ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು (Milk Water Bath) ಎಲ್ಲರಿಗೂ ತಿಳಿದಿದೆ. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ಗಳಿಂದ್ದು, ಮೂಳೆಗಳನ್ನು ಆರೋಗ್ಯವಾಗಿಡುವುದರೊಂದಿಗೆ ಗಟ್ಟಿಯಾಗುವಂತೆ ಮಾಡುತ್ತದೆ. ಆದರೆ ಹಾಲು ಕೂಡ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅನೇಕ ಜನರು ಹಾಲನ್ನು ಮುಖ ಮತ್ತು ದೇಹದ ಮಾಯಿಶ್ಚರೈಸರ್ ಆಗಿ ಬಳಸುತ್ತಾರೆ. ಹಾಲು ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಪ್ರೋಟೀನ್ ಆರೋಗ್ಯಕರ ಕೊಬ್ಬು, ಲ್ಯಾಕ್ಟಿಕ್ ಆಮ್ಲ, ಕ್ಯಾಲ್ಸಿಯಂ, ವಿಟಮಿನ್ ಇ ಸಮೃದ್ಧವಾಗಿದೆ. ಇದು ನಿಮ್ಮ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಆದರೆ ನೀವು ಎಂದಾದರೂ ಸ್ನಾನದಲ್ಲಿ ಹಾಲನ್ನು ಬಳಸಿದ್ದೀರಾ? ಇಲ್ಲವೆಂದಾದರೆ ಈ ವಿಷಯಗಳ ಬಗ್ಗೆ ತಿಳಿದಿರಲೇಬೇಕು. ನೀರಿನಲ್ಲಿ ಹಾಲಿನ್ನು ಬೆರೆಸಿ ಸ್ನಾನ ಮಾಡುವುದರಿಂದಾಗುವ ಪ್ರಯೋಜನಗಳನ್ನು ತಿಳಿಯೋಣ.
ಇದನ್ನೂ ಓದಿ: Relationship: ಸಂಬಂಧಗಳಲ್ಲಿನ ಗೊಂದಲವನ್ನು ಸುಧಾರಿಸಲು 6 ಮಾರ್ಗಗಳು ಇಲ್ಲಿದೆ
ಒಣ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ:
ಒಣ ತ್ವಚೆಯ ಸಮಸ್ಯೆಯ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಪ್ರತಿದಿನ ಸ್ನಾನದ ನೀರಿನಲ್ಲಿ ಅರ್ಧ ಲೋಟ ಹಾಲನ್ನು ಬೆರೆಸಿ ಸ್ನಾನ ಮಾಡಬಹುದು. ಇದು ಯಾವಾಗಲೂ ತೇವವನ್ನು ಇಡುತ್ತದೆ. ಒಣ ತ್ವಚೆಯನ್ನು ಹೋಗಲಾಡಿಸುವ ಜೊತೆಗೆ ಮೃದುವಾದ ತ್ವಚೆಯನ್ನು ಒದಗಿಸುತ್ತದೆ.
ಹೊಳೆಯುವ ತ್ವಚೆ:
ಹಾಲಿನೊಂದಿಗೆ ನೀರು ಬೆರೆಸಿ ಸ್ನಾನ ಮಾಡುವುದರಿಂದ ಮುಖ ಮಾತ್ರವಲ್ಲದೇ ಇಡೀ ದೇಹ ಹೊಳೆಯುತ್ತದೆ. ಅಷ್ಟೇ ಅಲ್ಲ ಮೈಬಣ್ಣವನ್ನು ಸುಧಾರಿಸುತ್ತದೆ. ಇದು ಕಲೆಗಳನ್ನು ಸಹ ತೆಗೆದುಹಾಕುತ್ತದೆ. ಅದೇ ಸಮಯದಲ್ಲಿ ಇದು ಚರ್ಮ ಮತ್ತು ಟ್ಯಾನಿಂಗ್ನ್ನು ತೆಗೆದುಹಾಕುತ್ತದೆ.
ತ್ವಚೆಯ ಅಲರ್ಜಿಯನ್ನು ಹೋಗಲಾಡಿಸುತ್ತದೆ:
ನಿಮಗೆ ತ್ವಚೆಯ ಅಲರ್ಜಿಯ ಸಮಸ್ಯೆ ಇದ್ದರೆ, ನೀರು ಮತ್ತು ಹಾಲಿನ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಬಹುದು. ಹೀಗೆ ಮಾಡುವುದರಿಂದ ಅಲರ್ಜಿ, ತುರಿಕೆ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದು ಚರ್ಮವನ್ನು ಬಿಗಿಗೊಳಿಸುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಪ್ರತಿದಿನ ಹಾಲಿನ ನೀರಿನಿಂದ ಸ್ನಾನ ಮಾಡಿದರೆ ವಯಸ್ಸಾಗುವ ಲಕ್ಷಣಗಳು ಕಡಿಮೆಯಾಗುತ್ತವೆ.
ಮತ್ತಷ್ಟು ಲೈಫ್ಸ್ಟೈಲ್ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.