Hindu baby name’s: ನಿಮ್ಮ ಮಗುವಿಗೆ W, Y, Z ಅಕ್ಷರದಿಂದ ಪ್ರಾರಂಭವಾಗುವ ಅರ್ಥಪೂರ್ಣ ಹೆಸರು ಇಲ್ಲಿದೆ ನೋಡಿ
ನಮ್ಮ ಹೆಸರುಗಳೇ ನಮ್ಮ ಮೂಲ ಗುರುತು. ಈ ಕಾರಣದಿಂದಲೇ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ವಿಶಿಷ್ಟವಾದ ಹಾಗೂ ಅರ್ಥಪುರ್ಣವಾದ ಹೆಸರುಗಳನ್ನು ಇಡಲು ಬಯಸುತ್ತಾರೆ. ಈಗಿನ ಕಾಲದಲ್ಲಂತೂ ಮಗುವಿಗೆ ಹೆಸರಿಡಬೇಕಾದರೆ ಆ ಹೆಸರಿನ ಅರ್ಥವನ್ನು ಕೂಲಂಕುಶವಾಗಿ ಪರಿಶೀಲಿಸುತ್ತಾರೆ. ಮಕ್ಕಳಿಗೆ ಧಾರ್ಮಿಕವಾದ ಹಾಗೂ ಧನಾತ್ಮಕ ಕಂಪನವನ್ನು ನೀಡುವ ಹೆಸರುಗಳನ್ನು ಇಡಲು ಬಯಸುತ್ತಾರೆ. ನಿಮ್ಮ ನವಜಾತ ಶಿಶುವಿಗೆ ಒಂದೊಳ್ಳೆ ಅರ್ಥಪೂರ್ಣವಾದ ಹೆಸರನ್ನು ಹುಡುಕುತ್ತಿದ್ದೀರಾ? ಇಲ್ಲಿವೆ ಕೆಲವು ಇಲ್ಲಿವೆ W, Y ಹಾಗೂ Z ಅಕ್ಷರದಿಂದ ಪ್ರಾರಂಭವಾಗುವ ಅರ್ಥಗರ್ಭಿತವಾದ ಹೆಸರುಗಳು.
ಪ್ರತಿಯೊಬ್ಬ ಪೋಷಕರು ತಮಗೆ ಹುಟ್ಟುವ ಮಗುವಿನ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿರುತ್ತಾರೆ. ಅದರಲ್ಲೂ ಮಗುವಿಗೆ ಒಂದೊಳ್ಳೆ ಅರ್ಥವಿರುವ ಹೆಸರಿಡಬೇಕು ಎಂದು ಪ್ರತಿಯೊಬ್ಬ ಪೋಷಕರು ಬಯಸುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ವಿಶಿಷ್ಟವಾಗಿ ದೇವರು, ಪ್ರಕೃತಿ ಹಾಗೂ ಯಶಸ್ಸಿನ ಅರ್ಥ ಸಂಸ್ಕೃತ ಪದ, ಪುರಾತನ ಹಾಗೂ ವೇದಗಳ ಕಾಲದ ಅರ್ಥಗರ್ಭಿತ ಹೆಸರುಗಳನ್ನು ಮಗುವಿಗೆ ಇಡಬೇಕೆಂದು ಬಯಸುತ್ತಾರೆ. ಏಕೆಂದರೆ ಅನೇಕರು ಹೆಸರುಗಳಲ್ಲಿ ವ್ಯಕ್ತಿತ್ವವು ಅಡಗಿರುತ್ತದೆ ಎಂದು ನಂಬಿದ್ದಾರೆ. ಹಾಗಾಗಿ ಪ್ರತಿಯೊಬ್ಬರು ಧನಾತ್ಮಕ ಕಂಪನವನ್ನು ನೀಡುವ ಹೆಸರುಗಳನ್ನೇ ಇಡುತ್ತಾರೆ. ಈಗಂತೂ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಕೂಡಾ ತಮ್ಮ ಮಗುವಿಗೆ ಧಾರ್ಮಿಕ ಅರ್ಥವಿರುವ ಹೆಸರುಗಳನ್ನಿಡುತ್ತಾರೆ. ಉದಾಹರಣೆಗೆ ನೋಡುವುದಾದರೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ದಂಪತಿ ತಮ್ಮ ಮಗುವಿಗೆ ‘ವಾಮಿಕ’ ಎಂಬ ಹೆಸರನ್ನಿಟ್ಟಿದ್ದಾರೆ. ಈ ಹೆಸರಿನ ಅರ್ಥ ದುರ್ಗಾ ದೇವಿ ಎಂಬುದಾಗಿದೆ. ಇನ್ನೂ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಮಗಳಿಗೆ ಮಾಲ್ತಿ ಮೇರಿ ಎಂಬ ಹೆಸರನ್ನಿಟ್ಟಿದ್ದಾರೆ. ಮಾಲ್ತಿ ಎಂಬುದು ಸಂಸ್ಕೃತ ಪದವಾಗಿದ್ದು, ಪರಿಮಳಯುಕ್ತವಾದ ಹೂವು ಅಥವಾ ಚಂದ್ರನ ಬೆಳಕು ಎಂಬ ಅರ್ಥವನ್ನು ಸೂಚಿಸುತ್ತದೆ. ಅದೇ ರೀತಿ ನಿಮ್ಮ ನವಜಾತ ಶಿಶುವಿಗೆ ಧಾರ್ಮಿಕವಾದ, ಹಾಗೂ ಧನಾತ್ಮಕ ಕಂಪನವನ್ನು ನೀಡುವ ಹೆಸರನ್ನು ಇಡಬೇಕೆಂದು ಬಯಸಿದ್ದೀರಾ? ಇಲ್ಲಿವೆ ಕೆಲವು ಅರ್ಥಪೂರ್ಣ ಹೆಸರುಗಳು.
ಡಬ್ಲ್ಯೂ, ವೈ ಹಾಗೂ ಝಡ್ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಹೆಸರುಗಳು:
ವಾಮನ್ : ಈ ಹೆಸರು ವಿಷ್ಣುವಿನ ಐದನೇ ಅವತಾರವಾದ ವಾಮನ ಅವತಾರವನ್ನು ಸೂಚಿಸುತ್ತದೆ.
ವಾಮಿಲ್ : ಎಂದರೆ ಸುಂದರವಾದುದು ಎಂದರ್ಥ
ವೇದಾಂತ್: ಧರ್ಮ ಗ್ರಂಧಗಳು, ಎಲ್ಲದರ ರಾಜ ಎಂಬೆಲ್ಲಾ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.
ಯಾಚನ್: ಪ್ರಾರ್ಥನೆ ಎಂಬ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.
ಯಶವನ್: ವಿಜೇತ ಎಂಬ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.
ಯಜ್ಞೇಶ್: ಯಜ್ಞದ ಅಗ್ನಿಯ ಅಧಿಪತಿ ಎಂಬ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.
ಯಜ್: ಎಂದರೆ ಒಬ್ಬ ಋಷಿ ಹಾಗೂ ಇದು ಶಿವನ ಇನ್ನೊಂದು ಹೆಸರು
ಯಜುರ್ವ್: ಎಂದರೆ ವೈದಿಕ ಪೂಜೆ ಎಂದರ್ಥ.
ಯಶ್: ಈ ಹೆಸರು ವಿಜಯ, ಯಶಸ್ಸಿನ ಅರ್ಥವಾಗಿದೆ.
ಯಶವಂತ: ಯಾವಾಗಲೂ ಪ್ರಸಿದ್ಧಿಯನ್ನು ಹೊಂದು ಎಂಬ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.
ಯಶ್ ದೀಪ್: ಎಂದರೆ ಯಶಸ್ಸು, ವೈಭವದ ಬೆಳಕು ಎಂದರ್ಥ
ಯಶೇಶ್: ಎಂದರೆ ಖ್ಯಾತಿ
ಯಾದ್ವಿಕ್ : ಈ ಹೆಸರು ವಿಶಿಷ್ಟವಾದ ಎಂಬ ಅರ್ಥವನ್ನು ಸೂಚಿಸುತ್ತದೆ.
ಯಜತ್ : ಈ ಹೆಸರಿನ ಅರ್ಥ ಪವಿತ್ರ ಮತ್ತು ದೈವಿಕ
ಯಕ್ಷ್: ದೇವರ ಪ್ರತಿನಿಧಿ ಎಂಬುದು ಈ ಹೆಸರಿನ ಅರ್ಥವಾಗಿದೆ.
ಯಶ್ವಿನ್: ಕೃಷ್ಣ ದೇವರು, ಸೂರ್ಯನ ಉದಯ ಎಂಬ ಅರ್ಥವನ್ನು ಸೂಚಿಸುತ್ತದೆ.
ಯಥಾರ್ಥ್: ಯಥಾರ್ಥ್ ಎಂದರೆ ಸರಿಯಾದ, ಸತ್ಯ.
ಯತೀನ್: ತಪಸ್ವಿ ಎಂಬ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.
ಯಶಸ್ವಿನ್: ಈ ಹೆಸರು ಯಶಸ್ವಿಯ ಸಂಕೇತವಾಗಿದೆ.
ಯಮಿತ್: ಎಂದರೆ ಸಂಯಮ ಎಂದರ್ಥ
ಯಶಿತ್: ಖ್ಯಾತಿಯನ್ನು ತರುವ ವ್ಯಕ್ತಿ ಎಂಬ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.
ಯಥ್ವಿಕ್: ಈ ಹೆಸರಿನ ಅರ್ಥ ಸಾಂಪ್ರದಾಯಿಕ ಹಾಗೂ ಯಶಸ್ಸು
ಜಿಯಾನ್ : ಈ ಹೆಸರಿನ ಅರ್ಥ ಜೀವನ, ಬಲಶಾಲಿ
ಝಿಹಾನ್: ಹೊಳಪು ಎಂಬ ಅರ್ಥವನ್ನು ಸೂಚಿಸುತ್ತದೆ.
ಝವಿಯಾನ್: ಎಂದರೆ ಬೆಳಕು ಎಂದರ್ಥ
ಡಬ್ಲ್ಯೂ, ವೈ ಮತ್ತು ಝಡ್ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರು
ವಾಮಿಕ: ಈ ಹೆಸರು ದೇವಿ ದುರ್ಗೆಯ ಅರ್ಥವನ್ನು ನೀಡುತ್ತದೆ.
ಯಾಚನ: ಮನವಿ, ಪ್ರಾರ್ಥನೆ ಎಂಬರ್ಥವನ್ನು ಸೂಚಿಸುತ್ತದೆ.
ಯಶವಿನಿ: ಎಂದರೆ ಲಕ್ಷ್ಮೀದೇವಿ ಹಾಗೂ ಯಶಸ್ಸು ಎಂಬ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.
ಯಶಿತಾ: ಈ ಹೆಸರಿನ ಅರ್ಥ ಯಶಸ್ವಿ ಅಥವಾ ಸಮೃದ್ಧಿ
ಯಶವಿ: ಎಂದರೆ ಖ್ಯಾತಿ ಎಂದರ್ಥ
ಯೋಶಿನಿ: ಸಂತೋಷವನ್ನು ಪಸರಿಸುವವಳು ಎಂಬ ಅರ್ಥವನ್ನು ಸೂಚಿಸುತ್ತದೆ.
ಯುತಿಕಾ: ಎಂದರೆ ಹೂವು
ಯಾದವಿ: ಎಂದರೆ ದುರ್ಗಾದೇವಿ
ಯಾಮಿ: ಮಾರ್ಗ, ಪ್ರಗತಿ, ಅಪ್ಸರೆ ಕನ್ಯೆ ಎಂಬೆಲ್ಲಾ ಅರ್ಥವನ್ನು ನೀಡುತ್ತದೆ.
ಯಾಗಮಿ: ಉಜ್ವಲ ಎಂಬ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.
ಯಜ್ಞಿತಃ: ಪೂಜೆ ಎಂದರ್ಥ.
ಯಹಸ್ಮಿತಾ: ಈ ಹೆಸರು ಶಕ್ತಿಯುತ, ಬಲಶಾಲಿ ಎಂಬ ಅರ್ಥವನ್ನು ಸೂಚಿಸುತ್ತದೆ.
ಯಕ್ಷಲಿ: ಯಕ್ಷ ದೇವರು, ಪ್ರಕೃತಿಯ ಪಾಲಕ ಎಂಬ ಅರ್ಥವನ್ನು ಸೂಚಿಸುತ್ತದೆ.
ಯಕ್ಷತ್ರ: ನಕ್ಷತ್ರದಂತೆ ಪ್ರಕಾಶವಾನವಾದ್ದು ಎಂಬುದು ಈ ಹೆಸರಿನ ಅರ್ಥ
ಜಾರಾ: ತೇಜಸ್ಸು, ಅರಳುವ ಹೂವು ಎಂಬುದು ಈ ಹೆಸರಿನ ಅರ್ಥವಾಗಿದೆ.
ಜೆನಿಶಾ: ದೇವರ ಕೃಪೆಯುಳ್ಳವನು, ಒಬ್ಬ ಉನ್ನತ ವ್ಯಕ್ತಿ ಎಂಬ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.
ಜೀಯಾ: ವೈಭವ, ಬೆಳಕು ಎಂಬ ಅರ್ಥವನ್ನು ಸೂಚಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: