ಜಾಸ್ತಿ ಹಣ್ಣು ಹಣ್ಣಾದಾ ಬಾಳೆಹಣ್ಣು ಇದ್ರೆ ಹೀಗೊಮ್ಮೆ ಸುಟ್ಟವು ಮಾಡಲು ಮರೆಯದಿರಿ

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಹಾಗಾಗಿ ದಿನಕ್ಕೊಂದು ಬಾಳೆಹಣ್ಣು ತಿನ್ಬೇಕು ಅಂತ ಹೇಳ್ತಾರೆ. ಆದ್ರೆ ಕೆಲವರಿಗೆ ಈ ಹಣ್ಣನ್ನು ತಿಂದು ಬೋರ್‌ ಆಗಿರುತ್ತೆ. ನಿಮಗೂ ಕೂಡಾ ಬರಿ ಬಾಳೆಹಣ್ಣನ್ನು ತಿಂದು ಬೋರ್‌ ಆಗಿದ್ಯಾ? ಹಾಗಿದ್ರೆ ಇದ್ರಿಂದ ಸಾಂಪ್ರದಾಯಿಕ ತಿನಿಸಲು ತಯಾರಿಸಿ ತಿನ್ನಿ. ಹೌದು ಮನೆಯಲ್ಲಿ ಹಣ್ಣು ಹಣ್ಣಾದ ಬಾಳೆಹಣ್ಣು ಇದ್ದರೆ ಅದ್ರಿಂದ ಸುಟ್ಟವು ಅಥವಾ ಗಾರಿಗೆ ಮಾಡಿ ಸವಿಯಿರಿ.

ಜಾಸ್ತಿ ಹಣ್ಣು ಹಣ್ಣಾದಾ ಬಾಳೆಹಣ್ಣು ಇದ್ರೆ ಹೀಗೊಮ್ಮೆ ಸುಟ್ಟವು ಮಾಡಲು ಮರೆಯದಿರಿ
ಬಾಳೆಹಣ್ಣಿನ ಸುಟ್ಟವು
Image Credit source: Social Media

Updated on: May 25, 2025 | 5:35 PM

ವರ್ಷವಿಡೀ ಲಭ್ಯವಿರುವ ಹಣ್ಣು ಎಂದರೆ ಅದು ಬಾಳೆಹಣ್ಣು. ಆದ್ರೆ ಬಾಳೆಹಣ್ಣು (Banana) ಹೆಚ್ಚು ಹಣ್ಣುಹಣ್ಣಾದ್ರೆ ಅದನ್ನು ಅಷ್ಟಾಗಿ ಯಾರು ತಿನ್ನಲು ಇಷ್ಟಪಡುವುದಿಲ್ಲ. ಕೆಲವರಂತೂ ಬಾಳೆ ಹಣ್ಣು ಹಣ್ಣಾಗಿ ಅದರ ಮೇಲೆ ಚುಕ್ಕೆಗಳು ಬಂದ್ರೆ ಅದನ್ನು ತಿನ್ನಲು ಇಷ್ಟಪಡದೆ ಬಿಸಾಡಿ ಬಿಡ್ತಾರೆ. ಆದ್ರೆ ಈ ರೀತಿ ಮಾಡೋದಕ್ಕೆ ಹೋಗ್ಬೇಡಿ, ಯಾಕಂದ್ರೆ ಇದ್ರಿಂದ ಸೂಪರ್‌ ಅಗಿರುವಂತಹ ರೆಸಿಪಿಯನ್ನು ತಯಾರಿಸಬಹುದು. ಹೌದು ಮಾಗಿದ ಬಾಳೆಹಣ್ಣು ಇದ್ದರೆ ಅದರಿಂದ ಸುಟ್ಟವು ಅಥವಾ ಗಾರಿಗೆ ತಯಾರಿಸಿ. ಸಾಂಪ್ರದಾಯಿಕ ಶೈಲಿಯ ಈ ಬಾಳೆಹಣ್ಣಿನ ಸ್ನ್ಯಾಕ್ಸ್ (traditional Banana Snacks) ರೆಸಿಪಿಯನ್ನು ಭಟ್‌ ಆನ್‌ ಭಟ್‌ ಫೇಸ್‌ಬುಕ್‌ ಪೇಜ್‌ನಲ್ಲಿ ಶೇರ್‌ ಮಾಡಲಾಗಿದೆ.

ಬಾಳೆಹಣ್ಣಿನ ಸುಟ್ಟವು ಮಾಡೋದು ತುಂಬಾನೇ ಸುಲಭ:

ಈ ಮಳೆಗೆ ಚಹಾದೊಂದಿಗೆ ಸವಿಯಲು ಗರಿಗರಿಯಾದ ಏನಾದ್ರೂ ಬೇಕು ಅಂತ ಅನಿಸಿದ್ರೆ ನೀವು ತುಂಬಾನೇ ರುಚಿಕರವಾದಂತಹ ಬಾಳೆಹಣ್ಣಿನ ಸುಟ್ಟವು ಮಾಡಿ ತಿನ್ನಿ. ರುಚಿಕರ ಮಾತ್ರವಲ್ಲದೆ ಈ ರೆಸಿಪಿಯನ್ನು ಮಾಡೋದು ಕೂಡ ಬಲು ಸುಲಭ.

ಬಾಳೆಹಣ್ಣಿನ ಸುಟ್ಟವು ಮಾಡಲು ಬೇಕಾಗಿರುವ ಸಾಮಾಗ್ರಿಗಳು‌:

1 ½  ಗ್ಲಾಸ್‌ ಬೆಳ್ತಿಗೆ ಅಕ್ಕಿ, 10 ರಿಂದ 11 ಬಾಳೆಹಣ್ಣು, ತೆಂಗಿನಕಾಯಿ ತುರಿ, ಏಲಕ್ಕಿ, ತುರಿದ ಬೆಲ್ಲ, ಸ್ವಲ್ಪ ಉಪ್ಪು, ಗೋಧಿ ಹಿಟ್ಟು, ಎಣ್ಣೆ

ಇದನ್ನೂ ಓದಿ
ಟೀ ಮಾಡೋ ಈ ದೃಶ್ಯ ನಿಜ ಅನ್ಕೊಂಡ್ರಾ?
ಪ್ರತಿದಿನ ಈ 6 ಆಹಾರ ಸೇವನೆ ಮಾಡಿ, ಹೃದಯಕ್ಕೆ ರಕ್ಷಣೆಯಾಗಿ ನಿಲ್ಲುತ್ತದೆ
Video: ಐಸ್ ಆಪಲ್ ಮಿಲ್ಕ್‌ಶೇಕ್ ಎಂದಾದರೂ ಟೇಸ್ಟ್​​​​ ಮಾಡಿದ್ದೀರಾ?
ಮನೆಯಲ್ಲೇ ಥಟ್ಟಂತ ಮಾಡಿ ರುಚಿಕರವಾದ ದ್ರಾಕ್ಷಿ ಉಪ್ಪಿನಕಾಯಿ

ಇದನ್ನೂ ಓದಿ: ಐಸ್ ಆಪಲ್ ಮಿಲ್ಕ್‌ಶೇಕ್ ಎಂದಾದರೂ ಟೇಸ್ಟ್​​​​ ಮಾಡಿದ್ದೀರಾ? ಮಾಡುವುದು ತುಂಬಾ ಸುಲಭ

ರೆಸಿಪಿ ವಿಡಿಯೋ ಇಲ್ಲಿದೆ ನೋಡಿ:

ಬಾಳೆಹಣ್ಣಿನ ಸುಟ್ಟವು ಮಾಡುವ ವಿಧಾನ:

  • ಬಾಳೆಹಣ್ಣಿನ ಸುಟ್ಟವು ಮಾಡಲು ಮೊದಲಿಗೆ ಬೆಳ್ತಿಗೆ ಅಕ್ಕಿಯನ್ನು ಸುಮಾರು 1 ½ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.
  • ನಂತರ ನೆನೆಸಿಟ್ಟ ಅಕ್ಕಿಯ ಜೊತೆ ತೆಂಗಿನಕಾಯಿ ತುರಿ, ಸ್ವಲ್ಪ ಏಲಕ್ಕಿಯನ್ನು ಹಾಕಿ ಈ ಮಿಶ್ರಣವನ್ನು ರುಬ್ಬಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ತುರಿದಿಟ್ಟ ಬೆಲ್ಲ ಮತ್ತು ಬಾಳೆಹಣ್ಣು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
  • ರುಬ್ಬಿಟ್ಟ ಈ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ, ಅದೇ ಮಿಶ್ರಣಕ್ಕೆ ಸ್ವಲ್ಪ ಗೋಧಿ ಹಿಟ್ಟು ಹಾಕಿಕೊಳ್ಳಿ. (ಈ ಹಿಟ್ಟಿನ ಸ್ವಲ್ಪ ಗಟ್ಟಿಯಿರಲಿ)
  • ಹೀಗೆ ಮಿಶ್ರಣ ತಯಾರಾದ ಬಳಿಕ ಒಂದು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ, ಅದಕ್ಕೆ ಸಣ್ಣ ಸಣ್ಣ ಹಿಟ್ಟಿನ ಉಂಡೆಯನ್ನು ಹಾಕಿ ಕರಿದುಕೊಂಡರೆ, ಬಿಸಿ ಬಿಸಿ ಸುಟ್ಟವು ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ