Shopping Tips: ಗಂಡು ಮಕ್ಕಳೇ ಈ ರೀತಿ ಪರ್ಫೆಕ್ಟ್ ಆಗಿ ಬಟ್ಟೆ ಖರೀದಿ ಮಾಡಿದ್ರೆ ಸ್ಟೈಲಿಶ್ ಆಗಿ ಕಾಣ್ತಿರಾ
ಶಾಪಿಂಗ್ ಎಂದ ಕೂಡಲೇ ನೆನಪಾಗುವುದೇ ಹೆಣ್ಣು ಮಕ್ಕಳು. ಆದರೆ ಕೆಲ ಗಂಡು ಮಕ್ಕಳು ಕೂಡ ಶಾಪಿಂಗ್ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಈ ಬಟ್ಟೆ ಖರೀದಿಗೆ ಅಂತ ಹೋದಾಗ ಹುಡುಗರಿಗೂ ಕೂಡ ಹೆಣ್ಣು ಮಕ್ಕಳಂತೆ ಯಾವ ರೀತಿ ಬಟ್ಟೆ ಖರೀದಿ ಮಾಡಬೇಕು ಎನ್ನುವ ಗೊಂದಲವಿರುತ್ತದೆ. ಪುರುಷರೇ ಶರ್ಟ್ ಅಥವಾ ಬಟ್ಟೆ ಖರೀದಿ ಮಾಡುವ ವೇಳೆ ಈ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಿದರೆ ಎಕ್ಸ್ ಚೇಂಜ್ ಮಾಡುವುದು ತಪ್ಪುತ್ತದೆ. ಹಾಗಾದ್ರೆ ಈ ಕುರಿತಾದ ಸಿಂಪಲ್ ಟಿಪ್ಸ್ ಇಲ್ಲಿದೆ.

ದಿನಬೆಳಗಾಗದರೆ ಒಂದೊಂದು ರೀತಿಯ ಫ್ಯಾಷನ್ ಗಳು ಬರುತ್ತದೆ. ಬಟ್ಟೆ, ಚಪ್ಪಲಿ ಹೀಗೆ ಎಲ್ಲಾ ವಿಚಾರದಲ್ಲಿ ಫ್ಯಾಷನ್ ಬದಲಾಗುತ್ತಿರುತ್ತದೆ. ಹೆಣ್ಣು ಮಕ್ಕಳಂತೆ ಕೆಲ ಗಂಡು ಮಕ್ಕಳು ಕೂಡ ಫ್ಯಾಷನ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಅದರಲ್ಲಿ ಈ ಡ್ರೆಸ್ ಖರೀದಿ ವೇಳೆ ಯಾವ ರೀತಿಯ ಬಟ್ಟೆ ಖರೀದಿ ಮಾಡುವುದು ಎಂದು ಪೇಚಾಡುವುದನ್ನು ನೋಡಬಹುದು. ಆದರೆ ಕಾನ್ಫಿಡೆಂಟ್ ಆಗಿ ಕಾಣಲು ಬಯಸಿದರೆ ಆಕರ್ಷಕವಾದ ಉಡುಗೆಗಳನ್ನು ಧರಿಸುವುದು ಬಹಳ ಮುಖ್ಯವಾಗುತ್ತದೆ. ನೀವು ಧರಿಸುವ ಬಟ್ಟೆಯೂ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಹುಡುಗರು ಬಟ್ಟೆ ಖರೀದಿ ಮಾಡುವಾಗ ಈ ಕೆಲವು ಸಲಹೆ ಗಳನ್ನು ಪಾಲಿಸುವುದು ಉತ್ತಮ.
* ಬಟ್ಟೆಯ ಗುಣಮಟ್ಟದ ಬಗ್ಗೆ ಗಮನ ಕೊಡಿ : ಬಟ್ಟೆ ಖರೀದಿ ಮಾಡುವಾಗ ಗುಣಮಟ್ಟದ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಕೆಲವೊಮ್ಮೆ ಇಷ್ಟವಾದ ಬಣ್ಣದ ಬಟ್ಟೆ ಕಂಡು ಬಿಟ್ಟರೆ ಗುಣ ಮಟ್ಟದ ಬಗ್ಗೆ ಯೋಚಿಸದೇ ಖರೀದಿ ಮಾಡುವವರೇ ಹೆಚ್ಚು. ಆದರೆ ಬಟ್ಟೆ ಗುಣ ಮಟ್ಟ ಕೂಡ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಬಟ್ಟೆಯ ಕಲರ್, ಡಿಸೈನ್ ಹೇಗೆ ಇದ್ದರೂ ಮೊದಲು ಗುಣಮಟ್ಟ ಹೇಗಿದೆ ಎನ್ನುವುದನ್ನು ಗಮನಿಸಿ ಪರೀಕ್ಷಿಸುವುದು ಬಹಳ ಮುಖ್ಯ.
* ಕಲರ್ ಬಗ್ಗೆ ಗಮನವಿರಲಿ : ಎಲ್ಲರಿಗೂ ಕೂಡ ಎಲ್ಲಾ ಬಣ್ಣದ ಬಟ್ಟೆ ಹೊಂದುತ್ತದೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಯಾವ ಬಣ್ಣದ ಬಟ್ಟೆ ನಿಮ್ಮ ಮೈ ಬಣ್ಣಕ್ಕೆ ಹೊಂದುತ್ತದೆ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ಅದಲ್ಲದೇ ನಿಮ್ಮಲ್ಲಿ ಯಾವೆಲ್ಲಾ ಬಣ್ಣದ ಬಟ್ಟೆಯಿದೆ ಎಂದು ಗಮನಿಸಿ, ಬಿಳಿ ಬಣ್ಣದ ಖರೀದಿಸುವಿರಿಯಾದರೆ ಆ ಬಟ್ಟೆಯನ್ನು ಶುಭ್ರವಾಗಿಟ್ಟುಕೊಳ್ಳಲು ಸಾಧ್ಯವೇ ಎಂದು ನೋಡಿ. ಶರ್ಟ್ ಖರೀದಿ ಮಾಡುವಿರಿಯಾದರೆ ಯಾವ ಪ್ಯಾಂಟ್ ಗೆ ಯಾವ ಬಣ್ಣದ ಶರ್ಟ್ ಮ್ಯಾಚ್ ಆಗುತ್ತದೆ ಎನ್ನುವುದು ಗೊತ್ತಿರಲಿ.
* ಫಿಟ್ಟಿಂಗ್ ಸರಿಯಾಗಿರಲಿ : ಬಟ್ಟೆ ಫಿಟ್ಟಿಂಗ್ ಸರಿಯಾಗಿದ್ದರೆ ಯಾವುದೇ ಬಟ್ಟೆಯೂ ಚೆನ್ನಾಗಿ ಕಾಣಿಸುತ್ತದೆ. ಹೀಗಾಗಿ ಬಟ್ಟೆ ಖರೀದಿ ವೇಳೆ ಫಿಟ್ಟಿಂಗ್ ಸರಿಯಾಗಿದೆಯೇ ಎನ್ನುವ ಬಗ್ಗೆ ಗಮನಹರಿಸಬೇಕು. ನೀವು ಖರೀದಿಸಿದ ಶರ್ಟ್ ಭುಜದಿಂದ ಕೆಳಗೆ ಜೋತು ಬೀಳುತ್ತದೆಯೇ, ಫುಲ್ ಸ್ಲೀವ್ ಶರ್ಟ್ ಖರೀದಿಸುತ್ತಿದ್ರೆ ತೋಳುಗಳು ಮಣಿಕಟ್ಟಿಗಿಂತ ಉದ್ದವಿದೆಯೇ ಅಥವಾ ಚಿಕ್ಕದಾಗಿಯೇ ಎಂದು ನೋಡಿಕೊಳ್ಳಿ. ಅದಲ್ಲದೇ, ಶರ್ಟ್ ಅತಿ ಉದ್ದವಾಗಿದ್ದರೆ ಆ ಬಟ್ಟೆ ಖರೀದಿ ಮಾಡಬೇಡಿ. ಫಿಟ್ಟಿಂಗ್ ವಿಚಾರದಲ್ಲಿ ಈ ಮೂರು ವಿಷಯಗಳ ಬಗ್ಗೆ ಹೆಚ್ಚು ಗಮನವಹಿಸಿ.
* ಬಟ್ಟೆ ಟ್ರಯಲ್ ನೋಡಿ : ಹೆಚ್ಚಿನ ಯುವಕರಿಗೆ ತಮ್ಮ ಶರ್ಟ್ ಸೈಜ್ ಅಥವಾ ಪ್ಯಾಂಟ್ ಸೈಜ್ ಎಷ್ಟೇಂದು ಗೊತ್ತಿರುತ್ತದೆ. ಆದರೆ ರೆಡಿಮೇಡ್ ಶರ್ಟ್ ಖರೀದಿ ಮಾಡುವ ವೇಳೆ ಟ್ರಯಲ್ ಮಾಡುವುದು ಒಳ್ಳೆಯದು. ಕೆಲವೊಮ್ಮೆ ಸೈಜ್ ನಲ್ಲಿ ವ್ಯತ್ಯಾಸವಿರಬಹುದು. ಹಾಗೆ ನೋಡಿ ಬಟ್ಟೆ ಖರೀದಿ ಮಾಡಿ ಮನೆಗೆ ತಂದ ನಂತರ ಅಳತೆಯಲ್ಲಿ ವ್ಯತ್ಯಾಸವಾದರೆ ಎಕ್ಸ್ ಚೇಂಜ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಟೈಲರ್ ಗೆ ಕೊಟ್ಟು ರೀಫಿಟ್ಟಿಂಗ್ ಮಾಡಿಸಬೇಕಾಗುತ್ತದೆ. ಈ ಎಲ್ಲಾ ತಲೆ ಬಿಸಿಯಿಂದ ತಪ್ಪಿಸಿಕೊಳ್ಳಲು ಬಟ್ಟೆ ಖರೀದಿ ವೇಳೆ ಒಮ್ಮೆ ಟ್ರಯಲ್ ನೋಡುವುದು ಉತ್ತಮ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ