AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಡ್ಡಿನ ಪಾತ್ರೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಡಿ, ಕಾರಣ ಇಲ್ಲಿದೆ ನೋಡಿ

ಜಿಡ್ಡಿನ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಒಂದು ಸಾಹಸದ ಕೆಲಸ, ಅವುಗಳನ್ನು ಹೇಗೆ ತೊಳೆಯುವುದು ಎಂಬ ತಲೆಬಿಸಿ ಮನೆಯಲ್ಲಿ ಇದ್ದೆ ಇರುತ್ತದೆ. ಅನೇಕರು ಈ ಜಿಡ್ಡು ತೆಗೆಯಲು ಬಿಸಿನೀರು ಉಪಯೋಗಿಸುತ್ತಾರೆ. ಆದರೆ ಪಾತ್ರಗಳಿಗೆ ಬಿಸಿನೀರು ಹಾಕಿದ್ರೆ ಅದರಲ್ಲಿ ಜಿಡ್ಡುಗಳನ್ನು ತೆಗೆದು ಹಾಕಬಹುದು, ಆದರೆ ಅದರ ನಂತರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಬಿಸಿನೀರು ಉಪಯೋಗಿಸುವುದು ಉತ್ತಮವೇ, ಇದಕ್ಕೆ ಬೇರೆ ಪರಿಹಾರ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಜಿಡ್ಡಿನ ಪಾತ್ರೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಡಿ, ಕಾರಣ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jan 30, 2025 | 4:58 PM

Share

ನಿಮ್ಮ ಪ್ಯಾನ್​​ಗಳ ಬಗ್ಗೆ ಹೆಚ್ಚಿನ ಕಾಳಜಿ ಬೇಕೇಬೇಕು. ಅನೇಕರಿಗೆ ಈ ಪಾತ್ರೆಗಳಲ್ಲಿ ಅಂಟಿಕೊಂಡಿರುವ ಜಿಡ್ಡನ್ನು ತೆಗೆಯುವುದು ದೊಡ್ಡ ತಲೆಬಿಸಿಯಾಗಿರುತ್ತದೆ. ಈ ಜಿಡ್ಡು ಹೋಗಲಾಡಿಸಲು ಅನೇಕ ಬಿಸಿನೀರು ಉಪಯೋಗಿಸುತ್ತಾರೆ. ಆದರೆ ಇದು ತಪ್ಪು. ಕೆಲವೊಂದು ಪಾತ್ರಗಳಿಗೆ ಬಿಸಿನೀರು ಹಾಕಿದ್ರೆ ಅದರಲ್ಲಿ ಜಿಡ್ಡುಗಳನ್ನು ತೆಗೆದು ಹಾಕಬಹುದು, ಆದರೆ ಅದರ ನಂತರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಬಿಸಿನೀರನ್ನು ಬಳಸುವುದು ಏಕೆ ಉತ್ತಮ ಆಯ್ಕೆಯಾಗಿಲ್ಲ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಜಿಡ್ಡಿನ ಪ್ಯಾನ್‌ಗಳಲ್ಲಿ ನೀವು ಎಂದಿಗೂ ಬಿಸಿನೀರನ್ನು ಏಕೆ ಬಳಸಬಾರದು

ಜಿಡ್ಡಿನ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಿಸಿನೀರನ್ನು ಬಳಸುವುದು ಉತ್ತಮ ಎಂದು ಅನ್ನಿಸಬಹುದು. ಆದರೆ ಇದು ನಿಮ್ಮ ಆಹಾರದ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಬಹುದು. ನೀವು ಜಿಡ್ಡಿನ ಪ್ಯಾನ್ ಅನ್ನು ಬಿಸಿ ನೀರಿನಿಂದ ತೊಳೆದಾಗ , ಕೊಳಕು ನೀರು ಅಲ್ಲೇ ಅಂಟಿಕೊಂಡಿರುತ್ತದೆ. ಆ ಬಿಸಿನೀರು ತಣ್ಣಗಾದ ನಂತರ ಪಾತ್ರೆಯಲ್ಲಿರುವ ಜಡ್ಡು ಅದರಲ್ಲಿ ಅಂಟಿಕೊಳ್ಳುತ್ತದೆ.

ನೀವು ನಾನ್-ಸ್ಟಿಕ್ ಅಥವಾ ಕಬ್ಬಿಣದ ಪಾತ್ರೆಗಳನ್ನು ಬಿಸಿನೀರಿನಲ್ಲಿ ಸ್ವಚ್ಛಗೊಳಿಸುತ್ತಿದ್ದರೆ, ಅದು ಅದರಲ್ಲಿ ಮೇಲ್ಮೈ ಲೇಪನವನ್ನು ಮತ್ತಷ್ಟು ಜಡ್ಡುಗೊಳಿಸುತ್ತದೆ. ಇದು ಪಾತ್ರೆಗಳಲ್ಲಿ ಬಿರುಕು ಉಂಟು ಮಾಡಬಹುದು.

ಇದನ್ನೂ ಓದಿ: ಗಂಡು ಮಕ್ಕಳೇ ಈ ರೀತಿ ಪರ್ಫೆಕ್ಟ್ ಆಗಿ ಬಟ್ಟೆ ಖರೀದಿ ಮಾಡಿದ್ರೆ ಸ್ಟೈಲಿಶ್ ಆಗಿ ಕಾಣ್ತಿರಾ

ಪ್ಯಾನ್‌ಗಳು ಹೆಚ್ಚು ಕಾಲ ಉಳಿಯುವಂತೆ ಮಾಡಲು ಸುಲಭ ಸಲಹೆ

ಪ್ಯಾನ್‌ಗಳನ್ನು, ವಿಶೇಷವಾಗಿ ನಾನ್-ಸ್ಟಿಕ್ ಅನ್ನು ಹೆಚ್ಚು ಕಾಲ ಸುಸ್ಥಿತಿಯಲ್ಲಿಡಲು, ಈ ಉಪಯುಕ್ತ ಸಲಹೆಗಳನ್ನು ಅನುಸರಿಸಿ. ಕಿಚನ್ ಪಾತ್ರೆಗಳು ಬಹಳಷ್ಟು ಸವೆತಗೊಳ್ಳುವುದು ಬೇಗ. ಅದಕ್ಕಾಗಿ ಈ ಸಲಹೆ ಪಾಲಿಸಿ.

ಜೆಂಟಲ್ ಸೋಪಿನಿಂದ ಸ್ವಚ್ಛಗೊಳಿಸಿ: ಪ್ಯಾನ್ಗಳನ್ನು ಸ್ವಚ್ಛಗೊಳಿಸುವಾಗ, ಸೌಮ್ಯವಾದ ಪಾತ್ರೆ ತೊಳೆಯುವ ಸೋಪ್ ಅಥವಾ ದ್ರವವನ್ನು ಬಳಸಿ. ಇದು ಲೇಪನಗಳಿಗೆ ಹಾನಿಯಾಗದಂತೆ ಮೊಂಡುತನದ ಕಲೆ ತೆಗೆದುಹಾಕಲು ಸಹಾಯ ಮಾಡುತ್ತದೆ.

ಸರಿಯಾದ ಶುಚಿಗೊಳಿಸುವ ಪರಿಕರಗಳನ್ನು ಆಯ್ಕೆಮಾಡಿ: ಉಕ್ಕಿನ ಉಣ್ಣೆಯನ್ನು ಬಳಸುವ ಬದಲು, ಮೃದುವಾದ ಸಿಲಿಕೋನ್ ಸ್ಕ್ರಬ್ಬರ್‌ಗಳನ್ನು ಆರಿಸಿಕೊಳ್ಳಿ. ಒರಟಾದ ಪ್ಯಾಡ್‌ಗಳು ಮೇಲ್ಮೈಯನ್ನು ಸ್ಕ್ರಾಚ್ ಮಾಡಬಹುದು, ಪಾತ್ರೆಯ ಮೇಲಿರುವ ರಕ್ಷಣಾತ್ಮಕ ಪದರಗಳನ್ನು ಹಾನಿಗೊಳಿಸುತ್ತದೆ.

ತಾಪಮಾನ ಬದಲಾವಣೆಗಳನ್ನು ತಪ್ಪಿಸಿ: ಬಿಸಿ ಪ್ಯಾನ್‌ಗಳನ್ನು ತೊಳೆಯುವ ಮೊದಲು ಯಾವಾಗಲೂ ನೈಸರ್ಗಿಕವಾಗಿ ತಣ್ಣಗಾಗಲು ಬಿಡಿ. ಮೊಂಡುತನದ ಕಲೆಗಳಿಗೆ ಬಿಸಿನೀರಿನ ಬದಲು ಉಗುರುಬೆಚ್ಚಗಿನ ನೀರನ್ನು ಬಳಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ