‘ಟೈಗರ್​3’ ಚಿತ್ರದ​ ತರಬೇತಿಯ ಆ್ಯಕ್ಷನ್​ ವಿಡಿಯೋ ಕ್ಲಿಪ್​ ಹಂಚಿಕೊಂಡ ಕತ್ರಿನಾ

Tiger 3: ಮಹೇಶ್ ಶರ್ಮಾ ನಿರ್ದೇಶನದ ಟೈಗರ್3 ಚಿತ್ರದಲ್ಲಿ ಮೂಡಿ ಬರಲಿರುವ ವಿಭಿನ್ನ ಆ್ಯಕ್ಷನ್​ಗಳಿಗಾಗಿ ಕತ್ರಿನಾ ತರಬೇತಿ ಪಡೆಯುತ್ತಿದ್ದಾರೆ.

‘ಟೈಗರ್​3’ ಚಿತ್ರದ​ ತರಬೇತಿಯ ಆ್ಯಕ್ಷನ್​ ವಿಡಿಯೋ ಕ್ಲಿಪ್​ ಹಂಚಿಕೊಂಡ ಕತ್ರಿನಾ
ಕತ್ರಿನಾ ಕೈಫ್​
Updated By: shruti hegde

Updated on: Jul 29, 2021 | 5:12 PM

‘ಟೈಗರ್3’ ಚಿತ್ರಕ್ಕಾಗಿ ಕತ್ರಿನಾ ಕೈಫ್(Katrina Kaif) ಹಾಗೂ ಸಲ್ಮಾನ್ ಖಾನ್(Salman Khan) ಕೆಲಸ ಶುರು ಮಾಡಿದ್ದಾರೆ. ಚಿತ್ರದ ಕೆಲವು ಅಪಾಯಕಾರಿ ಮೂವ್​ಮೆಂಟ್ಸ್​ಗಳ ತರಬೇತಿ ಪಡೆಯುತ್ತಿರುವ ವಿಡಿಯೋವನ್ನು ಕತ್ರಿನಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದ ‘ಏಕ್ ಥಾ ಟೈಗರ್’ ಮತ್ತು ‘ಟೈಗರ್ ಜಿಂದಾ ಹೈ’ ಚಿತ್ರಗಳು ಒಳ್ಳೆಯ ಪ್ರಸಿದ್ಧತೆ ಪಡೆದುಕೊಂಡಿತ್ತು. ಇದೀಗ ಅಭಿಮಾನಿಗಳ ಬಹುನಿರೀಕ್ಷಿತ ‘ಟೈಗರ್3’(Tiger 3) ಕೂಡಾ ಜನಮನ ಗೆಲ್ಲುವ ನಿರೀಕ್ಷೆ ಇದೆ.

ಮಹೇಶ್ ಶರ್ಮಾ ನಿರ್ದೇಶನದ ಟೈಗರ್3 ಚಿತ್ರದಲ್ಲಿ ಮೂಡಿ ಬರಲಿರುವ ವಿಭಿನ್ನ ಆ್ಯಕ್ಷನ್​ಗಳಿಗಾಗಿ ಕತ್ರಿನಾ ತರಬೇತಿ ಪಡೆಯುತ್ತಿದ್ದಾರೆ. ಚಾಲೆಂಜಿಂಗ್ ಮೂವ್​ಮೆಂಟ್​ಗಳನ್ನು ಪ್ರಾಕ್ಟೀಸ್ ಮಾಡುತ್ತಿರುವ ಸಣ್ಣ ವಿಡಿಯೋ ಕ್ಲಿಪ್ಅನ್ನು ಹರಿಬಿಟ್ಟಿದ್ದಾರೆ.

ಕೆಲವು ಅಪಾಯಕಾರಿ ಸ್ಟಂಟ್ ಮತ್ತು ಮೂವ್​ಮೆಂಟ್​ಗಳನ್ನು ಕತ್ರಿನಾ ತರಬೇತಿ ಪಡೆಯುತ್ತಿರುವುದನ್ನು ನೋಡಬಹುದು. ಚಿತ್ರದಲ್ಲಿ ಫೈಟಿಂಗ್ ಸನ್ನಿವೇಶದನ ಕೆಲವು ಆ್ಯಕ್ಷನ್​ಗಳನ್ನು ತರಬೇತಿದಾರರು ಹೇಳಿಕೊಡುತ್ತಿದ್ದಾರೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್​ ಜೋಡಿಯಲ್ಲಿ 2012ರಲ್ಲಿ ತೆರೆಕಂಡ ಏಕ್ ಥಾ ಟೈಗರ್ ಹಾಗೂ 2017ರಲ್ಲಿ ತೆರೆಕಂಡ ಟೈಗರ್ ಜಿಂದಾ ಹೈ ಚಿತ್ರ ಬಾಲಿವುಡ್ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಇದೀಗ ಟೈಗರ್​3 ಚಿತ್ರ ಕೂಡಾ ಅಭಿಮಾನಿಗಳನ್ನು ಸೆಳೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಟೈಗರ್​ ಶ್ರಾಫ್​ ಮಸಲ್ಸ್​ ನೋಡಿ ಫಿದಾ ಆದ ಅಭಿಮಾನಿಗಳು; ಇಲ್ಲಿದೆ ವಿಡಿಯೋ

‘Tiger 3’: ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟನೆಯ ’ಟೈಗರ್ 3’ ಚಿತ್ರೀಕರಣ ಮರು ಆರಂಭವಾಗಲಿದೆಯಾ?

Published On - 5:09 pm, Thu, 29 July 21