Morning Habits: ದಿನವಿಡಿ ನವ ಚೈತನ್ಯದೊಂದಿಗಿರಲು ಬೆಳಿಗ್ಗೆ ಎದ್ದ ಕೂಡಲೇ ಈ ಅಭ್ಯಾಸಗಳನ್ನು ಅನುಸರಿಸಿ
ಸಂತೋಷದಾಯಕ, ಶಕ್ತಿಯುತ ಮತ್ತು ಹುಮ್ಮಸ್ಸಿನಿಂದ ಕೂಡಿದ ದಿನಕ್ಕಾಗಿ ನೀವು ಅನುಸರಿಸಬಹುದಾದ ಕೆಲವು ಸಲಹೆಗಳು ಈ ಕೆಳಗಿನಂತಿವೆ.
ನೀವು ಬೆಳಿಗ್ಗೆ ಏನು ಮಾಡಿದರೂ ಅದು ನಿಮ್ಮ ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಬೆಳಗಿನ ದಿನಚರಿಯು ಸಂತೋಷ, ಶಕ್ತಿ ಮತ್ತು ಉತ್ತಮ ಚಟುವಟಿಕೆಗಳೊಂದಿಗೆ ಆರಂಭವಾಗಬೇಕು. ಬೆಳಿಗ್ಗೆ ಎದ್ದ ಕೂಡಲೇ ಬೇಜಾರು ಅಥವಾ ನಿಮಗೆ ಕಿರಿಕಿರಿ ಉಂಟುಮಾಡುವಂತಿದ್ದರೆ, ಇಡೀ ದಿನ ಹಾಳಾಗುತ್ತದೆ. ಹೀಗಾಗಿ ಬೆಳಗಿನ ಅಭ್ಯಾಸಗಳು ಆ ದಿನವನ್ನು ಉತ್ತಮವಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಂತೋಷದಾಯಕ, ಶಕ್ತಿಯುತ ಮತ್ತು ಹುಮ್ಮಸ್ಸಿನಿಂದ ಕೂಡಿದ ದಿನಕ್ಕಾಗಿ ನೀವು ಅನುಸರಿಸಬಹುದಾದ ಕೆಲವು ಸಲಹೆಗಳು ಈ ಕೆಳಗಿನಂತಿವೆ.
ಉತ್ತಮ ದಿನಚರಿಗಾಗಿ ಕೆಲವು ಸಲಹೆಗಳು
ವಾಕಿಂಗ್ ಹೋಗಿ ಎಚ್ಚರವಾದ ನಂತರ, ಸ್ವಲ್ಪ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದರೆ ಸೂರ್ಯೋದಯವನ್ನು ನೋಡಿ. ಸೂರ್ಯನ ನೈಸರ್ಗಿಕ ಬೆಳಕು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಮಗೆ ಹೊಸ ಚೈತನ್ಯ ತುಂಬುತ್ತದೆ. ಅಲ್ಲದೆ ಮಾನಸಿಕ ಆರೋಗ್ಯಕ್ಕೂ ಸೂರ್ಯನ ಬೆಳಕು ಉತ್ತಮವಾಗಿದೆ.
ಹಣ್ಣುಗಳನ್ನು ಸೇವೆಸಿ ಹಣ್ಣುಗಳು ಅತ್ಯಂತ ಆರೋಗ್ಯಕರವಾದವು. ಬೆಳಗಿನ ಉಪಾಹಾರಕ್ಕಾಗಿ ನೀವು ಹಣ್ಣುಗಳನ್ನು ಸೇವಿಸಬಹುದು. ಇದು ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಅಲ್ಲದೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಶಕ್ತಿಯುತವಾದ ದಿನಕ್ಕೆ ಅಗತ್ಯವಾದ ಎಲ್ಲಾ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಹಣ್ಣುಗಳು ಒದಗಿಸುತ್ತವೆ.
ತಂಪಾದ ನೀರಿನಲ್ಲಿ ಸ್ನಾನ ಮಾಡಿ ಅನೇಕ ಬಾರಿ ನಾವು ಸ್ನಾನ ಮಾಡಲು ಸೋಮಾರಿತನ ಮಾಡುತ್ತೇವೆ. ಆದರೆ ಕೆಲಸಕ್ಕೆ ಹೋಗುವ ಮೊದಲು ಸ್ನಾನ ಮಾಡಿದರೆ ನವ ಉತ್ಸಾಹ ದೊರೆಯುತ್ತದೆ. ಅದರಲ್ಲೂ ಬೆಳಿಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡುವುದು ಹೆಚ್ಚು ಸೂಕ್ತ. ಇದು ದಿನದ ಮಧ್ಯದಲ್ಲಿನ ನಿದ್ರೆಯನ್ನು ತಪ್ಪಿಸುತ್ತದೆ.
ಉತ್ತಮ ಉಪಹಾರ ಸೇವಿಸಿ ಬೆಳಿಗ್ಗೆ ಸೇವಿಸುವ ಆಹಾರವು ಆರೋಗ್ಯಕರ ಅಂಶಗಳಿಂದ ತುಂಬಿರಬೇಕು. ನಿಮ್ಮ ದೇಹಕ್ಕೆ ಇಡೀ ದಿನ ಆರೋಗ್ಯಕರ ಆಹಾರದ ಅಗತ್ಯವಿದೆ. ಅದರಲ್ಲೂ ಬೆಳಿಗ್ಗೆ ಉಪಹಾರ ಸೇವಿಸುವುದು ಮುಖ್ಯ. ಬೆಳಿಗ್ಗೆ ತಿಂಡಿ ತಿನ್ನುವುದನ್ನು ಕೆಲವರು ನಿರಾಕರಿಸುತ್ತಾರೆ. ಆದರೆ ನೆನಪಿಡಿ ಬೆಳಿಗ್ಗೆ ಉಪಹಾರ ಸೇವಿಸಲೇಬೇಕು.
ಒಂದು ಕಪ್ ಚಹಾ ಕುಡಿಯಿರಿ ನಿಮ್ಮ ದಿನವನ್ನು ಒಂದು ಕಪ್ ಚಹಾದೊಂದಿಗೆ ಆರಂಭಿಸುವುದರಿಂದ ಹೆಚ್ಚು ಉತ್ಸಾಹ ದೊರಕಿದಂತಾಗುತ್ತದೆ. ಗ್ರೀನ್ ಟೀ ಅಥವಾ ನಿಮ್ಮ ಯಾವುದೇ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಚಹಾವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ನಿಮ್ಮನ್ನು ಸಾಮಾನ್ಯ ರೋಗಗಳಿಂದ ರಕ್ಷಿಸುತ್ತದೆ ಮತ್ತು ನಿಮಗೆ ಶಕ್ತಿಯನ್ನು ನೀಡುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ನಿಮಗೆ ದಿನವಿಡೀ ಆರಾಮವಾಗಿರಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Mushrooms: ಅಣಬೆ ಸೇವನೆ ನಮ್ಮ ದೇಹದ ಆರೋಗ್ಯಕ್ಕೆ ಎಷ್ಟು ಮುಖ್ಯ?
Blood Pressure: ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರು ಆಹಾರ ಕ್ರಮದ ಬಗ್ಗೆ ಕಾಳಜಿ ವಹಿಸಿ