೆ
Sakleshpur
TV9 Web
| Updated By: ಅಕ್ಷತಾ ವರ್ಕಾಡಿ|

Updated on: Oct 29, 2022 | 12:07 PM

Share

ದೇವರು ರುಜು ಮಾಡಿದನು;ರಸವಶನಾಗುತ ಕವಿ ಅದ ನೋಡಿದನು ಎಂಬ ಕುವೆಂಪುರವರ ಸಾಲುಗಳು ಅದೆಷ್ಟೋ ಸಲ ಅಚ್ಚರಿ ಮೂಡಿಸುವುದಂತೂ ನಿಜ. ದೇವರು ನಿಸರ್ಗವನ್ನು ಎಷ್ಟು ಸುಂದರವಾಗಿ ಸೃಷ್ಟಿದ್ದಾನೆ ಎಂಬುದು ಕೆಲವೊಂದಿಷ್ಟು ಪ್ರವಾಸಿ ತಾಣಗಳು ನೋಡಿದಾಗಲೇ ಭಾಸವಾಗುವುದು.

ಬೆಂಗಳೂರಿನಿಂದ ಕೇವಲ 220 ಕಿಮೀ ದೂರದಲ್ಲಿರುವ ಸಕಲೇಶಪುರದ ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತಾದ ಮಾಹಿತಿ ಇಲ್ಲಿದೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಸಕಲೇಶಪುರವು ದೇವಾಲಯಗಳು ಮತ್ತು ನೈಸರ್ಗಿಕ ಸೌಂದರ್ಯದ ನಾಡು ಎಂದೇ ಪ್ರಸಿದ್ಧವಾಗಿದೆ. ಕಾಫಿ ಮತ್ತು ಮಸಾಲೆ ತೋಟಗಳೇ ಇಲ್ಲಿನ ವಿಶೇಷ. ರಕ್ಷಿದಿ ತೋಟವು ಕಾಫಿ ಹಾಗೂ ಮಸಾಲೆ ಬೆಳೆಗಳಿಂದ ಕೂಡಿದೆ. ಹಸಿರಾದ ತೋಟವು ಇಳಿಜಾರಿನ ಆಕಾರದಲ್ಲಿರುವುದನ್ನು ನೋಡುತ್ತಿದ್ದರೆ ಒಂದು ಬಗೆಯ ಖುಷಿಯುಂಟಾಗುತ್ತದೆ.

ಈ ಪಟ್ಟಣವು ಪ್ರಮುಖ ಭವ್ಯವಾದ ಪುರಾತನ ದೇವಾಲಯಗಳು, ಪುರಾತನ ಕೋಟೆಗಳು, ಜಲಪಾತಗಳನ್ನು ಹೊಂದಿದ್ದು, ಟ್ರೆಕ್ಕಿಂಗ್ ಮಾಡಲು ಉತ್ತಮ ಸ್ಥಳವಾಗಿದೆ. ಇದೀಗಾ ಈ ಸ್ಥಳವು ರಜಾದಿನಗಳಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಬದಲಾಗಿದೆ.

ಸಕಲೇಶಪುರದ ತೀರ್ಥಕ್ಷೇತ್ರಗಳು: ವರ್ಷವಿಡೀ ಸಾವಿರಾರು ಭಕ್ತರು ಭೇಟಿ ನೀಡುವಂತಹ ಪುಣ್ಯ ಕ್ಷೇತ್ರಗಳನ್ನು ಒಳಗೊಂಡಿರುವ ಈ ಸ್ಥಳವು ದೇವರ ಸನ್ನಿಧಿಯ ನಾಡು ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿನ ಪ್ರಮುಖ ಪುಣ್ಯ ಸ್ಥಳಗಳೆಂದರೆ ಅಯಪ್ಪ ಸ್ವಾಮಿ ದೇವಸ್ಥಾನ, ಶ್ರೀ ಸಕಲೇಶ್ವರ ಸ್ವಾಮಿ ದೇವಸ್ಥಾನ, ಬೆಟ್ಟ ಬೈರವೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶೆಟ್ಟಿಹಳ್ಳಿ ರೋಸರಿ ಚರ್ಚ್ ಮುಂತಾದವು.

ಜಲಪಾತಗಳು: ಹಾಲಿನಂತೆ ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದು ಕಣ್ಣಿಗೊಂದು ಹಬ್ಬ. ಪ್ರಾಕೃತಿಕ ಸೊಬಗನ್ನು ಪ್ರತಿಬಿಂಬಿಸುವ ಈ ಪ್ರದೇಶಕ್ಕೆ ಒಮ್ಮೆ ಭೇಟಿ ನೀಡಿ. ಒತ್ತಡದ ಜೀವನದಿಂದ ಹೊರಬಂದು ಸ್ವಲ್ಪ ಸಮಯ ಕಳೆಯಲು ಉತ್ತಮ. ಈ ಪ್ರದೇಶವು ಮುರ್ಕನ್ನು ಗುಡ್ಡ ಮತ್ತು ಹಡ್ಲು ಜಲಪಾತ, ಮಗಜಹಳ್ಳಿ ಜಲಪಾತಗಳು ಮುಂತಾದ ಹಲವಾರು ಅದ್ಭುತ ಜಲಪಾತಗಳನ್ನು ಹೊಂದಿದೆ.

ಪರ್ವತ ಶ್ರೇಣಿಗಳು: ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಸಕಲೇಶಪುರವು ಎತ್ತರದ ಪರ್ವತಗಳು, ಸೊಂಪಾದ ಕಾಡುಗಳು ಮತ್ತು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನು ಒಳಗೊಂಡಿದೆ. ಹೀಗಾಗಿ, ವಿವಿಧ ಭಾಗಗಳ ಪ್ರವಾಸಿಗರನ್ನು, ಟ್ರೆಕ್ಕಿಂಗ್ ಪ್ರೀಯರನ್ನು ಆಕರ್ಷಿಸುತ್ತದೆ. ಬಿಸ್ಲೆ ವ್ಯೂ ಪಾಯಿಂಟ್, ಜೇನುಕಲ್ ಗುಡ್ಡ, ಒಂಬಟ್ಟು ಗುಡ್ಡ ಮತ್ತು ಅಗ್ನಿ ಗುಡ್ಡ ಬೆಟ್ಟಗಳು ಇಲ್ಲಿನ ಪ್ರಮುಖ ಪರ್ವತ ಶೇಣಿಗಳ ಸಾಲುಗಳಿಗೆ ಸೇರುತ್ತದೆ.

ಬಿಸ್ಲೆ ವ್ಯೂ ಪಾಯಿಂಟ್:

ಬಿಸ್ಲೆ ವ್ಯೂ ಪಾಯಿಂಟ್ ಹಳ್ಳಿಯ ಬೆಟ್ಟದ ಮೇಲಿರುವ ಒಂದು ಸ್ಥಳ. ಈ ಸ್ಥಳದಲ್ಲಿ ಬಂದು ನಿಂತರೆ ಮೂರು ಬೆಟ್ಟಗಳಾದ ಕುಮಾರ ಪರ್ವತ, ಪುಷ್ಪಗಿರಿ ಮತ್ತು ದೊಡ್ಡ ಬೆಟ್ಟಗಳ ತುದಿಯನ್ನು ನೋಡಬಹುದು. ಬಿಸ್ಲೆ ಬೆಟ್ಟದ ತುದಿಯಲ್ಲಿ ನಿಂತರೆ ಪ್ರಕೃತಿಯ ರಮ್ಯವಾದ ಸೊಬಗನ್ನು ಸೆರೆಹಿಡಿಯಬಹುದು.

ಮಂಜರಾಬಾದ್ ಕೋಟೆ 1792 ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ಈ ಭವ್ಯವಾದ ಕೋಟೆಯು ಸಕಲೇಶಪುರದ ಅತ್ಯಂತ ಪ್ರಸಿದ್ಧವಾದ ಆಕರ್ಷಣೆಗಳಲ್ಲಿ ಒಂದಾಗಿದೆ. ವಿಶಿಷ್ಟವಾದ ನಕ್ಷತ್ರಾಕಾರದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ಮಂಜರಾಬಾದ್ ಕೋಟೆಯು ಈ ಪ್ರದೇಶದ ವೈಭವದ ಇತಿಹಾಸವನ್ನು ಸಾರುತ್ತದೆ. ಹಲವಾರು ಸುರಂಗಗಳು, ಕೋಣೆಗಳು, ಫಿರಂಗಿ ಆರೋಹಣಗಳು ಮತ್ತು ಮಸ್ಕೆಟ್ ರಂಧ್ರಗಳು ಇಲ್ಲಿದ್ದು, ಇದು ಅಂದಿನ ರಾಜ ಟಿಪ್ಪು ನಿರ್ಮಿಸಿದ ಭವ್ಯ ಹಾಗು ಭದ್ರ ಕೋಟೆಯಾಗಿದೆ.

ಇವಿಷ್ಟು ಪ್ರಮುಖ ಪ್ರವಾಸಿ ತಾಣಗಳಾದರೆ ಶಿಕ್ಷಣಕ್ಕೂ ಇಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.

ಶಿಕ್ಷಣ ಸಂಸ್ಥೆಗಳು ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ, ಸಕಲೇಶಪುರ ಜೆಎಸ್ಎಸ್ ಶಿಕ್ಷಣ ಸಂಸ್ಥೆಯು ಉತ್ತಮ ಶೈಕ್ಷಣಿಕ ಸೌಲಭ್ಯಗಳೊಂದಿಗೆ ದೇಶದಾದ್ಯಂತ ನೂರಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಮಲೆನಾಡಿನ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ದೃಷ್ಠಿಯಿಂದ ಸಕಲೇಶಪುರದಲ್ಲಿರುವ ಶಿಕ್ಷಣ ಮಹಾವಿದ್ಯಾಲಯವು ಕಳೆದ 35 ವರ್ಷಗಳಲ್ಲಿ 3000+ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಿ ಶಿಕ್ಷಕ/ಉಪನ್ಯಾಸಕ ವೃತ್ತಿಗೆ ಕಳುಹಿಸಿರುವ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರವಾಸಿ ತಾಣಗಳು ಎಂದಾಕ್ಷಣ ಬೇರೆ ರಾಜ್ಯಗಳಿಗೆ, ವಿದೇಶಗಳಿಗೆ ಹೋಗುವ ಬದಲಾಗಿ ನಮ್ಮ ನಾಡಿನ ಇಂತಹ ಸುಂದರ ತಾಣಗಳನ್ನು ಕಣ್ತುಂಬಿಸಿಕೊಳ್ಳುವುದು ಅಗತ್ಯ. ಆದ್ದರಿಂದ ಆದಷ್ಟು ರಜಾದಿನಗಳಲ್ಲಿ ನಿಮ್ಮವರೊಂದಿಗೆ ಇಂತಹ ಜಾಗಗಳಿಗೆ ಬಂದು ಸುಂದರ ಕ್ಷಣಗಳನ್ನು ಅನುಭವಿಸಿ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?