AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alcohol: 40 ವರ್ಷ ಮೇಲ್ಪಟ್ಟವರು ಯಾವ ಪ್ರಮಾಣದಲ್ಲಿ ಮದ್ಯಪಾನ ಮಾಡಬಹುದು?

ಹೆಂಡ ಯಾರ ಸ್ನೇಹಿತನೂ ಅಲ್ಲ, ಖುಷಿ, ದುಃಖದಲ್ಲಿ ಮದ್ಯದೆದುರು ಕೂರುವ ಮುನ್ನ ನೂರು ಬಾರಿ ಆಲೋಚಿಸಿ. ಮದ್ಯವನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯುವುದು ಕೆಲವು ಸಂದರ್ಭದಲ್ಲಿ ಆರೋಗ್ಯಕರವಾಗಬಹುದು, ಆದರೆ ಅತಿಯಾದರೆ ಅಮೃತವೂ ವಿಷ, ಇನ್ನು ವಿಷವನ್ನೇ ಹೆಚ್ಚು ಬಾರಿ ಕುಡಿದರೆ ಆರೋಗ್ಯ ಕೆಡದೀತೆ?.

Alcohol: 40 ವರ್ಷ ಮೇಲ್ಪಟ್ಟವರು ಯಾವ ಪ್ರಮಾಣದಲ್ಲಿ ಮದ್ಯಪಾನ ಮಾಡಬಹುದು?
Alcohol
TV9 Web
| Updated By: ನಯನಾ ರಾಜೀವ್|

Updated on:Jul 17, 2022 | 12:58 PM

Share

ಹೆಂಡ ಯಾರ ಸ್ನೇಹಿತನೂ ಅಲ್ಲ, ಖುಷಿ, ದುಃಖದಲ್ಲಿ ಮದ್ಯದೆದುರು ಕೂರುವ ಮುನ್ನ ನೂರು ಬಾರಿ ಆಲೋಚಿಸಿ. ಮದ್ಯವನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯುವುದು ಕೆಲವು ಸಂದರ್ಭದಲ್ಲಿ ಆರೋಗ್ಯಕರವಾಗಬಹುದು, ಆದರೆ ಅತಿಯಾದರೆ ಅಮೃತವೂ ವಿಷ, ಇನ್ನು ವಿಷವನ್ನೇ ಹೆಚ್ಚು ಬಾರಿ ಕುಡಿದರೆ ಆರೋಗ್ಯ ಕೆಡದೀತೆ?.

ಹಾಗೆಯೇ 40 ವರ್ಷ ಮೇಲ್ಪಟ್ಟವರು ಯಾವ ಪ್ರಮಾಣದಲ್ಲಿ ಮದ್ಯಪಾನ ಮಾಡಬಹುದು ಎಂಬುದರ ಕುರಿತು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಮದ್ಯಪಾನ ಮಾಡುವುದು ಮಧುಮೇಹ, ಪಾರ್ಶ್ವವಾಯು ಹಾಗೂ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಆದರೆ 2018ರಲ್ಲಿ ಬಿಡುಗಡೆಯಾದ ಅಧ್ಯಯನದಲ್ಲಿ ಕುಡಿತವು ಯಾವ ಪ್ರಮಾಣದಲ್ಲಾದರೂ ಇರಲಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿತ್ತು. ಆದಾಗ್ಯೂ, ಮಧ್ಯವಯಸ್ಕರು ದಿನಕ್ಕೆ ಎರಡು ಬಾರಿ ಮದ್ಯಪಾನ ಮಾಡುವುದು ಸುರಕ್ಷಿತ ಎಂದು ಲ್ಯಾನ್ಸೆಟ್ ವರದಿ ಹೇಳುತ್ತದೆ.

ವಯಸ್ಸಾದ ಬಳಿಕ ಸುರಕ್ಷಿತ ಕುಡಿಯುವ ಅಭ್ಯಾಸವನ್ನು ಹೊಂದಬೇಕಾಗುತ್ತದೆ 70ರ ಬಳಿಕ ಮೂರು ಸಣ್ಣ ಗ್ಲಾಸ್ ವೈನ್ ಅಥವಾ ಪಿಂಟ್ ಬಿಯರ್ ಆರೋಗ್ಯಕ್ಕೆ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಮಧ್ಯ ವಯಸ್ಕರು ದಿನಕ್ಕೆ ಎರಡು ಬಾರಿ ಮದ್ಯಪಾನ ಮಾಡಬಹುದು.

40 ವರ್ಷಕ್ಕಿಂತ ಕಡಿಮೆ ಇರುವ ಮಹಿಳೆಯರು ವಾರಕ್ಕೆ ಎರಡು ಬಾರಿಗಿಂತ ಹೆಚ್ಚು ಕುಡಿಯಬಾರದು ಮತ್ತು ಪುರುಷರು ಒಂದು ಬಾರಿ ಮಾತ್ರ ಕುಡಿಯಬೇಕು ಎಂದು ಅಧ್ಯಯನ ಹೇಳಿದೆ.

ಅಧ್ಯಯನ ಹೇಳುವ ಪ್ರಕಾರ, ವಾರದಲ್ಲಿ ಏಳು ಬಾರಿಗಿಂತ ಹೆಚ್ಚು ಬಾರಿ ಮದ್ಯ ಸೇವನೆ ಮಾಡುವುದರಿಂದ ಪಾರ್ಕಿನ್ಸನ್ ಮತ್ತು ಅಲ್ಝೈಮರ್​ನಂತಹ ಕಾಯಿಲೆಯ ಅಪಾಯ ಹೆಚ್ಚಿದೆ ಎಂದು ಎಚ್ಚರಿಸಲಾಗಿದೆ.

Published On - 12:58 pm, Sun, 17 July 22