World Compliment Day: ವಿಶ್ವ ಅಭಿನಂದನಾ ದಿನದ ಇತಿಹಾಸ ಹಾಗೂ ವಿಶೇಷತೆಗಳು ಇಲ್ಲಿವೆ
ಮಾರ್ಚ್ 1 ರಂದು ವಿಶ್ವ ಅಭಿನಂದನಾ ದಿನವೆಂದು ಆಚರಿಸಲಾಗುತ್ತದೆ. ನೀವು ಅಭಿನಂದನೆ ಹೇಳಲು ಬಯಸುವ ವ್ಯಕ್ತಿಗೆ ಇಂದು ಅಭಿನಂದನೆಯನ್ನು ತಿಳಿಸಬಹುದಾಗಿದೆ.
ಮಾರ್ಚ್ 1 ರಂದು ವಿಶ್ವ ಅಭಿನಂದನಾ ದಿನ(World Compliment Day) ವೆಂದು ಆಚರಿಸಲಾಗುತ್ತದೆ. ನೀವು ಅಭಿನಂದನೆ ಹೇಳಲು ಬಯಸುವ ವ್ಯಕ್ತಿಗೆ ಇಂದು ಅಭಿನಂದನೆಯನ್ನು ತಿಳಿಸಬಹುದಾಗಿದೆ. ಇದು ನಿಮ್ಮಿಂದ ಅಭಿನಂದನೆ ಸ್ವೀಕರಿಸಿದ ವ್ಯಕ್ತಿಗೆ ಖುಷಿಯನ್ನು ನೀಡುವುದರ ಜೊತೆಗೆ ನಿಮ್ಮ ಮುಖದಲ್ಲೂ ನಗುವನ್ನು ಮೂಡಿಸಲು ಕಾರಣವಾಗುತ್ತದೆ. ಆದ್ದರಿಂದ ಈ ವಿಶೇಷ ದಿನದಂದು ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಸಂತೋಷವನ್ನು ಹರಡಲು ಈ ದಿನ ಸೂಕ್ತವಾಗಿದೆ.
ವಿಶ್ವ ಅಭಿನಂದನಾ ದಿನದ ಇತಿಹಾಸ:
ವಿಶ್ವ ಅಭಿನಂದನಾ ದಿನವನ್ನು ಅಧಿಕೃತವಾಗಿ ಹ್ಯಾನ್ಸ್ ಪೂರ್ಟ್‌ಲಿಟ್ ಅವರು ತಮ್ಮ ತಾಯ್ನಾಡಿನ ನೆದರ್‌ಲ್ಯಾಂಡ್‌ನಲ್ಲಿ ಪ್ರಾರಂಭಿಸಿದರು. ಈ ದಿನ ರಜಾ ದಿನವೆಂದು ಘೋಷಿಸಲಾಯಿತು. ನೆದರ್ಲ್ಯಾಂಡ್ಸ್ನಲ್ಲಿ, ಇದು ಕೇವಲ ರಾಷ್ಟ್ರೀಯ ಅಭಿನಂದನೆ ದಿನವಾಗಿ ಪ್ರಾರಂಭವಾಯಿತು, ಆದರೆ ಪ್ರಪಂಚದಾದ್ಯಂತದ ಹೆಚ್ಚಿನ ಜನರು ಈ ರಜಾದಿನವನ್ನು ಆಚರಿಸಲು ಪ್ರಾರಂಭಿಸಿದರು. ಮುಂದೆ ಈ ದಿನ ವಿಶ್ವ ಅಭಿನಂದನೆ ದಿನವಾಗಿ ಬದಲಾಯಿತು.
ಇದನ್ನೂ ಓದಿ: ನಿಮ್ಮ ರಿಲೇಷನ್ಶಿಪ್ನಲ್ಲಿ ಇಂತಹ ಅಭ್ಯಾಸಗಳು ಕಂಡುಬಂದರೆ ತಕ್ಷಣ ಸಂಬಂಧಕ್ಕೆ ಬ್ರೇಕ್ ಹಾಕಿ
ವಿಶ್ವ ಅಭಿನಂದನಾ ದಿನವನ್ನು ಆಚರಿಸುವುದು ಹೇಗೆ?
ಈ ರಜಾದಿನವನ್ನು ಆಚರಿಸುವುದು ಯಾರಿಗಾದರೂ ಪ್ರಾಮಾಣಿಕ ಅಭಿನಂದನೆಯನ್ನು ನೀಡುವಷ್ಟು ಸರಳವಾಗಿದೆ. ಸ್ನೇಹಿತ, ಕುಟುಂಬದ ಸದಸ್ಯರು, ಸಹೋದ್ಯೋಗಿ ಅಥವಾ ಸಂಪೂರ್ಣ ಅಪರಿಚಿತರಾಗಿದ್ದರೂ ಪರವಾಗಿಲ್ಲ ನೀವು ಅಭಿನಂದನೆಯನ್ನು ಸಲ್ಲಿಸಬಹುದಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ #WorldComplimentDay ಎಂಬ ಹ್ಯಾಶ್‌ಟ್ಯಾಗ್ ಬಳಸಿಕೊಂಡು ತಮ್ಮ ಖಾತೆಗಳಲ್ಲಿ ಇತರ ಜನರಿಗೆ ತಮ್ಮ ಅಭಿನಂದನೆಗಳನ್ನು ಪೋಸ್ಟ್ ಮಾಡಬಹುದು.
ಅಭಿನಂದನೆಗಳನ್ನು ನೀಡುವ ಪ್ರಯೋಜನಗಳು:
ಅಭಿನಂದನೆಗಳು ನೀಡುವ ವ್ಯಕ್ತಿ ಮತ್ತು ಸ್ವೀಕರಿಸುವ ವ್ಯಕ್ತಿಯು ಉತ್ತಮ ಭಾವನೆಯನ್ನು ಉಂಟುಮಾಡುತ್ತದೆ. ನೀವು ನಿಮ್ಮನ್ನು ಖುಷಿಪಡಿಸುವುದು ಮಾತ್ರವಲ್ಲದೇ ಇನ್ನೊಬ್ಬರ ಮುಖದಲ್ಲಿ ನಗುವನ್ನು ಮೂಡಿಸುವಲ್ಲಿಯೂ ಕೂಡ ಸಹಾಯಕವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: