ನೋವು ದೇಹದ ಬಹುತೇಕ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ದೇಹದ ಯಾವುದೇ ಭಾಗದಲ್ಲಿ ನೋವು ಉಂಟಾದಾಗ, ನೋವು ನಿವಾರಿಸಲು ಅನೇಕರು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ನೋವು ನಿವಾರಕಗಳು ನೋವು ನಿವಾರಿಸುವ ಜತೆಗೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಮನೆಯ ಅಡುಗೆಮನೆಯಲ್ಲಿ ನೈಸರ್ಗಿಕ ನೋವು ನಿವಾರಕಗಳಿವೆ ಎಂದು ತಿಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಪಡುತ್ತೀರಿ. ದೇಹದಲ್ಲಿ ನೋವು ಕಾಣಿಸಿಕೊಂಡಾಗ ಅದನ್ನು ನಿವಾರಿಸಲು ಇವುಗಳನ್ನು ಬಳಸಬಹುದಾಗಿದೆ.
ಇದನ್ನೂ ಓದಿ: ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಈ ಆಹಾರಗಳಿಂದ ದೂರವಿರಿ
ಅರಿಶಿನ:
ಈ ಗೋಲ್ಡನ್ ಮಸಾಲೆ ಪ್ರತಿ ಅಡುಗೆಮನೆಯಲ್ಲಿಯೂ ಇರುತ್ತದೆ. ಇದರ ಉರಿಯೂತದ ಗುಣಲಕ್ಷಣಗಳು ದೇಹದ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ. ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುವುದರಿಂದ ದೇಹದಲ್ಲಿನ ಹಲವಾರು ರೋಗಗಳು ನಿವಾರಣೆಯಾಗುತ್ತವೆ. ಅಲ್ಲದೆ ಬಾಯಿಯಲ್ಲಿ ಗುಳ್ಳೆಗಳಿದ್ದರೆ ಅರಿಶಿನದ ಪೇಸ್ಟ್ ಮತ್ತು ಕೊಬ್ಬರಿ ಎಣ್ಣೆ ಬೆರೆಸಿ ಬಾಯಲ್ಲಿ ಹಚ್ಚಿದರೆ ಪರಿಹಾರ ಸಿಗುತ್ತದೆ. ಇದು ನಂಜುನಿರೋಧಕ ಮತ್ತು ಪ್ರತಿಜೀವಕ ಗುಣಗಳನ್ನು ಹೊಂದಿದ್ದು, ಇದರ ಪೇಸ್ಟ್ನ್ನು ಗಾಯದ ಮೇಲೆ ಹಚ್ಚುವುದರಿಂದ ನೋವು ನಿವಾರಣೆಯಾಗುವುದಲ್ಲದೆ ಗಾಯವು ಬೇಗ ವಾಸಿಯಾಗುತ್ತದೆ.
ಲವಂಗ:
ಶಿಲೀಂಧ್ರಗಳ ಸೋಂಕಿನಿಂದ ಬಳಲುತ್ತಿದ್ದರೆ, ಲವಂಗವನ್ನು ಬಾಯಿಯಲ್ಲಿ ಅಗಿಯುವುದು ಅಥವಾ ಇಟ್ಟುಕೊಳ್ಳುವುದು ಸೋಂಕಿನ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಲವಂಗ ಎಣ್ಣೆಯನ್ನು ಬಳಸುವುದು ತುಂಬಾ ಪರಿಣಾಮಕಾರಿ. ಲವಂಗ ಎಣ್ಣೆಯಲ್ಲಿನ ಸಕ್ರಿಯ ಘಟಕಾಂಶವಾದ ಯುಜೆನಾಲ್ ನೈಸರ್ಗಿಕ ರಕ್ತ ತೆಳುವಾಗಿಸುತ್ತದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಮೂಲಕ ಹೃದ್ರೋಗವನ್ನು ತಡೆಯುತ್ತದೆ.
ಶುಂಠಿ:
ಶುಂಠಿ ಕೀಲು ನೋವು ಮತ್ತು ಸ್ನಾಯು ನೋವಿಗೆ ಉತ್ತಮ ಪರಿಹಾರವಾಗಿ ಕೆಲಸ ಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಶುಂಠಿಯಲ್ಲಿರುವ ಫೈಟೊಕೆಮಿಕಲ್ಸ್ ನೋವನ್ನು ಉಂಟುಮಾಡುವ ಹಾರ್ಮೋನುಗಳ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಇದು ವಾಕರಿಕೆ ಮತ್ತು ಬೆಳಗಿನ ಬೇನೆಗೆ ಶಕ್ತಿಯುತವಾದ ಮನೆಮದ್ದಾಗಿದೆ. ಶುಂಠಿಯನ್ನು ಸೇರಿಸುವುದರಿಂದ ಆಹಾರವು ರುಚಿಕರವಾಗಿರುತ್ತದೆ. ಶುಂಠಿ ಚಹಾವು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ತುಳಸಿ:
ಇದು ಔಷಧೀಯ ಮೂಲಿಕೆಯಾಗಿದ್ದು, ಆಯುರ್ವೇದ ಔಷಧಗಳನ್ನು ತಯಾರಿಸಲು ಬಳಸಲಾಗುತ್ತದೆ. ತುಳಸಿಯಲ್ಲಿ ಉರಿಯೂತ ನಿವಾರಕ ಗುಣ, ಆ್ಯಂಟಿಆಕ್ಸಿಡೆಂಟ್ ಅಂಶ, ನೋವು ನಿವಾರಕ ಗುಣವಿದೆ. ತುಳಸಿಯು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನ್‌ಗಳ ಉತ್ಪಾದನೆಯನ್ನು ನಿಯಂತ್ರಿಸುತ್ತದೆ.
ಬೆಳ್ಳುಳ್ಳಿ:
ಬೆಳ್ಳುಳ್ಳಿ ಯಾವ ಔಷಧಿಗೂ ಕಡಿಮೆ ಇಲ್ಲ. ಬೆಳ್ಳುಳ್ಳಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕೊಲೆಸ್ಟ್ರಾಲ್ ಮಟ್ಟವನ್ನು ಶೇಕಡಾ 10 ರಿಂದ 15 ರಷ್ಟು ಕಡಿಮೆ ಮಾಡಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ನೀವು ಅದರ ತಾಜಾ ರೂಪದಲ್ಲಿ ಬೆಳ್ಳುಳ್ಳಿಯ ಹೆಚ್ಚುವರಿ ಪ್ರಮಾಣವನ್ನು ಸೇವಿಸಿದರೆ, ಅದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಆ್ಯಂಟಿಬಯೋಟಿಕ್ ಗುಣವೂ ಇದೆ. ಇದು ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಂತಹ ಕಾಯಿಲೆಗಳನ್ನು ಸಹ ತಡೆಯುತ್ತದೆ.