Unsafe Places: ಭಾರತದ ಅತ್ಯಂತ ಅಪಾಯಕಾರಿ ತಾಣಗಳು
ಭಾರತವು ಸಾಂಸ್ಕೃತಿಕ ವೈವಿಧ್ಯತೆಯ ಜೊತೆಗೆ, ವಿಶಿಷ್ಟವಾದ ನೈಸರ್ಗಿಕ ಭೂ ದೃಶ್ಯಗಳನ್ನು ಸಹ ಹೊಂದಿದೆ. ಇಲ್ಲಿರುವ ಕೆಲವು ಸ್ಥಳಗಳು ನಿಮಗೆ ಶಾಂತಿಯ ಅನುಭವ ನೀಡಿದರೆ, ಇನ್ನೂ ಕೆಲವು ತಾಣಗಳು ಭಯಾನಕ ಅನುಭವವನ್ನು ನೀಡಬಹುದು. ಆದ್ದರಿಂದ ಭಾರತದ ಕೆಲವೊಂದಿಷ್ಟು ಅಪಾಯಕಾರಿ ತಾಣಗಳ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಪ್ರಯಾಣವನ್ನು ಇಷ್ಟಪಡುವವರು ಪ್ರತೀ ವಾರಾಂತ್ಯದಲ್ಲಿ ಅಥವಾ ರಜಾದಿನಗಳಲ್ಲಿ ಹೊಸ ತಾಣಗಳನ್ನು ಅನ್ವೇಷಿಸುತ್ತಾ ಇರುತ್ತಾರೆ. ಆದರೆ ನೀವು ಯಾವುದೇ ಪ್ರದೇಶಗಳಿಗೆ ಭೇಟಿ ನೀಡುವ ಮೊದಲು ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನಹರಿಸುವುದು ಅತ್ಯಂತ ಅಗತ್ಯ. ಭಾರತವು ಸಾಂಸ್ಕೃತಿಕ ವೈವಿಧ್ಯತೆಯ ಜೊತೆಗೆ, ವಿಶಿಷ್ಟವಾದ ನೈಸರ್ಗಿಕ ಭೂ ದೃಶ್ಯಗಳನ್ನು ಸಹ ಹೊಂದಿದೆ. ಇಲ್ಲಿರುವ ಕೆಲವು ಸ್ಥಳಗಳು ನಿಮಗೆ ಶಾಂತಿಯನ್ನು ನೀಡಿದರೆ, ಇನ್ನೂ ಕೆಲವು ತಾಣಗಳು ಭಯಾನಕ ಅನುಭವವನ್ನು ನೀಡಬಹುದು. ಆದ್ದರಿಂದ ಭಾರತದ ಕೆಲವೊಂದಿಷ್ಟು ಅಪಾಯಕಾರಿ ತಾಣಗಳ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಚಂಬಲ್ ಕಣಿವೆ:
ಚಂಬಲ್ ಕಣಿವೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಅಪಾಯಕಾರಿ ತಾಣ. ಒಂದು ಕಾಲದಲ್ಲಿ ಈ ಕಣಿವೆ ಡಕಾಯಿತರ ಅಡಗುತಾಣವಾಗಿತ್ತು. ಆದರೆ ಇಂದಿಗೂ ಜನರು ಭಯದಿಂದ ಇಲ್ಲಿಗೆ ಬರಲು ಇಷ್ಟಪಡುತ್ತಿಲ್ಲ. ಇಲ್ಲಿ ಅನೇಕ ನಿಗೂಢ ಗುಹೆಗಳು, ಕಾಡುಗಳು, ಬೃಹತ್ ನದಿಗಳನ್ನು ಒಳಗೊಂಡಂತೆ ಕಾನೂನುಬಾಹಿರ ಚಟುವಟಿಕೆ ನಡೆಯುತ್ತವೆ ಎಂದು ಹೇಳಲಾಗುತ್ತದೆ.
ಫುಗ್ತಾಲ್ ಮಠ:
ಕಾಶ್ಮೀರದ ಫುಗ್ತಾಲ್ ಮಠವು ಭಾರತದ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ತಲುಪುವ ರಸ್ತೆ ತುಂಬಾ ಅಪಾಯಕಾರಿಯಾಗಿದೆ. ಈ ಮಠವನ್ನು ಪರ್ವತದ ಗುಹೆಗಳ ನಡುವೆ ನಿರ್ಮಿಸಲಾಗಿದೆ . ಇಲ್ಲಿಗೆ ಬರಲು ಕುದುರೆ ಸವಾರಿ ಮಾಡಬೇಕು. ಸ್ಥಳೀಯರನ್ನು ಹೊರತುಪಡಿಸಿ ಪ್ರವಾಸಿಗರು ಇಲ್ಲಿ ಬೆಟ್ಟ ಹತ್ತುವುದು ಅಷ್ಟು ಸುಲಭವಲ್ಲ.
ಬಸ್ತಾರ್:
ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯನ್ನು ದೇಶದ ಅಪಾಯಕಾರಿ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿ ಪ್ರಾಕೃತಿಕ ದೃಶ್ಯಗಳ ಜೊತೆಗೆ ಬುಡಕಟ್ಟು ಸಂಸ್ಕೃತಿಯನ್ನೂ ನೋಡಬಹುದು. ಆದರೆ ಬಸ್ತಾರ್ ಅಪಾಯಕಾರಿಯಾಗಲು ಕಾರಣ ನಕ್ಸಲಿಸಂ. ಆದಾಗ್ಯೂ, ಬಸ್ತಾರ್‌ನ ಕೆಲವು ಭಾಗಗಳು ಮಾತ್ರ ನಕ್ಸಲರಿಂದ ಪ್ರಭಾವಿತವಾಗಿವೆ. ಆದರೆ ನೀವು ಬಸ್ತಾರ್‌ಗೆ ಹೋಗಬೇಕಾದರೆ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿ. ಎಲ್ಲಿಗೆ ಹೋಗಬೇಕು ಮತ್ತು ಎಲ್ಲಿಗೆ ಹೋಗಬಾರದು ಎಂದು ಅವರು ನಿಮಗೆ ತಿಳಿಸುತ್ತಾರೆ.
ಕೋಲಿ ಹಿಲ್:
ಕೊಲ್ಲಿ ಬೆಟ್ಟಗಳು ಕೊಲ್ಲಿಮಲೈ ಎಂದು ಕೂಡ ಕರೆಯಲಾಗುತ್ತದೆ. ಇದು ಒಂದು ಗಿರಿಧಾಮವಾಗಿದ್ದು, ಭಾರತದ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿದೆ. ಈ ಬೆಟ್ಟವು ತನ್ನದೇ ಆದ ವಿಭಿನ್ನ ಕಥೆಯನ್ನು ಹೊಂದಿದೆ. ಕಡಿದಾದ ದಾರಿಗಳಿಂದ ಇಲ್ಲಿನ ಪ್ರವಾಸ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತದೆ. ಬಹಳ ಹಿಂದೆಯೇ ಪರ್ವತದ ತುದಿಯಲ್ಲಿ ವಿಚಿತ್ರವಾದ ಆಕೃತಿ ಕಂಡುಬಂದಿದೆ ಎಂದು ಕೆಲವರು ಹೇಳುತ್ತಾರೆ. ನಂತರ ಈ ಸ್ಥಳವನ್ನು ಅಪಾಯಕಾರಿ ಸ್ಥಳಗಳ ಪಟ್ಟಿಗೆ ಸೇರಿಸಲಾಗಿದೆ. ಜೊತೆಗೆ ಅಲ್ಲಿಗೆ ಹೋಗುವ ರಸ್ತೆ ಗುಂಡಿಗಳಿಂದ ತುಂಬಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: