AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Leap Day: ಫೆಬ್ರವರಿಯ ಅಧಿಕ ದಿನದಂದು ಜನಿಸಿದರೆ ಏನಾಗುತ್ತದೆ? ಫೆಬ್ರವರಿ 29 ಎಷ್ಟು ವರ್ಷಕ್ಕೊಮ್ಮೆ ಬರುತ್ತದೆ? ಈ ದಿನ ಹುಟ್ಟುವುದು ಅದೃಷ್ಟವೇ?

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ, ಕ್ಯಾಲೆಂಡರ್ ಹೆಚ್ಚುವರಿ ದಿನಾಂಕವನ್ನು ಹೊಂದಿರುತ್ತದೆ. ಅದುವೇ ಫೆಬ್ರವರಿ 29. ಈ ದಿನವನ್ನು ಅಧಿಕ ದಿನವೆಂದು ಕರೆಯಲಾಗುತ್ತದೆ. ಫೆಬ್ರವರಿ 29ರಂದು ಜನಿಸಿದವರನ್ನು ಅಧಿಕವರ್ಷದ ಶಿಶುಗಳು ಅಥವಾ ಲೀಪರ್ಸ್ ಎಂದು ಕರೆಯಲಾಗುತ್ತದೆ.

Leap Day: ಫೆಬ್ರವರಿಯ ಅಧಿಕ ದಿನದಂದು ಜನಿಸಿದರೆ ಏನಾಗುತ್ತದೆ? ಫೆಬ್ರವರಿ 29 ಎಷ್ಟು ವರ್ಷಕ್ಕೊಮ್ಮೆ ಬರುತ್ತದೆ? ಈ ದಿನ ಹುಟ್ಟುವುದು ಅದೃಷ್ಟವೇ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Feb 28, 2023 | 12:41 PM

Share

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ, ಕ್ಯಾಲೆಂಡರ್ ಹೆಚ್ಚುವರಿ ದಿನಾಂಕವನ್ನು ಹೊಂದಿರುತ್ತದೆ. ಅದುವೇ ಫೆಬ್ರವರಿ 29. ಈ ದಿನವನ್ನು ಅಧಿಕ ದಿನವೆಂದು ಕರೆಯಲಾಗುತ್ತದೆ. ಫೆಬ್ರವರಿ 29ರಂದು ಜನಿಸಿದವರನ್ನು ಅಧಿಕವರ್ಷದ ಶಿಶುಗಳು ಅಥವಾ ಲೀಪರ್ಸ್ (Leap Day) ಎಂದು ಕರೆಯಲಾಗುತ್ತದೆ. ಅಧಿಕ ವರ್ಷದಲ್ಲಿ ಫೆಬ್ರವರಿ 29 ರಂದು ಜನಿಸಿದವರಿಗೆ, ನಿಮ್ಮ ಜನ್ಮದಿನವನ್ನು ಯಾವಾಗ ಆಚರಿಸಬೇಕೆಂಬ ಗೊಂದಲ ಇದ್ದೇ ಇರುತ್ತದೆ. ನೀವು ಅದನ್ನು ಮಾರ್ಚ್ 1 ರಂದು ಆಚರಿಸಬಹುದು ಅಥವಾ ಕೆಲವೊಬ್ಬರು ಕ್ರಿಸ್‌ಮಸ್ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ನೀವು ಕೂಡಾ ನಿಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಹುದು. ಇಲ್ಲವೆ ಫೆಬ್ರವರಿಯ ಸರೀ ಆರು ತಿಂಗಳ ನಂತರ ಅಂದರೆ ಆಗಸ್ಟ್ 29ರಂದು ಅಧಿಕ ದಿನದಂದು ಜನಿಸಿದವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಬಹುದು.

ಅಧಿಕ ದಿನದಲ್ಲಿ ಜನಿಸಿದರೆ ಕಾನೂನಾತ್ಮಕವಾಗಿ ಏನಾಗುತ್ತದೆ?

ಫೆಬ್ರವರಿ ತಿಂಗಳಲ್ಲಿ ಹೆಚ್ಚಾಗಿ ನಾವು 28 ದಿನಗಳನ್ನು ಮಾತ್ರ ಕಾಣಬಹುದು. ಕೆಲವೊಮ್ಮೆ 29 ದಿನಗಳು ಕೂಡಾ ಇರುತ್ತವೆ. ಕಾನೂನಿನ ಪ್ರಕಾರ ಈ ಫೆಬ್ರವರಿ 29 ರಂದು ಜನಿಸಿದ ವ್ಯಕ್ತಿಗೆ, ಅಧಿಕವಲ್ಲದ ವರ್ಷದಲ್ಲಿ ಮಾರ್ಚ್ ಒಂದನೇ ತಾರೀಕಿನಂದು 1 ವರ್ಷ ವಯಸ್ಸಾಗಿದೆ ಎಂದು ಪರಿಗಣಿಸಲಾಗುತ್ತದೆ. ಅಧಿಕ ದಿನದಲ್ಲಿ ಜನಿಸಿದವರು ಅಧಿಕವಲ್ಲದ ವರ್ಷಗಳಲ್ಲಿ ಮಾರ್ಚ್ 1ನ್ನು ಕಾನೂನು ಬದ್ಧ ಜನ್ಮದಿನವೆಂದು ಪರಿಗಣಿಸಬಹುದು.

ನೀವು ಅಧಿಕ ದಿನದಂದು ಜನಿಸಿದರೆ ನಿಮ್ಮ ವಯಸ್ಸು ಎಷ್ಟು?

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಧಿಕ ವರ್ಷಗಳು ಸಂಭವಿಸುತ್ತದೆ. 1996ರಲ್ಲಿ ಅಧಿಕ ವರ್ಷ ಸಂಭವಿಸಿದರೆ ನಂತರ ಅಧಿಕ ವರ್ಷ ಸಂಭವಿಸುವುದು 2000, 2004, 2008, 2012, 2016, 2020 ಹೀಗೆ ಅದು ಮುಂದುವರಿಯುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಅಧಿಕ ವರ್ಷದಲ್ಲಿ ಜನಿಸಿದ ಜನರು, ಫೆಬ್ರವರಿ 29 ನಿಜವಾದ ಜನ್ಮದಿನ. ಅಧಿಕವಲ್ಲದ ವರ್ಷಗಳಲ್ಲಿ ನೀವು ಫೆಬ್ರವರಿ 29 ಅಥವಾ ಮಾರ್ಚ್ ರಂದು ಜನ್ಮದಿನವನ್ನು ಆಚರಿಸಬಹುದು.

ಅಧಿಕ ವರ್ಷದಲ್ಲಿ ಜನಿಸಿದವರು ತಮ್ಮ ಜನ್ಮ ದಿನಗಳನ್ನು ಅಧಿಕ ವರ್ಷಗಳಲ್ಲಿ ಮಾತ್ರ ಎಣಿಸಿದರೆ, ಅವರಿಗೆ ಬೆರೆಯವರಿಗಿಂತ 4 ವರ್ಷ ವಯಸ್ಸು ಕಮ್ಮಿ ಇರುತ್ತದೆ. ಅವರು ತಮ್ಮ ಜನ್ಮ ದಿನವನ್ನು ಆಚರಿಸಲು 4 ವರ್ಷ ಕಾಯಬೇಕಾಗುತ್ತದೆ

ನೀವು ಅಧಿಕ ದಿನದಂದು ಜನಿಸಿದಾಗ ಏನಾಗುತ್ತದೆ?

ಅಧಿಕ ದಿನದಂದು ಜನಿಸಿದವರು ಪ್ರತಿ ವರ್ಷ ತಮ್ಮ ನಿಜವಾದ ಜನ್ಮದಿನವನ್ನು ಆಚರಿಸಲು ಸಾಧ್ಯವಿಲ್ಲ. ಆ ದಿನ ಅಂದರೆ ಫೆಬ್ರವರಿ 29 ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುತ್ತದೆ. ಲೀಪ್ ದಿನದಂದು ಜನಿಸಿದ ಯಾರಾದರೂ ಸಾಮಾನ್ಯವಾಗಿ ಫೆಬ್ರವರಿ 28 ಅಥವಾ ಮಾರ್ಚ್ 1 ರಂದು ತಮ್ಮ ಜನ್ಮ ದಿನವನ್ನು ಆಚರಿಸುತ್ತಾರೆ. ಮತ್ತು ತಮ್ಮ ಗುರುತಿನ ಚೀಟಿ ಮತ್ತು ಪ್ರಮುಖ ದಾಖಲೆಗಳಲ್ಲಿ ಮಾರ್ಚ್ 1 ಅಥವಾ ಫೆಬ್ರವರಿ 28 ಈ ಎರಡರಲ್ಲಿ ಯಾವುದಾದರೂ ಒಂದು ದಿನವನ್ನು ತಮ್ಮ ಜನ್ಮ ದಿನಾಂಕವೆಂದು ನಮೂದಿಸಿರುತ್ತಾರೆ.

ಇದನ್ನೂ ಓದಿ: National Science Day 2023: ಸಿವಿ ರಾಮನ್​ ಜನ್ಮದಿನದಂದೇ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸುವುದೇಕೆ? ಇಲ್ಲಿದೆ ಮಾಹಿತಿ

ಅಧಿಕ ದಿನದಂದು ಹುಟ್ಟುವುದು ಅದೃಷ್ಟವೇ?

ಅಧಿಕ ವರ್ಷದ ದಿನದಂದು ಜನಿಸಿದ ಜನರು ಅಸಾಮಾನ್ಯ ಪ್ರತಿಭೆಯನ್ನು ಹೊಂದಿರುತ್ತಾರೆ. ಕೆಲವು ಜ್ಯೋತಿಷಿಗಳು ಲೀಪರ್ಸ್ ಅಸಾಮಾನ್ಯ ಪ್ರತಿಭೆಯನ್ನು ಹೊಂದಿರುತ್ತಾರೆ. ಹಾಗೂ ಅವರು ತುಂಬಾ ವಿಶೇಷ ಮತ್ತು ಅದೃಷ್ಟವಂತರು ಎಂದು ಹೇಳುತ್ತಾರೆ.

ಅತ್ಯಂತ ಹಳೆಯ ಅಧಿಕ ವರ್ಷದ ಮಗು ಯಾರು?

ಮೇರಿ ನಾರ್ರಿಸ್ ಫೆಬ್ರವರಿ 29ರಂದು ಜನಿಸಿದ ಅತ್ಯಂತ ಹಳೆಯ ಮಾನ್ಯತೆ ಪಡೆದ ವ್ಯಕ್ತಿಯಾಗಿದ್ದಾರೆ.

ಅಧಿಕ ವರ್ಷದಲ್ಲಿ ಜನಿಸಿದ ಪ್ರಸಿದ್ಧ ವ್ಯಕ್ತಿಗಳು

ಅಮೇರಿಕನ್ ರಾಪರ್- ಜೆಫ್ರಿ ಬ್ರೂನ್ ಅಟ್ಕಿನ್ಸ್, ರಾಖಿ ಠಾಕ್ರರ್, ಮೊರಾರ್ಜಿ ದೇಸಾಯಿ, ಟೋನಿ ರಾಬಿನ್ಸ್.

Published On - 12:41 pm, Tue, 28 February 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್