AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Carrot Cake Day: ಮನೆಯಲ್ಲಿಯೇ ರುಚಿಕರ ಹಾಗೂ ಆರೋಗ್ಯಕರ ಕ್ಯಾರೆಟ್ ಕೇಕ್ ತಯಾರಿಸಿ, ಪಾಕ ವಿಧಾನ ಇಲ್ಲಿದೆ

ಪ್ರತಿ ವರ್ಷ ಫೆಬ್ರವರಿ 3 ರಂದು ರಾಷ್ಟ್ರೀಯ ಕ್ಯಾರೆಟ್ ಕೇಕ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಅಮೇರಿಕಾದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದ್ದರಿಂದ ಈ ವಿಶೇಷ ದಿನದಂದು ಮನೆಯಲ್ಲಿಯೇ ಆರೋಗ್ಯಕರ ಕ್ಯಾರೆಟ್​​ ಕೇಕ್​ ಮಾಡಿ ಸವಿಯಿರಿ.

National Carrot Cake Day: ಮನೆಯಲ್ಲಿಯೇ ರುಚಿಕರ ಹಾಗೂ ಆರೋಗ್ಯಕರ ಕ್ಯಾರೆಟ್ ಕೇಕ್ ತಯಾರಿಸಿ, ಪಾಕ ವಿಧಾನ ಇಲ್ಲಿದೆ
ರಾಷ್ಟ್ರೀಯ ಕ್ಯಾರೆಟ್ ಕೇಕ್ ದಿನ
ಅಕ್ಷತಾ ವರ್ಕಾಡಿ
|

Updated on:Feb 03, 2023 | 10:29 AM

Share

ಪ್ರತಿ ವರ್ಷ ಫೆಬ್ರವರಿ 3 ರಂದು ರಾಷ್ಟ್ರೀಯ ಕ್ಯಾರೆಟ್ ಕೇಕ್ ದಿನ(National Carrot Cake Day) ವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಅಮೇರಿಕಾದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಕ್ಯಾರೆಟ್​ನಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಆದ್ದರಿಂದ ಈ ವಿಶೇಷ ದಿನದಂದು ಮನೆಯಲ್ಲಿಯೇ ಆರೋಗ್ಯಕರ ಕ್ಯಾರೆಟ್​​ ಕೇಕ್​ ಮಾಡಿ ಸವಿಯಿರಿ. ಕ್ಯಾರೆಟ್​​ನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಜೊತೆಗೆ ಇದರಲ್ಲಿರುವ ಬೀಟಾ ಕೆರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಕಣ್ಣಿನ ದೃಷ್ಟಿ ದೋಷ ಸಮಸ್ಯೆಯಿಂದ ನಿಮ್ಮನ್ನು ದೂರವಿರಿಸುತ್ತದೆ.

ಕ್ಯಾರೆಟ್ ಕೇಕ್ ರೆಸಿಪಿ:

ಕ್ಯಾರೆಟ್ ಕೇಕ್​​ಗೆ ಬೇಕಾಗಿರುವ ಸಾಮಾಗ್ರಿಗಳು:

1 ಕಪ್​ ತುರಿದ ಕ್ಯಾರೆಟ್​ 2 ಚಮಚ ಕೋಕೋ ಪೌಡರ್ 1/2 ಕಪ್​ ಖರ್ಜೂರ 1 ಕಪ್ ಮೈದಾ ಹಿಟ್ಟು 1 ಕಪ್​​ ಪುಡಿ ಸಕ್ಕರೆ 1 ಚಮಚ​ ಬೇಕಿಂಗ್​ ಪೌಡರ್ 1 ಕಪ್​ ಚೋಕೋ ಚಿಪ್ಸ್ 2 ಚಮಚ ಡ್ರೈಫೂಟ್ಸ್​​​

ಇದನ್ನೂ ಓದಿ: ಗಂಜಿ ಊಟಕ್ಕೆ ಸೂಪರ್ ಕಾಂಬಿನೇಷನ್ ಕೇರಳ ಶೈಲಿಯ ನರಂಗ ಉಪ್ಪಿನಕಾಯಿ

ಕ್ಯಾರೆಟ್ ಕೇಕ್ ಮಾಡುವ ವಿಧಾನ:

ಹಂತ 1:

ಮೊದಲಿಗೆ ಒಂದು ಪ್ಯಾನ್​​ನಲ್ಲಿ ಮೈದಾ ಹಿಟ್ಟು, ನೀರು, ಬೆಣ್ಣೆ, ಬೇಕಿಂಗ್ ಪೌಡರ್​, ಕೋಕೋ ಪೌಡರ್​ ಹಾಗೂ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇನ್ನೊಂದು ಪಾತ್ರೆಯಲ್ಲಿ ಡ್ರೈಫೂಟ್ಸ್ ತುರಿದ ಕ್ಯಾರೆಟ್​, ಸಕ್ಕರೆ ಪುಡಿ ಬೆಣ್ಣೆ, ಖರ್ಜೂರ, ಚಾಕೋ ಚಿಪ್ಸ್​ ಹಾಗೂ ಚಾಕೋಲೇಟ್ ಚಿಪ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 2: 

ಈಗ ಒಂದು ಕೇಕ್​ ಟಿನ್​ ಅಥವಾ ಅಗಲವಾದ ಪಾತ್ರೆಯಲ್ಲಿ ಈ ಮೇಲಿನ ಎಲ್ಲ ಮಿಶ್ರಣವನ್ನು ಸುರಿಯಿರಿ. ​ಕೇಕ್​​ ಟಿನ್​​ಗೆ ಮಿಶ್ರಣವನ್ನು ಹಾಕುವ ಮುನ್ನ ಸ್ವಲ್ಪ ಎಣ್ಣೆಯನ್ನು ಸವರಿಕೊಳ್ಳಿ. ನಂತರ ಒವೆನ್​ನಲ್ಲಿ 20 ನಿಮಿಷ ಬೇಕ್​ ಮಾಡಿ. ಈಗ ರುಚಿಯಾದ ಕ್ಯಾರೆಟ್​​ ಕೇಕ್​​​ ಸಿದ್ಧವಾಗಿದೆ. ಹೆಚ್ಚಿನ ರುಚಿಗಾಗಿ ನೀವು ಇದರ ಮೇಲೆ ಚಾಕೋ ಚಿಪ್​ ಹಾಗೂ ಡ್ರೈ ಫೂಟ್ಸ್​​​​ಗಳಿಂದ ಅಲಂಕರಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:29 am, Fri, 3 February 23

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ