AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Makar Sankranti 2024: ನೈವೇದ್ಯಕ್ಕೆ ಶ್ರೇಷ್ಠವಾಗಿರುವ ತೆಂಗಿನಕಾಯಿ ಲಡ್ಡಿನ ರೆಸಿಪಿ ಇಲ್ಲಿದೆ

ಹಬ್ಬದ ದಿನ ದೇವರ ನೈವೇದ್ಯಕ್ಕೆ ಹಾಗೂ ಎಲ್ಲರಿಗೂ ಇಷ್ಟವಾಗುವಂತೆ ಯಾವ ರೀತಿಯ ತಿಂಡಿ- ತಿನಿಸುಗಳನ್ನು ಮಾಡಬೇಕು ಎಂದು ಯೋಚಿಸುತ್ತಿರುವವರಿಗೆ ತೆಂಗಿನಕಾಯಿ ಲಡ್ಡು ಉತ್ತಮ ಆಯ್ಕೆಯಾಗಿದೆ. ನಿಮ್ಮ ಪ್ರೀತಿ ಪಾತ್ರರಿಗಾಗಿ ಸುಲಭವಾಗಿ ತಯಾರಿಸಿ ಕೊಡಬಹುದಾದ ಸಿಹಿ ತಿಂಡಿಗಳಲ್ಲಿ ಇದು ಒಂದಾಗಿದೆ. ಇವುಗಳನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಕೇವಲ 10 ನಿಮಿಷಗಳಲ್ಲಿ ಇದನ್ನು ನೀವು ತಯಾರಿಸಬಹುದು.

Makar Sankranti 2024: ನೈವೇದ್ಯಕ್ಕೆ ಶ್ರೇಷ್ಠವಾಗಿರುವ ತೆಂಗಿನಕಾಯಿ ಲಡ್ಡಿನ ರೆಸಿಪಿ ಇಲ್ಲಿದೆ
Coconut LadduImage Credit source: Pinterest
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on:Jan 13, 2024 | 12:08 PM

Share

ಸಂಕ್ರಾಂತಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಿದ್ದು ಪೂರ್ವ ತಯಾರಿ ಈಗಾಗಲೇ ಆರಂಭವಾಗಿದೆ. ಅದರಲ್ಲಿಯೂ ಹಬ್ಬದ ದಿನ ದೇವರ ನೈವೇದ್ಯಕ್ಕೆ ಹಾಗೂ ಎಲ್ಲರಿಗೂ ಇಷ್ಟವಾಗುವಂತೆ ಯಾವ ರೀತಿಯ ತಿಂಡಿ- ತಿನಿಸುಗಳನ್ನು ಮಾಡಬೇಕು ಎಂದು ಯೋಚಿಸುತ್ತಿರುವವರಿಗೆ ತೆಂಗಿನಕಾಯಿ ಲಡ್ಡು ಉತ್ತಮ ಆಯ್ಕೆಯಾಗಿದೆ. ನಿಮ್ಮ ಪ್ರೀತಿ ಪಾತ್ರರಿಗಾಗಿ ಸುಲಭವಾಗಿ ತಯಾರಿಸಿ ಕೊಡಬಹುದಾದ ಸಿಹಿ ತಿಂಡಿಗಳಲ್ಲಿ ಇದು ಒಂದಾಗಿದೆ. ಇವುಗಳನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಕೇವಲ 10 ನಿಮಿಷಗಳಲ್ಲಿ ಇದನ್ನು ನೀವು ತಯಾರಿಸಬಹುದು. ಇದರಿಂದ ಹಬ್ಬದ ದಿನಗಳಲ್ಲಿ ನೀವು ದೇವರಿಗೆ ಇಡುವ ನೈವೇದ್ಯವನ್ನು ಬೇಗನೆ ಮಾಡಿ ಮುಗಿಸಬಹುದು. ಇದನ್ನು ಮಾಡಲು ನಿಮಗೆ ಬೇಕಾಗಿರುವುದು ತೆಂಗಿನ ತುರಿ, ಗಸಗಸೆ ಬೀಜಗಳು, ಬೆಲ್ಲ ಮತ್ತು ಏಲಕ್ಕಿ ಪುಡಿ. ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ರುಬ್ಬಿ ನುಣ್ಣಗೆ ಪುಡಿ ಮಾಡಿ ಮತ್ತು ನಿಮ್ಮ ಕೈಗಳ ಸಹಾಯದಿಂದ ಬಾಲ್ ಆಕೃತಿಯಲ್ಲಿ ಮಾಡಿ. ಈ ಲಡ್ಡುಗಳು ರುಚಿಯಲ್ಲಿ ಅದ್ಭುತವಾಗಿರುತ್ತದೆ ಮತ್ತು ಪೌಷ್ಟಿಕವಾಗಿಯೂ ಇರುತ್ತದೆ.

ತೆಂಗಿನಕಾಯಿ ಲಡ್ಡು ಮಾಡಲು ಬೇಕಾಗುವ ಪದಾರ್ಥಗಳು:

  • 250 ಗ್ರಾಂ ತುರಿದ ತೆಂಗಿನಕಾಯಿ
  • 20 ಗ್ರಾಂ ಗಸಗಸೆ ಬೀಜಗಳು
  • 50 ಗ್ರಾಂ ಬೆಲ್ಲ
  • 1 ಟೀ ಸ್ಪೂನ್ ಏಲಕ್ಕಿ ಪುಡಿ

ಇದನ್ನೂ ಓದಿ: ಸಂಕ್ರಾಂತಿಯಂದು ಸುಲಭವಾಗಿ ತಯಾರಿಸಬಹುದಾದ ಪಾಕವಿಧಾನಗಳು ಇಲ್ಲಿವೆ

ತೆಂಗಿನಕಾಯಿ ಲಡ್ಡು ತಯಾರಿಸುವುದು ಹೇಗೆ?

  • ಹಂತ 1: ನೀವು ಈ ಸಿಹಿ ಪಾಕ ವಿಧಾನವನ್ನು ತಯಾರಿಸಲು ಮೊದಲು ಒಂದು ಬಟ್ಟಲು ತೆಗೆದುಕೊಂಡು ಅದರಲ್ಲಿ ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
  • ಹಂತ 2: ಮಿಶ್ರಣವನ್ನು ಗ್ರೈಂಡರ್ ಜಾರ್ ಗೆ ಹಾಕಿ ಒರಟು ಪುಡಿಯಾಗಿ ರುಬ್ಬಿಕೊಳ್ಳಿ.
  • ಹಂತ 3: ಒಂದು ಚಮಚವನ್ನು ಬಳಸಿ ಮಿಶ್ರಣವನ್ನು ಚೆನ್ನಾಗಿ ಕಲಕಿ ಮತ್ತೆ ನುಣ್ಣಗೆ ಪುಡಿ ಮಾಡಿ.
  • ಹಂತ 4: ಈ ಮಿಶ್ರಣವನ್ನು ಒಂದು ಬಟ್ಟಲು ಅಥವಾ ತಟ್ಟೆಗೆ ವರ್ಗಾಯಿಸಿ, ಸ್ವಲ್ಪ ಎಣ್ಣೆ ಬಿಟ್ಟಿರುವುದನ್ನು ನೀವು ಇಲ್ಲಿ ಗಮನಿಸಬಹುದಾಗಿದೆ.
  • ಹಂತ 5: ನಿಮ್ಮ ಕೈಯಲ್ಲಿ ಅದರ ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ನಿಮಗೆ ಬೇಕಾದ ರೀತಿಯಲ್ಲಿ ಲಡ್ಡು ಮಾಡಿ. ಅವುಗಳನ್ನು ಆನಂದಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

Published On - 12:07 pm, Sat, 13 January 24