ನೀವು ತಿನ್ನುವ ನೂಡಲ್ಸ್ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ
ನೂಡಲ್ಸ್ ಗಳು ದೈನಂದಿನ ದಿನಸಿಯ ಭಾಗಗಳು ಈಗಾಗಲೇ ಆಗಿಹೋಗಿವೆ. ಕೆಲವೊಮ್ಮೆ ಬೆಳಗಿನ ತಿಂಡಿಗೆ ಅಥವಾ ಸಂಜೆಯ ತಿಂಡಿಗೆ ಇದು ಸಾಮಾನ್ಯ. ಇದು ಹೆಚ್ಚಿನ ಜನರ ನೆಚ್ಚಿನ ತಿಂಡಿಯಾಗಿದೆ. ಎಲ್ಲ ವಯಸ್ಸಿನವರು ಇದನ್ನ ಈಗ ಇದನ್ನು ಸ್ವೀಕರಿಸುತ್ತಿದ್ದಾರೆ.
ನೂಡಲ್ಸ್ ತಕ್ಷಣ ಕೇಲವೇ ಕೆಲವು ನಿಮಿಷದಲ್ಲಿ ತಯಾರಿಸಲು ಸುಲಭವಾಗಿರುವುದರಿಂದ ಇದು ಹೆಚ್ಚಿನ ಜನರ ಅಚ್ಚುಮೆಚ್ಚು. ಗೋಧಿ ಹಿಟ್ಟು ಹಾಗೂ ಇತರ ಹಿಟ್ಟುಗಳಿಂದ ಇದು ಮುಖ್ಯವಾಗಿ ತಯಾರಿಸಲಾಗುತ್ತದೆ. ಇನ್ನು ಕೆಲವರು ಬೆಳೆಕಾಳುಗಳನ್ನು ಹಾಗೂ ಸಿರಿಧಾನ್ಯಗಳನ್ನು ಬಳಸುತ್ತಾರೆ ಜೊತೆಗೆ ಕೆಲವು ಮಸಾಲಾ ಪದಾರ್ಥಗಳು ,ಉಪ್ಪು ,ಸಕ್ಕರೆ ಮುಂತಾದವುಗಳು ಇದರ ಘಟಕ ಅಂಶಗಳು. ಇನ್ನು ಹಲವು ತಯಾರಕರು ತರಕಾರಿಗಳು, ಮೊಟ್ಟೆ, ಅಲ್ಲದೆ ಸಮುದ್ರಜನ್ಯ ಪದಾರ್ಥಗಳನ್ನು ಸೇರಿಸಿ ವಿವಿಧ ವಿಧವಾಗಿ ಇದನ್ನ ಮಾರುಕಟ್ಟೆಗೆ ತರುತ್ತಿದ್ದಾರೆ. ಈ ನೂಡಲ್ಸ್ ಗಳನ್ನೂ ಮುಖ್ಯವಾಗಿ ಮೈದಾದಿಂದನೇ ತಯಾರಿಸುತ್ತಾರೆ ಇನ್ನು ಕೆಲವರು ಆಟ್ಟಾದಿಂದ ಅಂದರೆ ಗೋಧಿಯ ಹಿಟ್ಟಿನಿಂದ ತಯಾರಿಸುತ್ತಾರೆ ಆ ಕಾರಣಕ್ಕೆ ಆಟ್ಟಾ ನೂಡಲ್ಸ್ ಮೈದಾ ನೂಡಲ್ಸ್ ಗಳಿಗಿಂತ ಹೆಚ್ಚು ಉತ್ತಮ ಅಂತ ಗ್ರಹಿಸಲಾಗಿದೆ.
ಈ ನೂಡಲ್ಸ್ FSSAI ಮಾದರಿಯ ನಿರ್ದೇಶನದಂತೆ ಪರೀಕ್ಷಿಸುತ್ತಾರೆ. ಈ ಪರೀಕ್ಷೆಗಳಲ್ಲಿ ಸೆನ್ಸರಿ ಪೆನಲ್ ಟೆಸ್ಟ್, ಆಮ್ಲದ ಅಂಶದ ಪರೀಕ್ಷೆ ಒಟ್ಟಾರೆ ಪ್ರೋಟಿನ, ಪಿಷ್ಟದ ಅಂಶಗಳ, ಸ್ನಿಗ್ಧತೆ, ತೇವಾಂಶ ಮತ್ತು ಸ್ವೀಕರಿಸಿದ್ದರಿಂದ ತಯಾರಾಗುವ ಶಕ್ತಿ ನಿಖರ ತೂಕ, ಕೆಲವು ರಾಸಾಯನಿಕಗಳು ಇರುವಿಕೆಗಳ ಬಗ್ಗೆ ಪರೀಕ್ಷೆಯನ್ನು ಅವಲಂಬಿಸಿದೆ.
ಸೆನ್ಸರಿ ಪೆನಲ್ ಟೆಸ್ಟ್:
ಇದು ಇದರ ಬಣ್ಣ,ರೂಪ, ಸುವಾಸನೆ, ಫ್ಲೇವರ್ ,ಪರಿಮಳ, ರುಚಿ ವಿನ್ಯಾಸ ಹಾಗೂ ಸ್ವೀಕಾರತ್ವವನ್ನು ಅವಲಂಬಿಸಿರುತ್ತದೆ.
ಹೊರತೆಗೆಯಲಾದ ಕೊಬ್ಬಿನ ಆಮ್ಲದ ಮೌಲ್ಯ:
ಇದು ಆ ವಸ್ತುವಿನಲ್ಲಿರುವ ಸ್ನಿಗ್ದತೆ , ಎಣ್ಣೆ ಅದರ ಅವಸ್ಥೆಯನ್ನು ಮತ್ತು ಉತ್ತಮತೆಯನ್ನು ತಿಳಿಸುತ್ತದೆ. ಇದು 2ಕ್ಕೆ ಮೀರಬಾರದು.
Acid Insoluble Ash:
ಇದು ಅದರಲ್ಲಿರುವ ಕಲ್ಮಶ, ಧೂಳುನ್ನ ಸೂಚಿಸುತ್ತವೆ. ಇದು ಒಟ್ಟಾರೆ ಬೂದಿಯ ಶೇಕಡಾ .03 ಮೀರಬಾರದು ಎಂದು FSSAI ಸೂಚಿಸುತ್ತದೆ.
ಒಟ್ಟಾರೆ ಪ್ರೊಟೀನ್:
ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರೋಟೀನ್ ಪಾತ್ರ ಮಹತ್ವದ್ದು. ಆರೋಗ್ಯಕರ ಕೊಲೆಸ್ಟ್ರಾಲ್ ಅನ್ನ ಇದು ಕಡಿಮೆಯಾಗುವಂತೆ ಮಾಡಿ, ಅನಾರೋಗ್ಯಕರ ಕೊಲೆಸ್ಟ್ರಾಲ್ ಅನ್ನು ಇದು ಹೆಚ್ಚಿಗೆಯಾಗುವಂತೆ ಮಾಡುವುದರಲ್ಲಿ ಇದರ ಪ್ರಭಾವ ಹೆಚ್ಚಿಗೆ.ಇದು 0.01-0.2% ಮೀರಬಾರದು.
ಭೌತ-ರಾಸಾಯನಿಕ ಪರೀಕ್ಷೆಗಳು:
ಎಫ್‌ಎಸ್‌ಎಸ್‌ಎಐ ನಿಯಮಾವಳಿಯ ಪ್ರಕಾರ ದ್ರವ್ಯರಾಶಿಯ ತೇವಾಂಶದ ಶೇಕಡಾವಾರು ನಿರ್ದಿಷ್ಟ ಮಿತಿಯೊಳಗೆ (10 ಪ್ರತಿಶತ ಗರಿಷ್ಠ) ಇರಬೇಕು. ಹೆಚ್ಚಿನ ತೇವಾಂಶವು ಉತ್ಪನ್ನವನ್ನು ಬೇಗನೆ ಕೆಡುವಂತೆ ಮಾಡುತ್ತದೆ. ಎಫ್‌ಎಸ್‌ಎಸ್‌ಎಐ ನಿಯಮದ ಪ್ರಕಾರ, ತ್ವರಿತ ನೂಡಲ್ಸ್‌ನಲ್ಲಿ ತೇವಾಂಶವು ಕರಿದ ನೂಡಲ್ಸ್‌ನಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಮತ್ತು ಹುರಿಯದ ನೂಡಲ್ಸ್‌ನಲ್ಲಿ ಶೇಕಡಾ 13 ಕ್ಕಿಂತ ಹೆಚ್ಚಿರಬಾರದು.
ಇದನ್ನೂ ಓದಿ: ಶಾಖದ ಅಲೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ ಆರೋಗ್ಯ ಮಾರ್ಗಸೂಚಿ ಬಿಡುಗಡೆ
ಪಿಷ್ಟಮಯ ಪದಾರ್ಥ:
ತ್ವರಿತ ನ್ಯೂಡಲ್ಸನಲ್ಲಿ ಪಿಷ್ಠಮಯವಾದ ಶಕ್ತಿಯ ಮೂಲವಾಗಿದೆ. ಆದರೆ ಇದಕ್ಕೆ ಯಾವುದೇ ರಾಷ್ಟ್ರೀಯ ಮಾನದಂಡ ಇಲ್ಲ. ತಯಾರಿಸಲು ಬೇಕಾಗುವ ವೇಳೆ. ನ್ಯೂಡಲ್ಸ ತಯಾರಿಸಲು ಬೇಕಾಗುವ ಸಮಯವನ್ನು ಹಾಗೂ ನಿರ್ದೇಶನವನ್ನು ಅದರ ಮೇಲೆ ಬರೆದಿದ್ದು ಇರುತ್ತದೆ. ಆದರೆ ಈ ಸಮಯ ಎರಡರಿಂದ ನಾಲ್ಕು ನಿಮಿಷದವರೆಗೆ ಅಂತ ಬರೆದಿದ್ದು ಇದು ನೀರು ಕುದಿಯಲು ಪ್ರಾರಂಭಿಸಿದ ನಂತರ ತಗಲುವ ಸಮಯ. ಇದು ಮೈದಾ ದಿಂದ ಅಥವಾ ಆಟದಿಂದ ಮಾಡಿದ್ದಾಗಿರುವುದರಿಂದ ಸ್ವಲ್ಪ ಹೆಚ್ಚು ಹೊತ್ತು ಅವಶ್ಯಕತೆಗಿಂತ ಸ್ವಲ್ಪ ಜಾಸ್ತಿ ನೀರು ಹಾಕಿ ಕುದಿಸಿದರೆ ಜೀರ್ಣಕ್ಕೆ ಸ್ವಲ್ಪ ಹಗುರವಾಗಬಹುದು.
ಉಪ್ಪಿನ ಅಂಶ:
ಸಾಮಾನ್ಯವಾಗಿ ಉಪ್ಪು ಒಂದು ನೈಸರ್ಗಿಕವಾಗಿ ಲಭ್ಯವಾಗುವ ಪ್ರಿಸರ್ವೇಟಿವ್ ಅಂದರೆ ಹಾಳಾಗದೆ ಇರುವಂತೆ ಮಾಡುವಂತಹ ಪದಾರ್ಥ. ಈ ಗುಣದ ಜೊತೆಗೆ ಆ ಆಹಾರದ ರುಚಿಯನ್ನು ಹೆಚ್ಚಿಗೆ ಮಾಡುವಲ್ಲಿ ಉಪ್ಪಿನ ಪಾತ್ರ ಮಹತ್ವದ್ದು. ಯಾವುದೇ ಆಹಾರ ಪದಾರ್ಥದಲ್ಲಿ ಉಪ್ಪು ಅದರ ಇತಿಮಿತಿಯಲ್ಲಿ ಇರಬೇಕು. ಉಪ್ಪಿನಲ್ಲಿ ದೊಡ್ಡ ಪ್ರಮಾಣದ ಸೋಡಿಯಂ ಇರುತ್ತದೆ. ವಿಶ್ವ ಆರೋಗ್ಯಸಂಸ್ಥೆಯ ನಿರ್ದೇಶನದಂತೆ ವಯಸ್ಕನೊಬ್ಬರಿಗೆ ಒಂದು ದಿನಕ್ಕೆ ಎರಡು ಗ್ರಾಮನಷ್ಟು ಸೋಡಿಯಂ ಬೇಕಾಗಬಹುದು ಅಂದರೆ ಸರಿ ಸುಮಾರು ಐದು ಗ್ರಾಂ ನಷ್ಟು ಉಪ್ಪಿಗೆ ಸಮ. ಉಪ್ಪಿನ ಅಂಶ ಹೆಚ್ಚಾದಂತೆ ಅದು ರಕ್ತದೊತ್ತಡ ಹಾಗೂ ಹೃದಯದ ಹಾಗೂ ರಕ್ತನಾಳಗಳ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.
ಸೀಸ:
ಇದು ನಮ್ಮ ದೇಹದ ವಿವಿಧ ವ್ಯವಸ್ಥೆಗಳ ಮೇಲೆ ಅದರಲ್ಲೂ ಮುಖ್ಯವಾಗಿ ಯಕೃತ್ತು ಮತ್ತು ಮೂತ್ರಜನಕಾಂಗಗಳ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತದೆ ಅದರಲ್ಲಿ ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಲ್ಲಿ ಈ ಪರಿಣಾಮ ಜಾಸ್ತಿ. ಅಲ್ಲದೆ ನರಮಂಡಲಗಳ ಮೇಲು ಕೂಡ ಇದು ಕೆಟ್ಟ ಪರಿಣಾಮವನ್ನು ಬೀರುತ್ತದೆ. ನೂಡಲ್ಸ್ ಗಳಲ್ಲಿ 2.5mg /kg ಗಿಂತ ಹೆಚ್ಚಿಗೆ ಇರಬಾರದು ಎಂಬ ಮಾನದಂಡ. ಈ ಕಾರಣಕ್ಕೆ ಪ್ರಖ್ಯಾತ ಬ್ರಾಂಡ್ ಒಂದು ವಿವಾದಕ್ಕೆ ಒಳಗಾಗಿತ್ತು. ಜೊತೆಗೆ ನೀಡುವಂತಹ ಮಸಾಲದಲ್ಲಿ ಉಪ್ಪಿನ ಪ್ರಮಾಣ ಇರುತ್ತದೆ ಅದನ್ನು ಅರ್ಧದಷ್ಟು ಉಪಯೋಗಿಸಿದರೆ ಈ ಪ್ರಮಾಣ ಸುಲಭವಾಗಿ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಇದು ಒಂದು ತಿಂಡಿ ಅಷ್ಟೇ ಬಿಟ್ರೆ ಮುಖ್ಯ ಆಹಾರ ಆಗಲು ಸಾಧ್ಯವಿಲ್ಲ. ಇದರ ಸೇವನೆಯಲ್ಲಿ ಮಿತಿ ಇರಲಿ ಎಂದು ಕೆಲವು ತಜ್ಞರ ಅಭಿಪ್ರಾಯ.
– ಡಾ ರವಿಕಿರಣ ಪಟವರ್ಧನ ಶಿರಸಿ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:10 pm, Tue, 28 February 23