ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಈ ಆಹಾರಗಳಿಂದ ದೂರವಿರಿ

ನೀವು ಮಧುಮೇಹದಿಂದ ಬಳಲುತ್ತಿರುವವರಾಗಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಳವಾದರೆ ಅದು ಕಣ್ಣುಗಳು ಹಾಗೂ ಮೂತ್ರಪಿಂಡ ಸೇರಿದಂತೆ ಇತರೆ ಅಂಗಗಳಿಗೆ ಹಾನಿಯುಂಟು ಮಾಡುತ್ತದೆ.

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಈ ಆಹಾರಗಳಿಂದ ದೂರವಿರಿ
Diabetes
Follow us
TV9 Web
| Updated By: ನಯನಾ ರಾಜೀವ್

Updated on: Jul 17, 2022 | 3:32 PM

ನೀವು ಮಧುಮೇಹದಿಂದ ಬಳಲುತ್ತಿರುವವರಾಗಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಳವಾದರೆ ಅದು ಕಣ್ಣುಗಳು ಹಾಗೂ ಮೂತ್ರಪಿಂಡ ಸೇರಿದಂತೆ ಇತರೆ ಅಂಗಗಳಿಗೆ ಹಾನಿಯುಂಟು ಮಾಡುತ್ತದೆ.ಹೀಗಾಗಿ ಎಲ್ಲಾ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದು ಮುಖ್ಯ.

ಹಾಗಾಗಿ ನೀವು ಬಯಸಿದ ಎಲ್ಲವನ್ನೂ ನೀವು ತಿನ್ನಲು ಸಾಧ್ಯವಿಲ್ಲ ಏಕೆಂದರೆ ಅದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ, ನೀವು ಯಾವ ಆಹಾರವನ್ನು ಸೇವಿಸುತ್ತೀರಿ ಮತ್ತು ಏನು ತಿನ್ನಬಾರದು ಎಂಬುದನ್ನು ಪರಿಶೀಲಿಸುವುದು ಮುಖ್ಯ. ಈ ಆಹಾರಗಳಿಂದ ದೂರವಿರಿ

ಚಿಪ್ಸ್: ಚಿಪ್ಸ್​ನಲ್ಲಿ ಹೆಚ್ಚಿನ ಪ್ರಮಾಣದ ಎಣ್ಣೆ ಹಾಗೂ ಉಪ್ಪು ಇರುತ್ತದೆ. ಇದರಲ್ಲಿ ಪ್ರೋಟಿನ್ ಹಾಗೂ ಫೈಬರ್​ಗಳು ಕಡಿಮೆ ಇರುತ್ತವೆ ಇವುಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ ನೀವು ಆಲೂಗಡ್ಡೆಗಳಿಗಿಂತ ಇತರೆ ಬೇರೆ ತರಕಾರಿಗಳಿಂದ ಸಿದ್ಧಪಡಿಸಿರುವ ಚಿಪ್ಸ್​ ಅನ್ನು ಆಯ್ಕೆಮಾಡಿಕೊಳ್ಳಬಹುದು, ಕೆಲವು ತರಕಾರಿಗಳನ್ನು ಹುರಿದು ನಂತರ ಬೇಯಿಸಲಾಗುತ್ತದೆ. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟಿನ್​ಗಳಿರುತ್ತವೆ.

ಸಿಹಿ ಪಾನೀಯಗಳು: ಸಿಹಿ ಪಾನೀಯಗಳನ್ನು ಕುಡಿಯುವುದನ್ನು ಕಡಿಮೆ ಮಾಡಿ. ಇವುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ.

ಇವುಗಳನ್ನು ಸೇವಿಸಿ

ಅಲೋವೆರಾ ಅಲೋವೆರಾದಲ್ಲಿರುವ ಸಂಯುಕ್ತಗಳಾದ ಹೈಡ್ರೋಫಿಲಿಕ್ ಫೈಬರ್, ಗ್ಲುಕೋಮನ್ನನ್ ಮತ್ತು ಫೈಟೊಸ್ಟೆರಾಲ್‌ಗಳು ರಕ್ತದ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಈ ರೀತಿಯಾಗಿ ಇದು ಸಕ್ಕರೆ ರೋಗಿಗಳಿಗೆ ಪ್ರಯೋಜನಕಾರಿ. ಇದರ ಜ್ಯೂಸ್ ಅನ್ನು ಪ್ರತಿದಿನ ಸೇವಿಸುವುದು ಉತ್ತಮ.

ಇನ್ಸುಲಿನ್ ಸಸ್ಯ: ಈ ಸಸ್ಯವು ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಇನ್ಸುಲಿನ್ ಎಲೆಗಳ ಹುಳಿ ರುಚಿ ಸೇವಿಸಲು ರುಚಿಕರವಾಗಿರುತ್ತದೆ ಮತ್ತು ಇದರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಎಲೆಗಳನ್ನು ಹಾಗೆ ಸೇವಿಸಬಹುದು.

ಸ್ಟೀವಿಯಾ: ಚಹಾ, ಶರಬತ್ತು ಮತ್ತು ಇತರ ಸಿಹಿಕಾರಕಗಳಲ್ಲಿ ಸಕ್ಕರೆಯ ಬದಲು ಸ್ಟೀವಿಯಾ ಪುಡಿಯನ್ನು ಬಳಸಲಾಗುತ್ತದೆ. ಇದು ಸಿಹಿ ರುಚಿ ಇದ್ದರೂ, ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವುದಿಲ್ಲ. ಹಾಗಾಗಿ ಇದನ್ನು ಮಧುಮೇಹಿಗಳು ಸೇವಿಸಬಹುದು.