National Drink Wine Day: ಮನೆಯಲ್ಲಿ ಸುಲಭವಾಗಿ ಮಾಡುಬಹುದು ವೈನ್, ಇಲ್ಲಿದೆ ರೆಸಿಪಿ ಟಿಪ್ಸ್

| Updated By: ಅಕ್ಷತಾ ವರ್ಕಾಡಿ

Updated on: Feb 18, 2023 | 11:02 AM

ರಾಷ್ಟ್ರೀಯ ವೈನ್ ದಿನವನ್ನು ಪ್ರತಿ ವರ್ಷ ಫೆಬ್ರವರಿ 18 ರಂದು ಆಚರಿಸಲಾಗುತ್ತದೆ. ಆದ್ದರಿಂದ ಈ ದಿನವನ್ನು ನೀವು ಆಚರಿಸಲು ಮನೆಯಲ್ಲಿಯೇ ಆರೋಗ್ಯಕರ ವೈನ್​​ ತಯಾರಿಸಿ.

National Drink Wine Day: ಮನೆಯಲ್ಲಿ ಸುಲಭವಾಗಿ ಮಾಡುಬಹುದು  ವೈನ್, ಇಲ್ಲಿದೆ ರೆಸಿಪಿ ಟಿಪ್ಸ್
ರಾಷ್ಟ್ರೀಯ ವೈನ್ ದಿನ
Image Credit source: Forbes
Follow us on

ರಾಷ್ಟ್ರೀಯ ವೈನ್ ದಿನ (National Drink Wine Day) ವನ್ನು ಪ್ರತಿ ವರ್ಷ ಫೆಬ್ರವರಿ 18 ರಂದು ಆಚರಿಸಲಾಗುತ್ತದೆ. ಆದ್ದರಿಂದ ಈ ದಿನವನ್ನು ನೀವು ಆಚರಿಸಲು ಮನೆಯಲ್ಲಿಯೇ ಆರೋಗ್ಯಕರ ವೈನ್​​ ತಯಾರಿಸಿ. ಮನೆಯಲ್ಲಿಯೇ ಸುಲಭವಾಗಿ ವೈನ್​​​ ತಯಾರಿಸಲು ತಯಾರಿಸುವ ವಿಧಾನ ಇಲ್ಲಿದೆ. ಸುಲಭವಾಗಿ ಮನೆಯಲ್ಲಿ ದ್ರಾಕ್ಷಿ ಹಣ್ಣು ಬಳಸಿ  ವೈನ್​​ ತಯಾರಿಸಿ. ಇದನ್ನು ರೆಡ್​​​ ವೈನ್​​ ಎಂದು ಕೂಡ ಕರೆಯುತ್ತಾರೆ. ಅತ್ಯಂತ ಸುಲಭವಾಗಿ ವೈನ್​​ ತಯಾರಿಸುವ ವಿಧಾನವನ್ನು ಆಧ್ಯ ಕಲರ್​​​ ಫುಲ್​​ ಯೂಟ್ಯೂಬ್​​ ಚಾನೆಲ್​​ನಲ್ಲಿ ತಿಳಿಸಿದ್ದಾರೆ.

ರೆಡ್​ ವೈನ್​ ಮಾಡಲು ಬೇಕಾಗುವ ಪದಾರ್ಥಗಳು:

1 ಕಪ್​​​ ಸಕ್ಕರೆ
ಅರ್ಧ ಕಿಲೋ ಕಪ್ಪು ದ್ರಾಕ್ಷಿ
1/2 ಲೀ ನೀರು

ರೆಡ್​ ವೈನ್ ಮಾಡುವ ವಿಧಾನ:

ಮೊದಲು ಒಂದು ಪಾತ್ರೆಯಲ್ಲಿ ನೀರು ಇಟ್ಟು ಬಿಸಿ ಮಾಡಿ. ನಂತರ ಸ್ವಲ್ಪ ಉಪ್ಪು ಹಾಕಿ. ನೀರು ಉಗುರು ಬೆಚ್ಚಗಿದ್ದರೆ ಸಾಕು. ನೀರು ಬಿಸಿಯಾಗುತ್ತಿದ್ದಂತೆ ಅದಕ್ಕೆ ದ್ರಾಕ್ಷಿಯನ್ನು ಹಾಕಿ. ಯಾಕೆಂದರೆ ದ್ರಾಕ್ಷಿ ಬೆಳೆಸುವ ಸಮಯದಲ್ಲಿ ಕೆಮಿಕಲ್​​ ಬಳಸಲಾಗುತ್ತದೆ. ಆದ್ದರಿಂದ ಬಿಸಿ ನೀರಿನಲ್ಲಿ ಹಾಕಿ ದ್ರಾಕ್ಷಿಯನ್ನು ಚೆನ್ನಾಗಿ ತೊಳೆಯಿರಿ. ಅರ್ಧ ಗಂಟೆಗಳಷ್ಟು ದ್ರಾಕ್ಷಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಿ.

ಇದನ್ನೂ ಓದಿ: ಚಹಾ ಪಾನೀಯ ಮಾತ್ರವಲ್ಲ ಒಂದು ಭಾವನೆ; ಟೀ ಕುಡಿದ ನಂತರ ದೇಹದಲ್ಲಾಗುವ ಬದಲಾವಣೆ ಇಲ್ಲಿದೆ

ಈಗ ಒಂದು ಚಿಕ್ಕ ಬೌಲ್​​ನಲ್ಲಿ ತಣ್ಣೀರು ತೆಗೆದುಕೊಳ್ಳಿ. ನಂತರ ಈಗಾಗಲೇ ಬಿಸಿನೀರಿನಲ್ಲಿ ಹಾಕಿಟ್ಟ ದ್ರಾಕ್ಷಿಗಳನ್ನು ತಣ್ಣೀರಿನಲ್ಲಿ ಹಾಕಿ. ನಂತರ ಸ್ವಲ್ಪ ಹೊತ್ತಿನ ನಂತರ ಚೆನ್ನಾಗಿ ಸೋಸಿ ದ್ರಾಕ್ಷಿಗಳನ್ನು ಒಂದು ಪ್ಲೇಟ್​​ನಲ್ಲಿ ತೆಗೆದಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಯನ್ನು ಒಲೆಯಲ್ಲಿಡಿ, ಅದಕ್ಕೆ 1/2 ಲೀಟರ್​​ ನೀರು ಹಾಕಿ. ನೀರು ಕುದಿ ಬರುತ್ತಿದ್ದಂತೆ ಅದಕ್ಕೆ ಈಗಾಗಲೇ ತೊಳೆದಿಟ್ಟ ದ್ರಾಕ್ಷಿಗಳನ್ನು ಹಾಕಿ. ಇದನ್ನು ಕಡಿಮೆ ಉರಿಯಲ್ಲಿ 20 ನಿಮಿಷಗಳ ಕಾಲ ಕುದಿಸಿ. 20 ನಿಮಿಷಗಳ ನಂತರ ಅದಕ್ಕೆ ಒಂದು ಕಪ್​​ ಸಕ್ಕರೆ ಹಾಕಿ. ನಿಮ್ಮ ರುಚಿಗೆ ತಕ್ಕಂತೆ ಹಾಕಿ. ನಂತರ ಇದನ್ನು ಒಂದರಿಂದ ಎರಡು ದಿನಗಳ ವರೆಗೆ ಸಂಗ್ರಹಿಸಿಡಿ. ಎರಡು ದಿನಗಳ ನಂತರ ಇದರಲ್ಲಿರುವ ದ್ರಾಕ್ಷಿಗಳನ್ನು ಚೆನ್ನಾಗಿ ಹಿಸುಕಿ. ಇವಾಗ ಇದನ್ನು ಚೆನ್ನಾಗಿ ಸೋಸಿಕೊಳ್ಳಿ. ಇವಾಗ ರೆಡ್​​ ವೈನ್​​ ಸಿದ್ಧವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 11:01 am, Sat, 18 February 23