Martyrs’ Day 2025: ಜನವರಿ 30 ರಂದೇ ಹುತಾತ್ಮರ ದಿನ ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ ಹೋರಾಟಗಾರರು ಹಾಗೂ ಯೋಧರನ್ನು ಸ್ಮರಣೆ ಮಾಡುವ ದಿನವೇ ಹುತಾತ್ಮರ ದಿನ'. ಈ ದಿನವನ್ನು ಶಹೀದ್ ದಿವಸ್ ಅಥವಾ ಸರ್ವೋದಯ ದಿನ ಎಂದು ಕರೆಯಲಾಗುತ್ತದೆ. ಈ ಹುತಾತ್ಮರ ದಿನವನ್ನು ಪ್ರತಿ ವರ್ಷ ಜನವರಿ 30 ರಂದು ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಆಚರಿಸಲಾಗುತ್ತದೆ. ಈ ಬಾರಿ ಮಹಾತ್ಮ ಗಾಂಧೀಜಿಯವರ 77 ನೇ ಪುಣ್ಯ ತಿಥಿಯನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆಯ ಹಿಂದಿನ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತ್ತರ ಸಂಪೂರ್ಣ ಮಾಹಿತಿ ಇಲ್ಲಿದೆ.
![Martyrs' Day 2025: ಜನವರಿ 30 ರಂದೇ ಹುತಾತ್ಮರ ದಿನ ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ](https://images.tv9kannada.com/wp-content/uploads/2025/01/martyrs-day.jpg?w=1280)
ಬ್ರಿಟಿಷರ ಕೈಯಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಕೆಲ ಹೋರಾಟಗಾರರು ಕ್ರಾಂತಿಕಾರಿ ಮಾರ್ಗವನ್ನು ಅನುಸರಿಸಿದ್ದರು. ಆದರೆ ಮಹಾತ್ಮ ಗಾಂಧೀಜಿ ಅಹಿಂಸಾ ಮಾರ್ಗವನ್ನು ಅನುಸರಿಸಿ, ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ್ದರು. ಹೀಗೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಗಾಂಧೀಜಿಯವರ ಪಾತ್ರ ಅಪಾರವಾದದ್ದು. ಆದರೆ, 1948, ಜನವರಿ 30ರಂದು ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ದೆಹಲಿಯ ಬಿರ್ಲಾ ಹೌಸ್‌ನಲ್ಲಿ ಹತ್ಯೆ ಮಾಡಲಾಯಿತು. ಈ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಗಾಂಧಿಯವರ ಸ್ಮರಣಾರ್ಥವಾಗಿ ಮಾತ್ರವಲ್ಲದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಶೌರ್ಯವನ್ನು ನೆನಪಿಸಲಾಗುತ್ತದೆ.
ಹುತಾತ್ಮರ ದಿನದ ಇತಿಹಾಸ
ಜನವರಿ 30, 1948 ರಂದು ಸ್ವಾತಂತ್ರ್ಯ ಚಳವಳಿಯ ನಾಯಕ ಮಹಾತ್ಮ ಗಾಂಧಿ ಅವರನ್ನು ನವದೆಹಲಿಯಲ್ಲಿ ಹತ್ಯೆ ಮಾಡಲಾಯಿತು. 1949 ರಲ್ಲಿ ಭಾರತ ಸರ್ಕಾರವು ಗಾಂಧಿಯವರ ಮರಣ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಅಪಾರ ಕೊಡುಗೆಗಳನ್ನು ಸ್ಮರಿಸಲು ಈ ದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿತು. ಅಂದಿನಿಂದ ಜನವರಿ 30 ರಂದು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.
ಇದನ್ನೂ ಓದಿ: ಭಾರತದ ಇತಿಹಾಸದಲ್ಲಿ ಪುಲ್ವಾಮ ದಾಳಿಯ ಕಹಿ ನೆನಪು, ವಿದ್ಯಾರ್ಥಿಗಳಿಗಾಗಿ ಸ್ಪೂರ್ತಿದಾಯಕ ಭಾಷಣಗಳು ಇಲ್ಲಿವೆ
ಹುತಾತ್ಮರ ದಿನದ ಮಹತ್ವ ಹಾಗೂ ಆಚರಣೆ
ಹುತಾತ್ಮರ ದಿನ ಕೇವಲ ಗಾಂಧಿಯವರ ಸ್ಮರಣೆಗೆ ಮಾತ್ರವಲ್ಲದೇ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಮಡಿದ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಮಹತ್ವದ್ದಾಗಿದೆ. ಅಸಂಖ್ಯಾತ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಮಾನ್ಯ ಜನರು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಈ ದಿನವು ಅವರ ತ್ಯಾಗ ಹಾಗೂ ದೇಶಭಕ್ತಿಯ ಮಹತ್ವವನ್ನು ನೆನಪಿಸುತ್ತದೆ. ಹುತಾತ್ಮರ ದಿನದ ಈ ಸಂದರ್ಭದಲ್ಲಿ ರಾಜ್ ಘಾಟ್ ನಲ್ಲಿರುವ ಗಾಂಧಿಯವರ ಸಮಾಧಿಯ ಬಳಿ ಪ್ರಾರ್ಥನಾ ಸಭೆಗಳನ್ನು ಆಯೋಜಿಸಲಾಗುತ್ತದೆ. ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಕ್ಷಣಾ ಸಚಿವರು, ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಮತ್ತು ಮೂವರು ಸೇನಾ ಮುಖ್ಯಸ್ಥರು ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ.
ಗಾಂಧೀಜಿಯವರ ಸ್ಫೂರ್ತಿದಾಯಕ ನುಡಿಮುತ್ತುಗಳು
* ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಿರಿ.
* ನಿಮ್ಮನ್ನು ಕಂಡುಕೊಳ್ಳಲು ಉತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು.
* ಕಣ್ಣಿಗೆ ಒಂದು ಕಣ್ಣು ಮಾತ್ರ ಇಡೀ ಜಗತ್ತನ್ನು ಕುರುಡನನ್ನಾಗಿ ಮಾಡುತ್ತದೆ.
* ನೀವು ನಾಳೆ ಸಾಯುವವರಂತೆ ಬದುಕು. ನೀವು ಶಾಶ್ವತವಾಗಿ ಬದುಕಬೇಕು ಎಂಬಂತೆ ಕಲಿಯಿರಿ.
* ಭವಿಷ್ಯವು ಇಂದು ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ.
* ಜಗತ್ತಿನಲ್ಲಿ ನೀವು ನೋಡಲು ಬಯಸುವ ಬದಲಾವಣೆ ನೀವಾಗಿರಬೇಕು.
* ದುರ್ಬಲರು ಎಂದಿಗೂ ಕ್ಷಮಿಸಲಾರರು. ಕ್ಷಮೆಯೇ ಬಲಶಾಲಿಗಳ ಗುಣ.
* ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯವನ್ನು ಒಳಗೊಂಡಿರದಿದ್ದರೆ ಸ್ವಾತಂತ್ರ್ಯವು ಯೋಗ್ಯವಾಗಿಲ್ಲ.
* ನೀವು ಏನು ಯೋಚಿಸುತ್ತೀರಿ, ನೀವು ಏನು ಹೇಳುತ್ತೀರಿ ಮತ್ತು ನೀವು ಏನು ಮಾಡುತ್ತೀರಿ ಎಂಬುದು ಸಾಮರಸ್ಯದಿಂದ ಇದ್ದಾಗ ಸಂತೋಷವಾಗಿದೆ.
* ಮೊದಲು, ಅವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ಅವರು ನಿಮ್ಮನ್ನು ನೋಡಿ ನಗುತ್ತಾರೆ, ನಂತರ ಅವರು ನಿಮ್ಮೊಂದಿಗೆ ಹೋರಾಡುತ್ತಾರೆ, ನಂತರ ನೀವು ಗೆಲ್ಲುತ್ತೀರಿ.
* ನಿಮ್ಮನ್ನು ಕಂಡುಕೊಳ್ಳಲು ಉತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ