ಮನೆಯಲ್ಲೇ ಪರಿಶುದ್ಧವಾದ ಕುಂಕುಮ ತಯಾರಿಸುವುದು ಅತ್ಯಂತ ಸುಲಭ, ಈ ವಸ್ತುಗಳಿದ್ದರೆ ಸಾಕು

| Updated By: ಅಕ್ಷತಾ ವರ್ಕಾಡಿ

Updated on: Feb 29, 2024 | 4:21 PM

ಕುಂಕುಮ ಹಿಂದೂ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲಿ ಒಂದಾಗಿದ್ದು, ಮನೆಯಲ್ಲಿ ಹಳೆಯ ಕಾಲ ಅಜ್ಜಿಯಂದಿರು ಹಾಗೂ ಮಹಿಳೆಯರಿದ್ದರೆ, ಅವರ ಹಣೆಯನ್ನು ನೋಡಿದರೆ ದೊಡ್ಡದಾದ ಕುಂಕುಮವೂ ಎದ್ದು ಕಾಣುತ್ತದೆ. ಸಾಮಾನ್ಯ ವಾಗಿ ನಾವು ಯಾರನ್ನಾದರೂ ನೋಡುವಾಗ ಮುಡಿಯಿಂದ ಅಡಿಯವರೆಗೆ ನೋಡುತ್ತೇವೆ. ಹೀಗಾದಾಗ ಮುಖದಲ್ಲಿ ಎದ್ದು ಕಾಣುವುದೇ ಕೆಂಬಣ್ಣದ ಕುಂಕುಮ. ಆದರೆ ಈಗಿನ ಕಾಲ ಮಹಿಳೆಯರು ಸಿಂಧೂರ ಹಚ್ಚಿದರೆ ಫ್ಯಾಷನ್ ನೆಪದಲ್ಲಿ ಸಿಂಧೂರವನ್ನು ಮೂಲೆ ಗುಂಪು ಮಾಡಿದ್ದಾರೆ. ಅದಲ್ಲದೇ ಮಾರುಕಟ್ಟೆಯಲ್ಲಿ ಸಿಗುವ ಸಿಂಧೂರವೂ ರಾಸಾಯನಿಕ ವಸ್ತುಗಳಿಂದ ಕೂಡಿದ್ದು, ಮನೆಯಲ್ಲಿಯೇ ಸಿಂಧೂರವನ್ನು ತಯಾರಿಸಿ ಅಲಂಕಾರಿಕ ಸಾಮಗ್ರಿಯಾಗಿ ಬಳಸಬಹುದು.

ಮನೆಯಲ್ಲೇ  ಪರಿಶುದ್ಧವಾದ ಕುಂಕುಮ ತಯಾರಿಸುವುದು ಅತ್ಯಂತ ಸುಲಭ, ಈ ವಸ್ತುಗಳಿದ್ದರೆ ಸಾಕು
Follow us on

ನಮ್ಮ ಅಜ್ಜಿಯಂದಿರ ಹಣೆಯನ್ನೊಮ್ಮೆ ನೋಡಿದಾಗ ಹಣೆ ತುಂಬಾ ಸಿಂಧೂರವನ್ನಿಟ್ಟು ಲಕ್ಷಣವಾಗಿ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಇಂದಿನ ಹೆಣ್ಣುಮಕ್ಕಳಲ್ಲಿ ಕುಂಕುಮವನ್ನು ಕಾಣುವುದು ಬಹಳ ಕಷ್ಟ ಎನ್ನುವಂತಾಗಿದೆ. ಇತ್ತೀಚೆಗಿನ ದಿನಗಳಲ್ಲಿ ವಿವಿಧ ತೆರೆನಾದ ಬಿಂದಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆಯಾದರೂ, ಈಗಿನವರು ಕಾಲದವರು ಹಣೆಗೆ ಸಿಂಧೂರ ಬಿಡಿ, ಬಿಂದಿಯನ್ನು ಇಡುವುದೇ ಇಲ್ಲ. ಈಗಿನ ಹೆಣ್ಣುಮಕ್ಕಳನ್ನು ಕೇಳಿದರೆ ಫ್ಯಾಷನ್ ಎನ್ನುವ ಮೂಲಕ ಹಿರಿಯರ ಬಾಯಿ ಮುಚ್ಚಿಸುತ್ತಾರೆ. ಆದರೆ ಈ ಸಿಂಧೂರವೆನ್ನುವುದು ಕೇವಲ ಭಾರತೀಯ ಸಂಸ್ಕೃತಿವಾಗಿರದೇ ವೈಜ್ಞಾನಿಕ ಕಾರಣಗಳು ಅಡಗಿವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ದಕ್ಷಿಣ ಭಾರತದ ಸೇರಿದಂತೆ ದಕ್ಷಿಣ ಏಷ್ಯಾದ ಕೆಲವು ಕಡೆಗಳಲ್ಲಿ ಹಣೆ ತುಂಬಾ ಸಿಂಧೂರವಿಡುವ ಸಂಪ್ರದಾಯವಿದೆ. ಸಾಮಾನ್ಯವಾಗಿ ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿರುವ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಸಿಂಧೂರವನ್ನು ರಾಸಾಯನಿಕವನ್ನು ಬೆರೆಸಿಮಾಡಲಾಗುತ್ತದೆ. ಆದರೆ ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸುವ ಕುಂಕುಮದಿಂದ ಚರ್ಮದ ಸಮಸ್ಯೆಯು ಬಾಧಿಸುವುದಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ ಮನೆಯಲ್ಲಿಯೇ ಸುಲಭವಾಗಿ ಹಣೆಗೆ ಹಚ್ಚುವ ಕುಂಕುಮವನ್ನು ತಯಾರಿಸುವುದನ್ನು ತೋರಿಸಲಾಗಿದೆ.

ಇದನ್ನೂ ಓದಿ: ಮಹಿಳೆಯರಲ್ಲಿ ಋತುಬಂಧ ಸಮೀಪಿಸುತ್ತಿರುವ ಈ 7 ಚಿಹ್ನೆಗಳನ್ನು ನಿರ್ಲಕ್ಷ್ಯಿಸಬೇಡಿ!

ಈ ವಿಡಿಯೋದಲ್ಲಿ ಸಿಂಧೂರವನ್ನು ಮನೆಯಲ್ಲಿ ತಯಾರಿಸಲು ಅರಿಶಿನ, ನಿಂಬೆ ರಸ, ಗುಲಾಬಿ ನೀರು, ದೇಸಿ ತುಪ್ಪ ಮತ್ತು ಗುಲಾಬಿ ನಿಂಬೆ ಪುಡಿಯಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗಿದೆ. ಈ ವಿಡಿಯೋದ ಪ್ರಾರಂಭದಲ್ಲಿ ಸಣ್ಣ ಮಿಕ್ಸಿ ಜಾರಿಗೆ ಸ್ವಲ್ಪ ಪ್ರಮಾಣದಲ್ಲಿ ಅರಶಿನ, ಎರಡು ಚಮಚದಷ್ಟು ನಿಂಬೆರಸ ಹಾಗೂ ಎರಡು ಚಮಚ ಗುಲಾಬಿ ನೀರು, ಒಂದು ಚಮಚದಷ್ಟು ದೇಸಿ ತುಪ್ಪ ಹಾಗೂ ಅರ್ಧ ಚಮಚ ಗುಲಾಬಿ ನಿಂಬೆ ಪುಡಿಯನ್ನು ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಲಾಗಿದೆ. ಹೆಣ್ಣಿನ ಸೌಭಾಗ್ಯದ ಸಂಕೇತವಾಗಿರುವ ನೈಸರ್ಗಿಕ ಸಿಂಧೂರವೂ ಸಿದ್ಧವಾಗಿದೆ.

ನೀವು ಬಳಸುವ ಕುಂಕುಮ ಅಸಲಿಯೇ ಎಂದು ತಿಳಿಯಲು ಈ ವಿಧಾನ ಬಳಸಿ:

ಮಾರುಕಟ್ಟೆಯಿಂದ ತಂದ ಒಂದು ಚಮಚದಷ್ಟು ಕುಂಕುಮವನ್ನು ಬಿಳಿ ಹಳೆಯ ಮೇಲೆ ಹಾಕಿಕೊಂಡು ಚೆನ್ನಾಗಿ ಉಜ್ಜಬೇಕು. ಹೀಗೆ ಉಜ್ಜುತ್ತಿದ್ದರೆ ಬಿಳಿ ಹಾಳೆಯಲ್ಲಿ ಹಳದಿ ಬಣ್ಣವೂ ಕಂಡು ಬಂದರೆ ಕುಂಕುಮದಲ್ಲಿ ಬೇರೆ ಬಣ್ಣಗಳ ಬಳಕೆ ಮಾಡಿಲ್ಲ ಎಂದರ್ಥ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ