‘Tiger 3’: ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟನೆಯ ’ಟೈಗರ್ 3’ ಚಿತ್ರೀಕರಣ ಮರು ಆರಂಭವಾಗಲಿದೆಯಾ?

ಬಾಲಿವುಡ್​ನ ಹಿಟ್ ಜೋಡಿ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ನಟನೆಯ ‘ಟೈಗರ್ 3’ ಚಿತ್ರದ ಚಿತ್ರೀಕರಣದ ಮರುಪ್ರಾರಂಭದ ದಿನಾಂಕವನ್ನು ನಿರ್ಧರಿಸಲಾಗಿದೆ. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'Tiger 3': ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟನೆಯ ’ಟೈಗರ್ 3’ ಚಿತ್ರೀಕರಣ ಮರು ಆರಂಭವಾಗಲಿದೆಯಾ?
ಟೈಗರ್ 3 ಚಿತ್ರದ ಪೋಸ್ಟರ್
Follow us
| Updated By: shivaprasad.hs

Updated on:Jul 11, 2021 | 12:10 PM

ಬಾಲಿವುಡ್​ನಲ್ಲಿ ತೆರೆಯ ಮೇಲಿನ ಕಾಂಬಿನೇಷನ್​ನಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿ ಹಿಟ್ ಜೋಡಿ ಎಂದು ಪರಿಗಣಿತವಾಗಿದೆ. ಇವರೀರ್ವರೂ ಜೊತೆಗೆ ನಟಿಸಿದ್ದ ಟೈಗರ್ ಸೀರೀಸ್​ನ ಚಿತ್ರಗಳು ಬಾಲಿವುಡ್ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿತ್ತು. ‘ಏಕ್ ಥಾ ಟೈಗರ್’ ಹಾಗೂ ‘ಟೈಗರ್ ಜಿಂದಾ ಹೈ’ ಚಿತ್ರಗಳು ಒಳ್ಳೆಯ ಕಮಾಯಿ ಮಾಡಿದ್ದವು. ಎರಡೂ ಚಿತ್ರದಲ್ಲೂ ಕತ್ರೀನಾ ಹಾಗೂ ಸಲ್ಮಾನ್ ಜೋಡಿ ಕಾಣಿಸಿಕೊಂಡಿತ್ತು. ಕಳೆದ ವರ್ಷ ಇದೇ ಸೀರೀಸ್​ನಲ್ಲಿ ಮೂರನೇ ಚಿತ್ರವನ್ನು ‘ಯಶ್ ರಾಜ್ ಸ್ಟುಡಿಯೊಸ್’ ಅನೌನ್ಸ್ ಮಾಡಿತ್ತು. ಚಿತ್ರೀಕರಣವೂ ಪ್ರಾರಂಭವಾಗಿತ್ತು. ಆದರೆ ಕರೋನಾ ಹಾಗೂ ಮುಂಬೈಯಲ್ಲಿ ಉಂಟಾದ ಸೈಕ್ಲೋನ್ ಸಹಿತ ಭಾರೀ ಮಳೆಯಿಂದಾಗಿ ಚಿತ್ರೀಕರಣವನ್ನು ಏಪ್ರಿಲ್​ನಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಬಂದಿರುವ ಮಾಹಿತಿಯಂತೆ ಜುಲೈ 23ರಿಂದ ಮುಂಬೈನಲ್ಲಿ ‘ಟೈಗರ್ 3’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ವಾಸ್ತವವಾಗಿ, ಈ ಚಿತ್ರಕ್ಕೆ ಅಧಿಕೃತ ಶೀರ್ಷಿಕೆಯನ್ನು ಇನ್ನೂ ಚಿತ್ರತಂಡ ನಿರ್ಧರಿಸಿಲ್ಲ. ಸದ್ಯಕ್ಕೆ ಟೈಗರ್3 ಹೆಸರಿನಲ್ಲಿ ಚಿತ್ರದ ನಿರ್ಮಾಣ ಕಾರ್ಯದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ಚಿತ್ರದ ವಿಶೇಷತೆಯೆಂದರೆ, ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಬಿಡುಗಡೆ ಮಾಡಿರುವ ಮಾಹಿತಿಯಂತೆ ಇದೇ ತಿಂಗಳ 23ರಿಂದ ಕತ್ರೀನಾ ಹಾಗೂ ಸಲ್ಮಾನ್ ಖಾನ್ ಅವರ ಪಾತ್ರಗಳಿರುವ ದೃಶ್ಯಗಳನ್ನಷ್ಟೇ ಚಿತ್ರೀಕರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಚಿತ್ರದ ಇತರ ತಾರಾಗಣ ಇವರನ್ನು ಕೂಡಿಕೊಳ್ಳಲಿದೆ. ತಂಡದ ಎಲ್ಲರಿಗೂ ಕರೊನಾ ಲಸಿಕೆ ನೀಡಿದ ಬಳಿಕವಷ್ಟೇ ಚಿತ್ರೀಕರಣ ಪ್ರಾರಂಭಿಸಲಾಗುವುದು ಎಂದು ನಿರ್ಮಾಪಕ ಆದಿತ್ಯ ಚೋಪ್ರಾ ಸ್ಪಷ್ಟಪಡಿಸಿದ್ದಾರೆ.

ಇಮ್ರಾನ್ ಹಶ್ಮಿ ಪ್ರತಿನಾಯಕನ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಚಿತ್ರೀಕರಣ ಇನ್ನೂ ಸ್ವಲ್ಪಬಾಕಿಯಿದೆ. ಸಲ್ಮಾನ್ ಹಾಗೂ ಕತ್ರೀನ್ ಅವರ ಶೆಡ್ಯೂಲ್ ಮುಗಿದ ನಂತರ ಇಮ್ರಾನ್ ಹಶ್ಮಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ನಂತರ ಮುಖ್ಯ ದೃಶ್ಯದ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತೌಕ್ತೆ ಚಂಡಮಾರುತದ ಪ್ರಭಾವದಿಂದಾಗಿ ಚಿತ್ರಕ್ಕೆ ಹಾಕಿದ್ದ ಸೆಟ್ ಜಖಂಗೊಂಡಿತ್ತು.ಅದನ್ನು ಮರುನಿರ್ಮಿಸಲು ಆದಿತ್ಯ ಚೋಪ್ರಾ ಹಾಗೂ ನಿರ್ದೇಶಕ ಮನೀಷ್ ಶರ್ಮ ಈ ಮೊದಲು ನಿರ್ಧರಿಸಿದ್ದರು. ಆದರೆ ಈಗ ಆ ಯೋಜನೆಯನ್ನು ಕೈಬಿಡಲಾಗಿದೆ. ವಿದೇಶಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಆಗಸ್ಟ್ 15ರ ನಂತರ ವಿದೇಶದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡವು ನಿರ್ಧರಿಸಿದೆ ಎನ್ನಲಾಗಿದೆ. ಚಿತ್ರದಲ್ಲಿ ಮಧ್ಯ ಏಷ್ಯಾವು ಪ್ರಮುಖ ಭೂಮಿಕೆಯಾಗಿದ್ದು, ಅದನ್ನು ದುಬೈಯ ಮಾರ್ಕೆಟ್​ವೊಂದರಲ್ಲಿ ಚಿತ್ರೀಕರಿಸಬಹುದು ಎನ್ನಲಾಗುತ್ತಿದೆ.

ಈ ಚಿತ್ರಕ್ಕೆ ಬಹುದೊಡ್ಡ ತಾರಾಗಣ ಹಾಗೂ ತಂತ್ರಜ್ಞರು ಕೆಲಸ ಮಾಡುತ್ತಿರುವುದರಿಂದ ಅಭಿಮಾನಿಗಳ ನಿರೀಕ್ಷೆಯೂ ಜೋರಾಗಿಎದ. ಈ ಬಾರಿ ಆದಿತ್ಯ ಚೋಪ್ರಾ ಅವರೇ ‘ವಾರ್’ ಚಿತ್ರದ ಬರಹಗಾರ ಶ್ರೀಧರ್ ರಾಘವನ್ ಜೊತೆ ಸೇರಿ ಕತೆಯನ್ನು ಬರೆದಿದ್ದಾರೆ. ಚಿತ್ರವು 2022ರಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಬಾಲಿವುಡ್​ನ ಬಹುದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಯಶ್ ರಾಜ್ ಫಿಲ್ಮ್ಸ್ ಈ ಬಾರಿ ಎಂತಹ ಚಿತ್ರವನ್ನು ಅಭಿಮಾನಿಗಳಿಗೆ ಉಣಬಡಿಸುತ್ತದೆ ಎಂದು ಕಾದು ನೋಡಬೇಕು.

ಇದನ್ನೂ ಓದಿ: Kannada Movies: ಯೂಟ್ಯೂಬ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದಾದ ಕನ್ನಡದ ಅತ್ಯುತ್ತಮ ಸಿನಿಮಾಗಳ ಪಟ್ಟಿ ಬೇಕೆ?

(Tiger 3 movie shoot will be resume shortly says official sources)

Published On - 12:07 pm, Sun, 11 July 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ