Relationship : ಹುಡುಗನ ಮೊದಲ ಸ್ಪರ್ಶದ ಬಳಿಕ ಹುಡುಗಿಯೂ ಹೀಗೂ ಯೋಚಿಸುತ್ತಾಳಂತೆ

ಪ್ರೀತಿ ಮಧುರವಾದ ಭಾವನೆ. ಪ್ರತಿಯೊಂದು ಜೀವಿಗೂ ಪ್ರೀತಿಯೂ ಅವಶ್ಯಕವಾಗಿ ಬೇಕೇಬೇಕು. ಎಲ್ಲರ ಜೀವನದಲ್ಲಿ ಮೊದಲ ಪ್ರೀತಿಯೂ ಚಿಗುರಿರುತ್ತದೆ. ಹೀಗಾಗಿ ಮೊದಲ ಪ್ರೀತಿ ಹಾಗೂ ಮೊದಲ ಸ್ಪರ್ಶ ಬಹಳ ವಿಶೇಷವಾಗಿರುತ್ತದೆ. ಅದರಲ್ಲಿಯೂ ಪ್ರೀತಿಸಿದ ವ್ಯಕ್ತಿಯೂ ಮೊದಲ ಬಾರಿಗೆ ಆಕೆಯನ್ನು ಮುಟ್ಟಿದಾಗ ಆ ಹುಡುಗಿಯಲ್ಲಿ ನಾನಾ ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆಯಂತೆ.

Relationship : ಹುಡುಗನ ಮೊದಲ ಸ್ಪರ್ಶದ ಬಳಿಕ ಹುಡುಗಿಯೂ ಹೀಗೂ ಯೋಚಿಸುತ್ತಾಳಂತೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 30, 2024 | 4:00 PM

ಪ್ರೀತಿ ಎರಡು ವ್ಯಕ್ತಿಗಳ ಮನಸ್ಸಿನ ಮಧುರವಾದ ಭಾವನೆ, ಈ ಪ್ರೀತಿಗೆ ಕಣ್ಣಿಲ್ಲ. ಯಾರ ಮೇಲೆ ಯಾವಾಗ ಪ್ರೀತಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಒಂದು ಮನಸ್ಸು ಇನ್ನೊಂದು ಮನಸ್ಸಿಗೆ ಮಿಡಿದರೆ ಸಾಕು, ಅಲ್ಲಿಂದಲೇ ಪ್ರೀತಿ ಹುಟ್ಟಿಕೊಳ್ಳುತ್ತದೆ. ಆದರೆ ಎಲ್ಲಾ ಪ್ರೀತಿಗಳು ಮದುವೆ ಎನ್ನುವ ಬಂಧಕ್ಕೆ ಒಳಗಾಗಿ ಸುಖಾಂತ್ಯ ಕಾಣಬೇಕಾಗಿಲ್ಲ. ಆದರೆ ಮೊದಲ ಪ್ರೀತಿ, ಮೊದಲ ಸ್ಪರ್ಶ ಹಾಗೂ ಮೊದಲ ಮುತ್ತು ಇದು ಎಲ್ಲರ ಪಾಲಿಗೂ ವಿಶೇಷವಾಗಿಯೇ ಇರುತ್ತದೆ. ಅದರಲ್ಲಿಯೂ ಪ್ರೀತಿಸುವ ಹುಡುಗನು ಮೊದಲ ಬಾರಿಗೆ ಹುಡುಗಿಯನ್ನು ಸ್ಪರ್ಶಿಸಿದಾಗ ಮೈಜುಮ್ಮ್ ಎನ್ನುವ ಅನುಭವದೊಂದಿಗೆ ಖುಷಿ ಮಿಶ್ರಿತವಾದ ಭಯವು ಕಾಡುತ್ತದೆ. ಈ ವೇಳೆಯಲ್ಲಿ ಆಕೆಯ ಮನಸ್ಸಿನಲ್ಲಿ ಯಾರು ಕೂಡ ಊಹೆ ಮಾಡದ ಪ್ರಶ್ನೆಗಳು ಹಾಗೂ ಆಲೋಚನೆಗಳು ಓಡಾಡುತ್ತವೆ. ಆ ಬಗ್ಗೆ ಯಾರ ಬಳಿಯೂ ಹುಡುಗಿ ಹೇಳಿಕೊಳ್ಳುವುದಿಲ್ಲ.

  • ಪ್ರೀತಿಸುವ ಹುಡುಗನು ಮೊದಲ ಬಾರಿಗೆ ಹುಡುಗಿಯನ್ನು ಸ್ಪರ್ಶಿಸಿದಾಗ ಆಕೆಯ ತಲೆಯಲ್ಲಿ ನಾನಾ ರೀತಿಯ ಯೋಚನೆಗಳು ಬರುತ್ತದೆ. ಹುಡುಗಿಯ ತಲೆಯಲ್ಲಿ ನಾನು ತಪ್ಪು ಮಾಡಿಲ್ಲ ಅಲ್ವಾ ಎನ್ನುವ ಯೋಚನೆಯೇ ಮೊದಲು ಬರುತ್ತದೆ. ಬಾಯ್ ಫ್ರೆಂಡ್ ನನ್ನ ಬಗ್ಗೆ ಏನಂದುಕೊಂಡಿರಬಹುದು ಎನ್ನುವುದು ಎನ್ನುವ ಪ್ರಶ್ನೆಯೂ ಆಕೆಯಲ್ಲಿ ಮೂಡುತ್ತದೆ.
  • ತಾನು ಪ್ರೀತಿಸುವ ಹುಡುಗನು ಮೊದಲ ಬಾರಿಗೆ ಕೈಹಿಡಿದಾಗ ಖುಷಿಯ ಅನುಭವದೊಂದಿಗೆ ಒಮ್ಮೆ ಭಯ ಪಡುತ್ತಾಳೆ. ತದನಂತರದಲ್ಲಿ ಆಕೆಯು ತನ್ನ ಕೈಯನ್ನು ಸದಾ ಹೀಗೆಯೇ ಹಿಡಿದಿರಲಿ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.
  • ಪ್ರೀತಿಸುವ ಹುಡುಗನು ಮೊದಲ ಬಾರಿಗೆ ಸ್ಪರ್ಶಿಸಿದಾಗ ಈತನು ತನ್ನೊಂದಿಗೆ ಹೀಗೆಯೇ ಜೀವನ ಪರ್ಯಂತ ಇರುತ್ತಾನಾ ಎನ್ನುವ ಪ್ರಶ್ನೆಯೂ ಹುಟ್ಟುತ್ತದೆಯಂತೆ. ಈತನು ತನಗೆ ಮೋಸ ಮಾಡಿ ಕೈ ಕೊಟ್ಟರೆ ಏನು ಮಾಡುವುದು ಎಂದು ಯೋಚಿಸುತ್ತಾಳೆ. ಈ ಬಗ್ಗೆ ಆತನ ಬಳಿಯೂ ಹೇಳಿಕೊಳ್ಳದೇ ಮುಚ್ಚಿಡುತ್ತಾಳೆ.
  • ಎಲ್ಲರ ಮುಂದೆ ತನ್ನ ಕೈಯನ್ನು ತಾನು ಪ್ರೀತಿಸುವ ಹುಡುಗ ಹಿಡಿದುಕೊಂಡರೆ ಆತನ ವ್ಯಕ್ತಿತ್ವವನ್ನು ಹೇಗೆ ಎನ್ನುವುದನ್ನು ನಿರ್ಣಯಿಸುತ್ತಾಳೆ. ಕೊನೆಗೆ ಈತನು ತುಂಬಾ ಒಳ್ಳೆಯವನು ಎನ್ನುವ ತೀರ್ಮಾನಕ್ಕೆ ಬಂದು ಪ್ರೇಮಿಯ ಕೈಯನ್ನು ಗಟ್ಟಿ ಹಿಡಿದುಕೊಳ್ಳುತ್ತಾಳೆ. ಈ ವ್ಯಕ್ತಿಯೂ ನನ್ನ ಬದುಕಿನೊಳಗೆ ಬಂದದ್ದು ನನ್ನ ಅದೃಷ್ಟ ಎಂದು ಮನಸ್ಸಿನಲ್ಲಿ ಅಂದುಕೊಳ್ಳತ್ತಾಳಂತೆ.
  • ರಸ್ತೆ ದಾಟುವಾಗ ಹುಡುಗನು ಹುಡುಗಿಯ ಕೈಯನ್ನು ಹಿಡಿದರೆ ಆತನಲ್ಲಿ ಕಾಳಜಿ ವಹಿಸುವ ಹಾಗೂ ಆರೈಕೆ ಮಾಡುವ ಗುಣವಿದೆ ಎಂದು ಅರ್ಥೈಸಿಕೊಳ್ಳುತ್ತಾಳೆ. ಕಷ್ಟದ ಸಮಯದಲ್ಲಿ ಈತನು ನನ್ನ ಕೈ ಬಿಡಲಾರ ಎಂದು ಭಾವಿಸುತ್ತಾಳೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ