ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಗಮನ ಸೆಳೆದ ಇಡ್ಲಿ, ನಾಟಿಕೋಳಿ ಸಾರು
ಇಂದು ಸಿಎಂ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ನಿವಾಸದಲ್ಲಿ ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಭಾಗಿಯಾಗಿ ತಮ್ಮ ಇಷ್ಟದ ನಾಟಿ ಕೋಳಿ ಸಾರು ಮತ್ತು ಇಡ್ಲಿ ಸವಿದರು. ನಮ್ಮ ಕರ್ನಾಟಕದ ಈ ಸ್ಪೆಷಲ್ ನಾಟಿ ಕೋಳಿ ಸಾರಿನ ವಿಶೇಷತೆಯ ಬಗ್ಗೆ ತಿಳಿಯೋಣ ಬನ್ನಿ.

ರಾಜ್ಯ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಪಾಲಿಟಿಕ್ಸ್ ಜೋರಾಗುತ್ತಿದ್ದಂತೆ ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳು ಸಹ ಬಹಳ ಜೋರಾಗಿಯೇ ನಡೆಯುತ್ತಿವೆ. ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆದಿತ್ತು. ಇಂದು ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಪವರ್ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆದಿದ್ದು, ಈ ಉಪಹಾರ ಕೂಟದಲ್ಲಿ ಭಾಗಿಯಾದ ಸಿದ್ದರಾಮಯ್ಯ ನಾಟಿ ಕೋಳಿ ಸಾರು (Nati chicken curry), ಇಡ್ಲಿ ಸವಿದರು. ನಮ್ಮ ಕರ್ನಾಟಕದ ಈ ನಾಟಿ ಕೋಳಿ ಸಾರಿನ ವಿಶೇಷತೆಗಳ ಬಗ್ಗೆ ತಿಳಿಯೋಣ.
ನಾಟಿಕೋಳಿ ಸಾರಿನ ವಿಶೇಷತೆಗಳೇನು?
ನಾಟಿಕೋಳಿ ಸಾರು ನಾನ್‌ವೆಜ್ ಪ್ರಿಯರ ಫೇವರೆಟ್ ರೆಸಿಪಿ. ಸಿಎಂ ಸಿದ್ದರಾಮಯ್ಯ ಅವರಿಗೂ ನಾಟಿಕೋಳಿ ಸಾರು ಎಂದ್ರೆ ಸಖತ್ ಇಷ್ಟವಂತೆ. ವಾಣಿಜ್ಯಿಕವಾಗಿ ಬೆಳೆಯುವ ಬ್ರಾಯ್ಲರ್ ಕೋಳಿಗೆ ಹೋಲಿಸಿದರೆ ನಾಟಿ ಕೋಳಿ ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ.
ಈ ನಾಟಿ ಕೋಳಿಗಳನ್ನು ವಿಶೇಷವಾಗಿ ಹಳ್ಳಿಕಡೆಗಳಲ್ಲಿಯೇ ಸಾಕಾಣೆ ಮಾಡಲಾಗುತ್ತದೆ. ನೈಸರ್ಗಿಕ ವಿಧಾನಗಳ ಮೂಲಕವೇ ಸಾಕಾಣೆ ಮಾಡಲಾಗುವ ಕಾರಣ ಅವು ಅಲ್ಲಿ ಅಕ್ಕಿ, ಗೋಧಿ, ಹುಲ್ಲು, ಕೀಟಗಳನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಈ ನಾಟಿಕೋಳಿಗಳು ಸಖತ್ ರುಚಿಕರವಾಗಿರುವುದು ಮಾತ್ರವಲ್ಲದೆ ಅಧಿಕ ಪ್ರೋಟಿನ್, ಕಡಿಮೆ ಕೊಬ್ಬು ಹೊಂದಿದ ಶಕ್ತಿವರ್ಧಕ ಆಹಾರವೂ ಹೌದು. ಬ್ರಾಯ್ಲರ್‌ಗಿಂತ ತಿನ್ನಲು ಈ ಕೋಳಿಗಳೇ ಉತ್ತಮ ಎಂದು ಹೇಳುತ್ತಾರೆ. ನಮ್ಮ ಕರ್ನಾಟಕದಲ್ಲಿ ಈ ನಾಟಿಕೋಳಿ ಸಾರು ಸಖತ್ ಫೇಮಸ್. ಇಡ್ಲಿ, ಮುದ್ದೆಗೆ ನಾಟಿ ಕೋಳಿ ಸಾರು ಸೂಪರ್ ಕಾಂಬಿನೇಷನ್. ಈ ಅದ್ಭುತ ಸಾರಿನ ಟೇಸ್ಟ್ ತಿಂದವರಿಗಷ್ಟೇ ಗೊತ್ತು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:58 pm, Tue, 2 December 25




