Makar Sankranti 2024: ಸಂಕ್ರಾಂತಿಯಂದು ಸುಲಭವಾಗಿ ತಯಾರಿಸಬಹುದಾದ ಪಾಕವಿಧಾನಗಳು ಇಲ್ಲಿವೆ

| Updated By: ಅಕ್ಷತಾ ವರ್ಕಾಡಿ

Updated on: Jan 12, 2024 | 8:45 PM

ಮಕರ ಸಂಕ್ರಾಂತಿಯು ಸಂತೋಷ ಮತ್ತು ಸಾಮರಸ್ಯದಿಂದ ಆಚರಿಸುವ ಹಬ್ಬ ವಾಗಿರುವುದರಿಂದ ಸಿದ್ಧತೆ ವಿಶಿಷ್ಟವಾಗಿದ್ದರೆ ಚೆಂದ. ಹಾಗಾಗಿ, ಕೆಲವು ರುಚಿಕರವಾದ ಮತ್ತು ಸುಲಭವಾದ ಸಾಂಪ್ರದಾಯಿಕ ಪಾಕವಿಧಾನಗಳು ಇಲ್ಲಿವೆ. ಅವು ಅದ್ಭುತ ಮಾತ್ರವಲ್ಲದೆ ಆರೋಗ್ಯ ಪ್ರಯೋಜನಗಳಿಂದ ಕೂಡ ಸಮೃದ್ಧವಾಗಿದೆ.

Makar Sankranti 2024: ಸಂಕ್ರಾಂತಿಯಂದು ಸುಲಭವಾಗಿ ತಯಾರಿಸಬಹುದಾದ  ಪಾಕವಿಧಾನಗಳು ಇಲ್ಲಿವೆ
Makar Sankranti 2024
Image Credit source: Pinterest
Follow us on

ಮಕರ ಸಂಕ್ರಾಂತಿ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. ಮನೆಗಳಿಗೆ ಸಿಂಗಾರ ಮಾಡುವುದರಿಂದ ಹಿಡಿದು, ಪೂಜಾ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಿರುತ್ತದೆ. ಇದರ ಜೊತೆಗೆ ಸಾಂಪ್ರದಾಯಿಕ ಭಕ್ಷ್ಯಗಳ ತಯಾರಿಕೆಯ ಬಗ್ಗೆಯೂ ಕೂಡ ಮನೆಗಳಲ್ಲಿ ಚರ್ಚೆ ನಡೆಯುತ್ತಿರುತ್ತದೆ. ಏಕೆಂದರೆ ಹಬ್ಬದ ಆಹಾರವೇ ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದಲ್ಲದೆ ಮಕರ ಸಂಕ್ರಾಂತಿಯು ಸಂತೋಷ ಮತ್ತು ಸಾಮರಸ್ಯದಿಂದ ಆಚರಿಸುವ ಹಬ್ಬ ವಾಗಿರುವುದರಿಂದ ಸಿದ್ಧತೆ ವಿಶಿಷ್ಟವಾಗಿದ್ದರೆ ಚೆಂದ. ಹಾಗಾಗಿ, ಕೆಲವು ರುಚಿಕರವಾದ ಮತ್ತು ಸುಲಭವಾದ ಸಾಂಪ್ರದಾಯಿಕ ಪಾಕವಿಧಾನಗಳು ಇಲ್ಲಿವೆ, ಅವು ಅದ್ಭುತ ಮಾತ್ರವಲ್ಲದೆ ಆರೋಗ್ಯ ಪ್ರಯೋಜನಗಳಿಂದ ಕೂಡ ಸಮೃದ್ಧ ವಾಗಿದೆ.

ಮಕರ ಸಂಕ್ರಾಂತಿಯಂದು ತಯಾರಿಸಬಹುದಾದ ಪ್ರಸಿದ್ಧ ಆಹಾರಗಳು:

ಮಕರ ಸಂಕ್ರಾಂತಿಯ ಸಮಯದಲ್ಲಿ ಎಳ್ಳನ್ನು ಸೇವಿಸುವ ಮಹತ್ವವು ಧಾರ್ಮಿಕ ಮತ್ತು ವೈಜ್ಞಾನಿಕವಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಎಳ್ಳು ವಿಷ್ಣುವಿನ ದೇಹದಿಂದ ಹುಟ್ಟಿಕೊಂಡಿದ್ದು, ಇದನ್ನು ಬಳಸಿಕೊಂಡು ನೈವೇದ್ಯವನ್ನು ಮಾಡುವುದರಿಂದ ಎಲ್ಲಾ ಪಾಪಗಳಿಂದ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಈ ಸಮಯ ಚಳಿಗಾಲವಾದ್ದರಿಂದ ಸಹಜವಾಗಿ ಇದು ದೇಹವನ್ನು ಬೆಚ್ಚಗಿಡುತ್ತದೆ ಮತ್ತು ಹೃದಯಕ್ಕೂ ಒಳ್ಳೆಯದು. ಈ ಮಕರ ಸಂಕ್ರಾಂತಿಯಂದು ನೀವು ಪ್ರಯತ್ನಿಸಲೇಬೇಕಾದ ರುಚಿಕರವಾದ ಪಾಕವಿಧಾನಗಳ ಪಟ್ಟಿ ಇಲ್ಲಿದೆ!

ಎಳ್ಳಿನ ಲಡ್ದು ಅಥವಾ ಎಳ್ಳುಂಡೆ:

ಎಳ್ಳು, ಕಡಲೆಕಾಯಿ ಮತ್ತು ಬೆಲ್ಲದಿಂದ ತಯಾರಿಸಲಾದ ಈ ಸಿಹಿ ಖಾದ್ಯವನ್ನು ಚಳಿಗಾಲದಲ್ಲಿ ಸೇವನೆ ಮಾಡುವುದು ಉತ್ತಮ ಎನ್ನಲಾಗುತ್ತದೆ. ಇದನ್ನು ನೀವು ಮೊದಲೇ ತಯಾರಿಸಿಯೂ ಇಟ್ಟುಕೊಳ್ಳಬಹುದು. ಇನ್ನು ಬೆಲ್ಲದ ಪಾಕ ಸರಿಯಾಗಿ ಬಂದಲ್ಲಿ ಎಳ್ಳಿನ ಉಂಡೆಯೂ ರುಚಿಕರವಾಗಿರುತ್ತದೆ.

ಬೈಗನ್ ಅಥವಾ ಬದನೇಕಾಯಿ ಪಕೋಡಾ:

ಕತ್ತರಿಸಿದ ಬದನೆಕಾಯಿ, ಹುರಿದ ಕಡಲೆ ಪುಡಿ ಮತ್ತು ಮಸಾಲೆಗಳೊಂದಿಗೆ ತಯಾರಿಸಲಾದ ಈ ಸೈಡ್ ಡಿಶ್ ಅನ್ನು ಖಿಚಡಿಯೊಂದಿಗೆ ಬಡಿಸಲಾಗುತ್ತದೆ. ಇದು ಕೂಡ ರುಚಿಯ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಖಿಚಡಿ:

ಇದು ಅಕ್ಕಿ, ಹೆಸರು ಬೇಳೆ, ದೇಸಿ ತುಪ್ಪ, ಮಸಾಲೆಗಳು ಮತ್ತು ಸಾಕಷ್ಟು ಹಸಿರು ತರಕಾರಿಗಳ ಮಿಶ್ರಣದಿಂದ ಮಾಡುವ ರೆಸಿಪಿಯಾಗಿದೆ. ಇದನ್ನು ಮೊಸರು ಮತ್ತು ಬದನೇಕಾಯಿ ಪಕೋಡಾದೊಂದಿಗೆ ಸವಿಯಲು ಉತ್ತಮವಾಗಿರುತ್ತದೆ.

ಎಳ್ಳು ಚಿಕ್ಕಿ ಅಥವಾ ತಿಲ್ ಚಿಕ್ಕಿ:

ಮಕರ ಸಂಕ್ರಾತಿ ಹಬ್ಬದ ಆಚರಣೆಯ ಸಮಯದಲ್ಲಿ ಮುಖ್ಯವಾಗಿ ಮಾಡುವ ಆಹಾರಗಳಲ್ಲಿ ಒಂದಾದ ಈ ಎಳ್ಳು ಚಿಕ್ಕಿಯು ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮುಖ್ಯವಾಗಿ ಎಳ್ಳು ಮತ್ತು ಕರಗಿದ ಬೆಲ್ಲದೊಂದಿಗೆ ತಯಾರಿಸಲಾಗುತ್ತದೆ. ಬಳಿಕ ಸ್ನೇಹಿತರು ಮತ್ತು ಕುಟುಂಬದವರ ನಡುವೆ ವಿನಿಮಯ ಮಾಡಿಕೊಳ್ಳಲಾಗುತ್ತದೆ.

ಪಿನ್ನಿ ಅಥವಾ ಗೋಧಿ ಹಿಟ್ಟಿನ ಲಡ್ಡು:

ಈ ಸಿಹಿ ಖಾದ್ಯವನ್ನು ಗೋಧಿ ಹಿಟ್ಟು, ಹಾಲು, ದೇಸಿ ತುಪ್ಪ ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ತುಪ್ಪವನ್ನು ಎಷ್ಟು ಸೇರಿಸಿದ್ದರೆ ಎಂಬುದರ ಮೇಲೆ ರುಚಿ ವ್ಯತ್ಯಾಸವಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ಸೇರಿಸುವುದರಿಂದ ಲಡ್ಡು ಕೂಡ ರುಚಿಯಾಗಿರುತ್ತದೆ.

ಪಾಯಸ:

ಅಕ್ಕಿ, ಹಾಲು, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ, ಬೆಲ್ಲ, ಪಿಸ್ತಾ, ಬಾದಾಮಿ ಮತ್ತು ಕೇಸರಿಯ ಎಳೆಗಳಿಂದ ತಯಾರಿಸಿದ ಜನಪ್ರಿಯ ಭಕ್ಷ್ಯವಾದ ಪಾಯಸವನ್ನು ನೀವು ಹಬ್ಬದ ಸಮಯದಲ್ಲಿ ಮಾಡಬಹುದು. ಇದನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ಬೇರೆ ಬೇರೆ ರೀತಿಯಲ್ಲಿ ಮಾಡಲಾಗುತ್ತದೆ.

ಬೆಲ್ಲದ ಅನ್ನ ಅಥವಾ ಬೆಲ್ಲದ ಪಾಯಸ:

‘ರಸಿಯಾವೊ’ ಎಂದೂ ಕರೆಯಲ್ಪಡುವ ಖೀರ್ ನ ಈ ರೂಪಾಂತರವಾದ ಇದು ಸ್ವಲ್ಪ ಗಾಢ ಬಣ್ಣದಲ್ಲಿರುತ್ತದೆ ಮತ್ತು ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿಯ ಸಮ್ಮಿಶ್ರಣ ನಿಮಗೆ ಅತ್ಯಧಿಕ ರುಚಿಯನ್ನು ನೀಡುತ್ತದೆ. ಬೆಲ್ಲದ ಅನ್ನ ಮಾಡಲೂ ಸುಲಭವಾಗಿದ್ದು ತಿನ್ನಲು ರುಚಿಯಾಗಿಯೂ ಇರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: