
ಪುರುಷರು ಧರಿಸುವ ಬೆಲ್ಟ್ ಎಷ್ಟು ಬಿಗಿಯಾಗಿರಬೇಕು ಎನ್ನುವುದನ್ನು ತಜ್ಞರು ತಿಳಿಸಿದ್ದಾರೆ. ಬೆಲ್ಟ್ ಕೂಡ ಪುರುಷರ ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡುತ್ತದೆ ಎಂದು ಹೇಳಲಾಗಿದೆ. ಬೆಲ್ಟ್ನಿಂದ ದೇಹದ ಮೇಲೆ ಹಲವು ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡುತ್ತದೆ. ತುಂಬಾ ಬಿಗಿಯಾಗಿ ಬೆಲ್ಟ್ ಧರಿಸಿದರೆ (wear a tight belt) ಅದು ಪುರುಷರ ಫಲವತ್ತತೆಯ (male fertility) ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವೃಷಣಗಳ ಮೇಲೆ ಉಂಟಾಗುವ ಒತ್ತಡದಿಂದ ವೃಷಣಗಳ ಉಷ್ಣತೆ ಹೆಚ್ಚಿಸಲು ರಕ್ತದ ಹರಿವನ್ನು ಕಡಿಮೆ ಮಾಡಲು ಮತ್ತು ವೀರ್ಯ ಉತ್ಪಾದನೆಗೆ ಹಾನಿ ಮಾಡುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಇದರ ಜತೆಗೆ ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಡಿಲವಾದ ಬಟ್ಟೆಗಳನ್ನು ಧರಿಸುವುದು ಉತ್ತಮ. ಇಂತಹ ಬಟ್ಟೆಗಳಿಂದ ದೇಹದಲ್ಲಾಗುವ ಚಟುವಟಿಕೆಯೂ ತುಂಬಾ ಸುಲಭವಾಗಿಸುತ್ತದೆ. ಹಾಗಾಗಿ ಬಟ್ಟೆ ಅಥವಾ ಬೆಲ್ಟ್ಗಳನ್ನು ಹೆಚ್ಚು ಟೈಟ್ ಆಗಿ ಹಾಕಿಕೊಳ್ಳಬೇಡಿ. ಈ ಬಗ್ಗೆ ತಜ್ಞರು ಇಂಡಿಯಾನ್ ಎಕ್ಸ್ಪ್ರಸ್ಗೆ ಹೇಳಿರುವ ಬಗ್ಗೆ ಇಲ್ಲಿದೆ ನೋಡಿ.
ಇನ್ನು ಇದರ ಜತೆಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಕೂಡ ಅಗತ್ಯ ಕೂಡ ಇದೆ. ವಿಶೇಷವಾಗಿ ಈಗಾಗಲೇ ಫಲವವತೆ ಸಮಸ್ಯೆಯನ್ನು ಅನುಭವಿಸುತ್ತಿರುವವರು, ಬಿಗಿಯಾಗಿ ಬೆಲ್ಟ್ ಧರಿಸಿದ್ರೆ ಅವರಲ್ಲಿ ಅಸ್ವಸ್ಥತೆ ಉಂಟಾಗಬಹುದು. ಹೊಟ್ಟೆಯ ಒತ್ತಡವು ದೀರ್ಘಾವಧಿಯಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರ ಬಗ್ಗೆ ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ವೈದ್ಯರು ಹಾಗೂ ಸಲಹೆಗಾರ್ತಿ ಡಾ. ತ್ರಿಪ್ತಿ ರಹೇಜಾ ಹೇಳುವ ಪ್ರಕಾರ ಈ ಒತ್ತಡವು ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದರು. ಮೊದಲನೆಯದಾಗಿ, ಇದು ಸ್ಕ್ರೋಟಲ್ ತಾಪಮಾನವನ್ನು ಹೆಚ್ಚಿಸಬಹುದು. ಏಕೆಂದರೆ ವೃಷಣಗಳು ದೇಹದ ಉಳಿದ ಭಾಗಗಳಿಗಿಂತ ಸೂಕ್ತ ವೀರ್ಯ ಉತ್ಪಾದನೆಗೆ ತಂಪಾಗಿರಬೇಕಾಗುತ್ತದೆ. ಈ ಕಾರಣಕ್ಕೆ ಇದರ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡಬಹುದು.
ತೊಡೆಸಂದಿನ ಪ್ರದೇಶದಲ್ಲಿ ತಾಪಮಾನವು ವೀರ್ಯದ ಗುಣಮಟ್ಟ ಮತ್ತು ಚಲನಶೀಲತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬಿಗಿಯಾಗಿ ಬೆಸ್ಟ್ ಧರಿಸುವುದರಿಂದ, ಆ ಭಾಗದಲ್ಲಿ ರಕ್ತದ ಹರಿವನ್ನು ನಿರ್ಬಂಧಿಸಬಹುದು. ಇದು ವೀರ್ಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರ ಕೆಳಭಾಗ ಮತ್ತು ಜನನಾಂಗದ ಪ್ರದೇಶದ ದೀರ್ಘಕಾಲದ ಸಂಕೋಚನವು ಉರಿಯೂತಕ್ಕೆ ಕಾರಣವಾಗಬಹುದು. ಇದು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ಜತೆಗೆ ಬಿಗಿಯಾದ ಬೆಲ್ಟ್ ಧರಿಸುವುದರಿಂದ ಕಾಲಾನಂತರದಲ್ಲಿ ಜೀರ್ಣಕಾರಿ ಸಮಸ್ಯೆಗಳಿಗೂ ಕಾರಣವಾಗಬಹುದು. ಚೆನ್ನೈನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಮೂತ್ರಶಾಸ್ತ್ರದ ಸಲಹೆಗಾರ ಮೈಕ್ರೋಸರ್ಜಿಕಲ್ ಆಂಡ್ರಾಲಜಿಸ್ಟ್ ಮತ್ತು ಮೂತ್ರಶಾಸ್ತ್ರಜ್ಞ ಡಾ. ಸಂಜಯ್ ಪ್ರಕಾಶ್ ಜೆ ಅವರು ಇಂಡಿಯಾ ಎಕ್ಸ್ಪ್ರಸ್ ನೀಡಿದ ವರದಿ ಪ್ರಕಾರ, ಬಿಗಿಯಾದ ಬೆಲ್ಟ್ ಧರಿಸುವುದರಿಂದ ಪುರುಷರಿಗೆ ವಿವಿಧ ಅನಾನುಕೂಲತೆಗಳು ಉಂಟಾಗಬಹುದು ಹೇಳುತ್ತಾರೆ.
ಇದನ್ನೂ ಓದಿ: ಹಣವೂ ಅಲ್ಲ ಖ್ಯಾತಿಯೂ ಅಲ್ಲ; ಸುಖ ಜೀವನಕ್ಕೆ ಕೀಲಿಕೈ ಇದೊಂದೆಯಂತೆ; ಅಧ್ಯಯನ
ಪ್ರಾಥಮಿಕವಾಗಿ ಇದನ್ನು ದೀರ್ಘಕಾಲದವರೆಗೆ ಅಥವಾ ಆಗಾಗ್ಗೆ ಬಳಸಿದಾಗ. “ಬಿಗಿಯಾದ ಬೆಲ್ಟ್ ನಿಮ್ಮ ಕಿಬ್ಬೊಟ್ಟೆಯ ಪ್ರದೇಶದ ಸುತ್ತಲೂ ನಿರಂತರ ಸಂಕೋಚನವನ್ನು ಉಂಟುಮಾಡುತ್ತದೆ, ಇದು ರಕ್ತದ ಹರಿವನ್ನು ಋಣಾತ್ಮಕವಾಗಿ ನಿರ್ಬಂಧಿಸಬಹುದು. ಬೆಲ್ಟ್ ಹಾಕುವ ಪ್ರದೇಶದಲ್ಲಿ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಈ ತೀವ್ರ ಒತ್ತಡವು ಆಮ್ಲ ಹಿಮ್ಮುಖ ಹರಿವಿನಂತಹ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು, ಜತೆಗೆ ಕಾಲಾಂತರ ನಂತರ ನೋವು ಕೂಡ ಪ್ರಾರಂಭವಾಗಬಹುದು. ಈ ಅಪಾಯವನ್ನು ತಗ್ಗಿಸಲು ಭಾಗಕ್ಕೆ ಹೆಚ್ಚು ಗಾಳಿ ಬೇಕಾಗುತ್ತದೆ. ಅದಕ್ಕಾಗಿ ಬೆಲ್ಟ್ಗಳನ್ನು ತುಂಬಾ ಬಿಗಿಯಾಗಿ ಹಾಕಬೇಡಿ. ಇದರ ಜತೆಗೆ ನಿಯಮಿತ ವ್ಯಾಯಾಮ ಮತ್ತು ಧೂಮಪಾನ ಮತ್ತು ಅತಿಯಾದ ಮದ್ಯಪಾನದಂತಹ ಅಭ್ಯಾಸಗಳನ್ನು ತಪ್ಪಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಪುರುಷರ ಫಲವತ್ತತೆ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Fri, 23 May 25