ಪದೇ ಪದೇ ವಾಂತಿಯಾಗುತ್ತಿದ್ದರೆ ವೈದ್ಯರ ಬಳಿ ಹೋಗಬೇಕಿಲ್ಲ, ಈ ಸಿಂಪಲ್ ಮನೆ ಮದ್ದನ್ನೊಮ್ಮೆ ಟ್ರೈ ಮಾಡಿ
ಅತಿಯಾದ ಆಹಾರ ಸೇವನೆ, ಹಳಸಿದ ಆಹಾರ ಸೇವನೆ, ಅರ್ಜಿರ್ಣ ಸಮಸ್ಯೆ, ಪಿತ್ತ ಹೆಚ್ಚಾದಾಗ, ಗರ್ಭಿಣಿಯಾದಾಗ ಹೀಗೆ ಅನೇಕ ಕಾರಣಗಳಿಂದ ವಾಂತಿಯಾಗುತ್ತದೆ. ಇನ್ನು ಕೆಲವರಿಗೆ ಬಸ್ಸಿನಲ್ಲಿ ಓಡಾಟ ನಡೆಸಿದರೆ ವಾಂತಿಯ ಸಮಸ್ಯೆಯು ಕಾಡುತ್ತದೆ. ಹೊಟ್ಟೆಯಲ್ಲಿನ ತೊಂದರೆ ದಾಯಕ ಘಟಕಗಳನ್ನು ಹೊರಗೆ ಹಾಕುವ ನೈಸರ್ಗಿಕ ಪ್ರಕ್ರಿಯೆಯು ಇದಾಗಿದ್ದು, ಈ ಸಮಯದಲ್ಲಿ ವೈದ್ಯರ ಬಳಿ ಹೋಗದೇ ಆರಂಭದಲ್ಲೇ ಮನೆ ಮದ್ದಿನ ಮೂಲಕ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಇಂದಿನ ಒತ್ತಡಮಯ ಜೀವನದಲ್ಲಿ ಇರುವ ಇಪ್ಪತ್ತಾನಾಲ್ಕು ಗಂಟೆಯು ಸಾಕಾಗುವುದಿಲ್ಲ ಎನ್ನುವಂತಾಗಿದೆ. ಹೀಗಾಗಿ ಉದ್ಯೋಗದಲ್ಲಿರುವವರಿಗೆ ಸೇವಿಸುವ ಆಹಾರ ಹಾಗೂ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇಂದಿನ ಜೀವನ ಶೈಲಿಯಿಂದಾಗ ಶೀತ, ಕೆಮ್ಮು, ಜ್ವರ, ವಾಂತಿ, ಮಲಬದ್ಧತೆ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆಯನ್ನೇ ಪಡೆಯಬೇಕೆಂದೇನಿಲ್ಲ. ಆರೋಗ್ಯವು ಕೈಕೊಟ್ಟಾಗ ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳೇ ಔಷಧಿಗಳಾಗುತ್ತವೆ.
- ನಿಂಬೆಹಣ್ಣಿನ ರಸದಲ್ಲಿ ಸ್ವಲ್ಪ ಸ್ವಲ್ಪವೇ ಕುಡಿದರೆ ವಾಂತಿಯಾಗುವುದು ನಿಲ್ಲುವುದು.
- ಒಂದು ಲೋಟ ನೀರಿಗೆ ಅರ್ಧ ಹೋಳು ನಿಂಬೆಹಣ್ಣು, ಪುಡಿಮಾಡಿದ ಜೀರಿಗೆ, ಏಲಕ್ಕಿಪುಡಿ ಬೆರೆಸಿ ದಿನವೂ ಮೂರು ಬಾರಿ ಒಂದೆರಡು ದಿನ ಕುಡಿಯುತ್ತಿದ್ದರೆ ವಾಂತಿಯಾಗುವುದು ಕಡಿಮೆಯಾಗುತ್ತದೆ.
- ಒಂದು ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನುಣ್ಣಗೆ ಅರೆದು, ಅಕ್ಕಿ ತೊಳೆದ ನೀರಿಗೆ ಬೆರೆಸಿ, ಅದಕ್ಕೆ ಸಕ್ಕರೆ ಹಾಕಿ ಸೇವಿಸುವುದರಿಂದ ವಾಕರಿಕೆಯು ನಿಲ್ಲುತ್ತದೆ.
- ನಿಂಬೆಹಣ್ಣಿನ ಪಾನಕ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿದರೆ ವಾಂತಿಯಾಗುವುದು ನಿಧಾನವಾಗಿ ಕಡಿಮೆಯಾಗುತ್ತದೆ.
- ಮೆಣಸುಕಾಳನ್ನು ಈರುಳ್ಳಿ ರಸದೊಂದಿಗೆ ಅರೆದು, ರಸವನ್ನು ಹಿಂಡಿ ನಿಯಮಿತವಾಗಿ ಸೇವಿಸಿದರೆ ಈ ಸಮಸ್ಯೆಯು ನಿವಾರಣೆಯಾಗುತ್ತದೆ.
- ಲಿಂಬೆರಸ ಅಥವಾ ನೆಲ್ಲಿರಸಕ್ಕೆ ಸಕ್ಕರೆ ಬೆರೆಸಿ ಸೇವಿಸಿದರೆ ಉತ್ತಮವಾದ ಔಷಧಿಯಾಗಿದೆ.
- ಹೆಸರುಬೇಳೆಯನ್ನು ಚೆನ್ನಾಗಿ ಬೇಯಿಸಿ ಅದಕ್ಕೆ ಸ್ವಲ್ಪ ನೀರು ಹಾಗೂ ಕಾಯಿಹಾಲು ಬೆರೆಸಿ ತಿನ್ನುವುದು ವಾಂತಿಯಾಗುವ ಸಮಸ್ಯೆಗೆ ಪರಿಣಾಮಕಾರಿ ಔಷಧ.
- ಕೊತ್ತಂಬರಿ ಕಷಾಯಕ್ಕೆ ಹಾಲು ಬೆಲ್ಲ ಸೇರಿಸಿ ಸೇವಿಸಿದರೆ ಮಕ್ಕಳಿಂದ ದೊಡ್ಡವರವರನ್ನು ಕಾಡುವೆ ವಾಂತಿಯ ಸಮಸ್ಯೆಯು ನಿವಾರಣೆ ಕಾಣುತ್ತದೆ.
- ನೇರಳೆ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ ವಾಂತಿಯಿಂದ ಉಂಟಾಗುವ ಬಾಯಾರಿಕೆ ಕಡಿಮೆಯಾಗುತ್ತದೆ.
- ವಾಂತಿಯ ಸಮಯದಲ್ಲಿ ಜೀರ್ಣಶಕ್ತಿಯು ಕುಂದುವುದರಿಂದ ಸೋಂಪು ಕಾಳನ್ನು ಹುರಿದು ಹುಡಿಮಾಡಿ ನೀರಿಗೆ ಬೆರೆಸಿ ಕುದಿಸಿ ಕುಡಿಯುವುದು ಪರಿಣಾಮಕಾರಿಯಾಗಿದೆ.
- ವಾಂತಿಯ ಸಮಯದಲ್ಲಿ ಸುಸ್ತು ಆಗುವುದರಿಂದ ಒಣದ್ರಾಕ್ಷಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ಸುಸ್ತಾಗುವುದು ಕಡಿಮೆಯಾಗುತ್ತದೆ.
- ಪುದೀನಾ ಎಲೆಗಳನ್ನು ಜಗಿಯುವುದರಿಂದ ವಾಂತಿಯಾಗುವುದು ನಿಲ್ಲುತ್ತದೆ. ಇಲ್ಲದಿದ್ದರೆ ಪುದೀನಾ ಎಲೆಯ ಪರಿಮಳವನ್ನು ತೆಗೆದುಕೊಳ್ಳುವುದು ಒಳ್ಳೆಯದು.
- ಪುದೀನಾ ರಸಕ್ಕೆ ನಿಂಬೆ ರಸವನ್ನು ಬೆರೆಸಿ ಸೇವಿಸಿದರೆ ವಾಂತಿಯಾಗುವುದು ನಿಲ್ಲುತ್ತದೆ.
- ಬಸ್ಸಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ವಾಕರಿಕೆ ಬಂದರೆ ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಅಥವಾ ಅದರ ಸಿಪ್ಪೆಯ ಪರಿಮಳವನ್ನು ತೆಗೆದುಕೊಳ್ಳುವುದು ಪರಿಣಾಮಕಾರಿಯಾಗಿದೆ.
ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಬಳಿ ಚರ್ಚಿಸುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ