ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಎಂದು ಎಲ್ಲರೂ ಒಪ್ಪುತ್ತಾರೆ, ಆದರೆ ದಿನನಿತ್ಯದ ಆಧಾರದ ಮೇಲೆ ನೀವು ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ? ಕೆಲವು ಮೂಲಭೂತ ಜೀವನ ವಿಧಾನಗಳು ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ದೈಹಿಕ ಆರೋಗ್ಯದಂತೆಯೇ, ಮಾನಸಿಕ ಆರೋಗ್ಯ ಸುಧಾರಿಸಲು ಕೆಲವು ಸರಳ ದೈನಂದಿನ ಅಭ್ಯಾಸಗಳನ್ನು ಅನುಸರಿಸಬಹುದು. ಆರಂಭಿಕಾರಿಗೆ ಇಲ್ಲಿವೆ 5 ಸರಳ ಸಲಹೆಗಳು.
ಸದಾ ಲವಲವಿಕೆಯಿಂದಿರಲು ನಿಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ 5 ಬದಲಾವಣೆಗಳು:
ಉತ್ತಮ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆ ಅತ್ಯಗತ್ಯ. ರಾತ್ರಿಯಲ್ಲಿ ಕನಿಷ್ಠ 7-8 ಗಂಟೆಗಳ ಅಡೆತಡೆಯಿಲ್ಲದ ನಿದ್ರೆಯನ್ನು ಮಾಡಬೇಕು. ಒಂದು ದಿನ ನಿದ್ದೆ ಕೆಡುವುದರಿಂದ ತೊಂದರೆಯಿಲ್ಲ ಎಂಬ ಯೋಚನೆಯನ್ನು ತೆಗೆದುಹಾಕಬೇಕು. ಸಾಮ್ಯವಾಗಿ ರಾತ್ರಿ ನಿದ್ದೆ ಕೆಟ್ಟರೆ ಅದನ್ನು ಮಧ್ಯಾಹ್ನದ ನಿದ್ದೆ ಅಥವಾ ವಾರಾಂತ್ಯದಲ್ಲಿ ದೀರ್ಘಕಾಲ ನಿದ್ದೆ ಮಾಡಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ. ಆದರೆ ಇದು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ.
ಸಾಮಾನ್ಯವಾಗಿ ಆರೋಗ್ಯಕರ ಆಹಾರ ದೈಹಿಕ ಆರೋಗ್ಯವನ್ನೀ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿದಿರುತ್ತೀರಾ, ಆದರೆ ಇದು ಮಾನಸಿಕ ಆರೋಗ್ಯಕ್ಕೂ ಸಂಬಂಧಿಸಿದ್ದು. ಪೌಷ್ಠಿಕಾಂಶದ ಆಹಾರಗಳೊಂದಿಗೆ ಉತ್ತಮ ಆರೋಗ್ಯಕರ ಆಹಾರವು ನಮ್ಮ ಕರುಳಿನ ಆರೋಗ್ಯಕರ ಆಹಾರ ಮಾನಸಿಕ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ. ನೀವು ಕೆಲಸದಲ್ಲಿ ಒತ್ತಡದ ದಿನವನ್ನು ಹೊಂದಿರುವಾಗ ಅಥವಾ ಪರೀಕ್ಷೆಯ ಮೊದಲು ಆತಂಕದಿಂದ ಇದ್ದಾಗ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡಿದ ಅನುಭವವಾಗುವುದು ಸಾಮಾನ್ಯ. ಆದರೆ ಇಂತಹ ಒತ್ತಡದಿಂದ ಹೊಟ್ಟೆ ಉರಿ, ಗ್ಯಾಸ್ಟ್ರಿಕ್ ಅಥವಾ ಮಲಬದ್ಧತೆಯಂತಹ ಅರೋಗ್ಯ ಸಮಸ್ಯೆ ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆಯುವುದು ಉತ್ತಮ. ಇದರಲ್ಲೇ ತಿಳಿಯುತ್ತದೆ ದೈಹಿಕ ಅರೋಗ್ಯ ಮತ್ತು ಮಾನಸಿಕ ಅರೋಗ್ಯ ಒಂದಕ್ಕೊಂದು ಜೋಡಿಕೊಂಡಿದೆ ಎಂದು. ಹಾಗಾಗಿ ದಿನನಿತ್ಯ ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ.
ವಿರಾಮವೇ ಇಲ್ಲದೆ ಬರೀ ಕೆಲಸ ಮಾಡಿದರೆ ಮಾನವನ ಮನಸ್ಸನ್ನು ಮಂದವಾಗುತ್ತದೆ. ವಿರಾಮ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಯದ ಕೊರತೆಯ ಪರಿಣಾಮವಾಗಿ ಜನರಲ್ಲಿ ನಾವಿನ್ಯತೆ, ಕ್ರಿಯಾಶೀಲತೆ ಕುಗ್ಗಿ ಹೋಗಿದೆ. ಈ ಕೆಲಸ, ಓದು, ಪರೀಕ್ಷೆಗಳ ನಡುವೆ ನೀವು ವಿರಾಮ ತೆಗೆದುಕೊಳ್ಳುವುದನ್ನೇ ನಿಲ್ಲಿಸಿದ್ದೀರಿ. ನೀವು ಆನಂದಿಸುವ ವಿಷಯಗಳಲ್ಲಿ ಪಾಲ್ಗೊಳ್ಳಲು ನಿಮಗೆ ಸಮಯ ಸಿಗದಿದ್ದಾಗ, ಸಂತೋಷಕ್ಕೆ ಕಾರಣವಾದ ನಿಮ್ಮ ಮೆದುಳಿನ ಗ್ರಾಹಕಗಳು ಉತ್ತೇಜನಗೊಳ್ಳುವುದಿಲ್ಲ. ನಿಮಗೆ ಜೀವನ ಮತ್ತು ಕೆಲಸಗಳಲ್ಲಿ ಇನ್ನಷ್ಟು ಉತ್ತೇಜನ ಸಿಗಲು ವಿಶ್ರಾಂತಿ ಸಹಾಯಮಾಡುತ್ತದೆ.
ನಿಮ್ಮ ಫೋನ್ ಅನ್ನು ಎತ್ತಿಕೊಂಡು ನೀವು ಸಂಪರ್ಕಿಸದ ಹಳೆಯ ಸ್ನೇಹಿತರಿಗೆ ಕರೆ ಮಾಡಿ. ಮಾನವರು ಸಾಮಾಜಿಕ ಜೀವಿಗಳಾಗಿದ್ದು, ಸಂಜದ ಜೊತೆ, ಜನರ ಜೊತೆ ಸಂಪರ್ಕದಲ್ಲಿರುವುದು ಅಗತ್ಯದ ವಿಷಯ. ಇಂದಿನ ವೇಗದ ಜೀವನದಲ್ಲಿ ಈ ಮೂಲಭೂತ ಅಗತ್ಯವು ಸವೆದುಹೋದಾಗ, ನಿಮ್ಮ ಮಾನಸಿಕ ಆರೋಗ್ಯವು ಹಾಳಾಗುತ್ತದೆ. ವರ್ಷವಿಡೀ ಹಬ್ಬಗಳಿಂದ ಸಮೃದ್ಧವಾಗಿರುವ ಭಾರತೀಯ ಸಂಸ್ಕೃತಿಯು ಜನರೊಂದಿಗೆ ಬೆರೆಯುವ ಅವಕಾಶವನ್ನು ಒದಗಿಸುತ್ತದೆ. ಆದ್ದರಿಂದ ಮುಂದಿನ ಬಾರಿ ನೀವು ದೀಪಾವಳಿ ಅಥವಾ ಕ್ರಿಸ್ಮಸ್ ಪಾರ್ಟಿಗೆ ಹೋಗುವುದನ್ನು ತಪ್ಪಿಸುವಾಗ ಎರಡು ಬಾರಿ ಯೋಚಿಸಿ.
ಭಾರತೀಯ ಜೀವನ ವಿಧಾನವು ಯಾವಾಗಲೂ ಕೆಲವು ಮೂಲಭೂತ ಯೋಗಾಸನಗಳು (ಭಂಗಿಗಳು) ಮತ್ತು ಪ್ರಾಣಾಯಾಮಗಳನ್ನು (ಉಸಿರಾಟದ ವ್ಯಾಯಾಮಗಳು) ಒಳಗೊಂಡಿದೆ. ನಮ್ಮ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿರುವ ಸರಳವಾದ ಸ್ಟ್ರೆಚಿಂಗ್ ಮತ್ತು ಉಸಿರಾಟವು ಈಗ ಪಾಶ್ಚಿಮಾತ್ಯ ವಿಜ್ಞಾನದಿಂದ ಇದು ಉತ್ತಮ ಮಾನಸಿಕ ಆರೋಗ್ಯಕ್ಕೆ ಪರಿಣಾಮಕಾರಿ ಎಂದು ಸಾಬೀತಾಗಿದೆ. ಆದ್ದರಿಂದ, ನೀವು ಒತ್ತಡವನ್ನು ಅನುಭವಿಸಿದರೆ, ನಮ್ಮ ದೇಶದ ಯೋಗ ಸಂಕೃತಿಯಿಂದ ನೀವು ಆರೋಗ್ಯಕರವಾಗಿರಲು ಮಾರ್ಗಗಳನ್ನು ಕಾಣಬಹುದು.
Published On - 2:56 pm, Tue, 28 February 23