ದೇವಸ್ಥಾನಗಳಲ್ಲಿ ವೈದೀಕರಿಗಾಗಿ ವೈದ್ಯಕೀಯ ದತ್ತಿನಿಧಿ ವ್ಯವಸ್ಥೆ ಇಂದಿನ ಅವಶ್ಯಕತೆ – ಡಾ. ರವಿಕಿರಣ್ ಪಟವರ್ಧನ್​

ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನ ಕಟ್ಟಡ ಹಾಗೂ ದೇವಸ್ಥಾನದ ಅಭಿವೃದ್ಧಿ ಕಡೆಗೆ,ಕಟ್ಟಡ,ಸಭಾಮಂಟಪ, ಕಲ್ಯಾಣ ಮಂಟಪಗಳು ನಿರ್ಮಾಣದ ಕಡೆ ಹೆಚ್ಚಿನ ಗಮನ ಹರಿಸುತ್ತಿರುವುದು ಅಲ್ಲಿಯ ವೈದಿಕರು ಹಾಗೂ ಸಿಬ್ಬಂದಿಗಳ ಆರೋಗ್ಯ ವಿಮೆ ಅನುವು ಇವತ್ತಿನ ಅವಶ್ಯಕತೆ.

ದೇವಸ್ಥಾನಗಳಲ್ಲಿ ವೈದೀಕರಿಗಾಗಿ ವೈದ್ಯಕೀಯ ದತ್ತಿನಿಧಿ ವ್ಯವಸ್ಥೆ ಇಂದಿನ ಅವಶ್ಯಕತೆ - ಡಾ. ರವಿಕಿರಣ್ ಪಟವರ್ಧನ್​
ಡಾ. ರವಿಕಿರಣ ಪಟವರ್ಧನ, ಶಿರಸಿ, ಆಯುರ್ವೇದ ವೈದ್ಯರುImage Credit source: Pragyata
Follow us
ಅಕ್ಷತಾ ವರ್ಕಾಡಿ
|

Updated on:Jan 25, 2023 | 3:29 PM

ಪ್ರತಿ ಊರಿನಲ್ಲೂ ಪ್ರತಿ ಓಣಿ, ಗಲ್ಲಿಗೆ ಒಂದಾದರೂ ದೇವಸ್ಥಾನ(Temple) ಇದೆ. ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನ ಕಟ್ಟಡ ಹಾಗೂ ದೇವಸ್ಥಾನ ಅಭಿವೃದ್ಧಿ ಕಡೆಗೆ,ಕಟ್ಟಡ,ಸಭಾಮಂಟಪ, ಕಲ್ಯಾಣ ಮಂಟಪಗಳು ನಿರ್ಮಾಣದ ಕಡೆ ಹೆಚ್ಚಿನ ಗಮನ ಹರಿಸುತ್ತಿರುವುದು ಅಲ್ಲಿಯ ವೈದಿಕರು ಹಾಗೂ ಸಿಬ್ಬಂದಿಗಳ ಆರೋಗ್ಯ ವಿಮೆ ಅನುವು ಇವತ್ತಿನ ಅವಶ್ಯಕತೆ. ಕರೋನ ನಂತರದ ಪರಿಸ್ಥಿತಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಒಂದು ದೊಡ್ಡ ಮೊತ್ತದ ನಿಧಿಯನ್ನು ಬ್ಯಾಂಕುಗಳಲ್ಲಿ ಇಟ್ಟು ದತ್ತಿನಿಧಿಯಂತೆ ಇಟ್ಟು ವೈದಿಕದ ಕುಟುಂಬದ ಸದಸ್ಯರಿಗೆ ಹಾಗೂ ಸಿಬ್ಬಂದಿಗಳ ಆರೋಗ್ಯ ಸಮಸ್ಯೆ ಉಂಟಾದಾಗ, ಆಸ್ಪತ್ರೆಯಲ್ಲಿ ದಾಖಲಾಗುವ ಪರಿಸ್ಥಿತಿಯ ನಿಭಾವಣೆಗೆ ಈ ದತ್ತಿನಿಧಿಯ ಬಡ್ಡಿ ಹಣವನ್ನು ನೀಡುವಂತಹ ಒಂದು ಹೊಸ ಯೋಜನೆಯನ್ನು ಪ್ರತಿ ದೇವಸ್ಥಾನ ಕಾರ್ಯರೂಪಕ್ಕೆ ತರಬೇಕಿದೆ. ಆ ವರ್ಷ ಯಾರಿಗೂ ಈ ಹಣದ ಅವಶ್ಯಕತೆ ಬರದೇ ಇದ್ದರೆ ಅದನ್ನೂ ಮೂಲಧನಕ್ಕೆ ವಿಲೀನ ಗೊಳಿಸಬೇಕಿದೆ.

ಇಂಥ ಒಂದು ಪರಿಸ್ಥಿತಿ ನಿಭಾವಣೆ ದೂಡ್ಡ ದೇವಸ್ಥಾನದ ವೈದಿಕರಿಗೆ ಅಷ್ಟು ಕಠಿಣ ಅಲ್ಲ.ಆದರ ಸಣ್ಣ ಊರಿನ,ಹಳ್ಳಿಯ ಪುಟ್ಟ ದೇವಸ್ಥಾನದ ವೈದಿಕರಿಗೆ ಕಠಿಣ.ಈ ರೀತಿಯ ದತ್ತಿನಿಧಿ ಸಣ್ಣ ಊರಿನ,ಹಳ್ಳಿಯ ಪುಟ್ಟ ದೇವಸ್ಥಾನದ ಆಡಳಿತ ಮಂಡಳಿಯವರಿಗೂ ಕಠಿಣ. ಆದರೂ ಹನಿಹನಿಕೂಡಿದರೆ ಹಳ್ಳ, ಪ್ರತಿ ವರ್ಷ ಈ ನಿಧಿ ಸೇರ್ಪಡೆ ನಿಶ್ಚಿತ ಮೊತ್ತ ಸೇರೀಸಿದರೆ ವೈದಿಕ ಕುಟುಂಬದವರು ಈ ಕಾರಣಕ್ಕೆ ಸಮಸ್ಯೆ ಎದುರಿಸುವದಿಲ್ಲ. ಯಾವುದೇ ಕಾರಣಕ್ಕೂ ನಿಧಿ ಕಾಯಮ್ ಆಗಿ ಹಾಗೆಯೇ ಇರುವಂತಹ ಒಂದು ಅನುವು ಇದರಲ್ಲಿ ಅವಶ್ಯ.

ದೊಡ್ಡ ದೊಡ್ಡ ದೇವಸ್ಥಾನಗಳು ಹಲವಾರು ಕಾರಣಗಳಿಗೆ ದೊಡ್ಡ ಪ್ರಮಾಣದಲ್ಲಿ ದೇಣಿಗೆಯನ್ನು ನೀಡುತ್ತವೆ ಇಂತಹ ದೇಣಿಗೆಗಳಲ್ಲಿ ಒಂದಿಷ್ಟು ಪ್ರಮಾಣವನ್ನು ಪುಟ್ಟದೇವಸ್ಥಾನದ ವೈದಿಕರ ವೈದ್ಯಕೀಯ ದತ್ತಿನಿಧಿಗೆ ನೇರ, ನಿರಂತರವಾಗಿ ದಾನ ಮಾಡಿದರೆ ಇದು ಆ ದೇವಸ್ಥಾನದ ಈ ರೀತಿಯ ದತ್ತಿ ನಿಧಿಯ ದೊಡ್ಡ ಮೊತ್ತ ಆಗಲು ದೊಡ್ಡ ದೇವಸ್ಥಾನಗಳು ಸಹಾಯ ಮಾಡಬಹುದಾಗಿದೆ. ಅಥವಾ ಕೆಲವು ದೊಡ್ಡ ದೇವಸ್ಥಾನಗಳು ಮಠ ಮಂದಿರಗಳು ನಡೆಸುತ್ತಿರುವ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ವೈದಿಕರು ಹಾಗೂ ಕುಟುಂಬದ ಸದಸ್ಯರಿಗೆ ಅವಶ್ಯವಿದ್ದ ಈ ವೈದ್ಯಕೀಯ ಸೌಲಭ್ಯವನ್ನು ಉಚಿತವಾಗಿ ಮಾಡುವ ಮೂಲಕ ಒಂದು ಹೊಸ ಯುಗಕ್ಕೆ ನಾಂದಿ ಹಾಡಬೇಕಿದೆ.

ಕೆಲವು ಆಸ್ಪತ್ರೆಗಳೂ ಕೂಡ ಇಂತಹ ಒಂದು ವಿಚಾರದಲ್ಲಿ ದೇವಸ್ಥಾನಗಳ ಕೈಜೋಡಿಸಿ ಅವಶ್ಯಕತೆಯಲ್ಲಿ ತಮ್ಮದೇ ಆದ ರಿಯಾಯಿತಿಯನ್ನು ಸ್ವಯಂ ಪ್ರೇರಿತವಾಗಿ ಘೋಷಿಸಬಹುದಾಗಿದೆ ಅಥವಾ ಕೆಲವು ಉಚಿತ ಮಾಡುವ ಪ್ರಯತ್ನವನ್ನು ಕೂಡ ಮಾಡಬಹುದಾಗಿದೆ.ಅದರಂತೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರಗಳು ಕೂಡ ಈ ವೈದ್ಯಕೀಯ ನಿಧಿಗೆ ತಮ್ಮ ಸಹಕಾರವನ್ನು ನೀಡಬಹುದಾಗಿದೆ ಇಂತಹ ವೈದಿಕರ ವೈದ್ಯಕೀಯ ನಿಧಿಯ ಬಡ್ಡಿಗೆ ಆದಾಯ ತೆರಿಗೆಯಿಂದ ವಿನಾಯಿತಿಯನ್ನು ಕೇಂದ್ರ ಸರ್ಕಾರ ಘೋಷಿಸುವಂಥ ಆಗಬೇಕು.

ಅಲ್ಲದೆ ಹಿಂದೂ ಧರ್ಮದ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಮಠಗಳು ,ಮಠಮಾನ್ಯಗಳ ಪಾತ್ರ ಮಹತ್ವದ್ದು. ಮಠಾಧೀಶರು ಇಂತಹ ಒಂದು ವೈದ್ಯಕೀಯ ಅಗತ್ಯ ನಿಧಿಗಾಗಿ ಪ್ರತಿಯೊಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಕಡ್ಡಾಯ ಆದೇಶವನ್ನು ಮಾಡಿದಲ್ಲಿ ಇದೊಂದು ಹೊಸ ಧಾರ್ಮಿಕ ವ್ಯವಸ್ಥೆಯ ಒಂದು ವಿಶೇಷ ಭಾಗವಾಗಿ ರೂಪುಗೊಳ್ಳಬಹುದು.ಇಷ್ಟೆಲ್ಲ ವಿಚಾರದ ಹಿಂದಿನ ಮಹತ್ವ ಇಷ್ಟೇ ದೇವರಿಗೆ ಭಕ್ತರು ಅಹವಾಲು ತಲುಪಿಸುವಲ್ಲಿ ವೈದಿಕರು ಮಹತ್ವದ ಪಾತ್ರವನ್ನು ವಹಿಸುತ್ತಿದ್ದು ಇಂತಹ ಕುಟುಂಬದವರಿಗೆ ವೈದ್ಯಕೀಯ ಖರ್ಚುವೆಚ್ಚಕ್ಕಾಗಿ ತೊಂದರೆಗೊಳಗಾಗುವುದು ಬೇಡ ಹೇಳುವ ವಿಚಾರ  ಅಷ್ಟೇ.

ಮಾಹಿತಿ: ಡಾ. ರವಿಕಿರಣ ಪಟವರ್ಧನ, ಶಿರಸಿ, ಆಯುರ್ವೇದ ವೈದ್ಯರು

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Wed, 25 January 23

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ