Relationship: ನಮ್ಮ ಅಭಿಪ್ರಾಯಗಳೇ ಸವಾಲಾದಾಗ ಅದನ್ನು ನಿಭಾಯಿಸುವುದು ಹೇಗೆ?

ಕೆಲವೊಮ್ಮೆ ಸಂಬಂಧದಲ್ಲಿ ನಮ್ಮ ಅಭಿಪ್ರಾಯಗಳೇ ಸವಾಲಾಗಿ ಪರಿಣಮಿಸುತ್ತದೆ, ಅದನ್ನು ನಿವಾರಿಸಲು ಬೇರೆಯದ್ದೇ ಮನಸ್ಥಿತಿಯನ್ನು ನಾವು ಹೊಂದಬೇಕಾಗುತ್ತದೆ.

Relationship: ನಮ್ಮ ಅಭಿಪ್ರಾಯಗಳೇ ಸವಾಲಾದಾಗ ಅದನ್ನು ನಿಭಾಯಿಸುವುದು ಹೇಗೆ?
RelationshipImage Credit source: Freepik
Follow us
TV9 Web
| Updated By: ನಯನಾ ರಾಜೀವ್

Updated on: Jul 18, 2022 | 2:16 PM

ಕೆಲವೊಮ್ಮೆ ಸಂಬಂಧದಲ್ಲಿ ನಮ್ಮ ಅಭಿಪ್ರಾಯಗಳೇ ಸವಾಲಾಗಿ ಪರಿಣಮಿಸುತ್ತದೆ, ಅದನ್ನು ನಿವಾರಿಸಲು ಬೇರೆಯದ್ದೇ ಮನಸ್ಥಿತಿಯನ್ನು ನಾವು ಹೊಂದಬೇಕಾಗುತ್ತದೆ. ಬಂಧವೆಂದಮೇಲೆ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಸಾಮಾನ್ಯ, ಕೆಲವೊಂದು ನಾವು ಯೋಚಿಸುವುದಕ್ಕಿಂತ ವಿರುದ್ಧವಾಗಿಯೇ ನಡೆಯುತ್ತದೆ. ಒಂದು ವಿಷಯದಲ್ಲಿ ಸಂಗಾತಿ ಅಭಿಪ್ರಾಯ ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕೆಲವು ಸಂಘರ್ಷಗಳು ಸಹಾಯ ಮಾಡುತ್ತದೆ.

ಆದರೆ ಕೆಲವೊಮ್ಮೆ ನಮ್ಮ ಅಭಿಪ್ರಾಯ ಅಥವಾ ದೃಷ್ಟಿಕೋನವನ್ನು ಆರೋಗ್ಯಕರ ರೀತಿಯಲ್ಲಿ ತೆಗೆದುಕೊಳ್ಳುವುದಿಲ್ಲ ಇದರಿಂದ ಮತ್ತಷ್ಟು ಪ್ರತ್ಯೇಕತೆ ಸಮಸ್ಯೆ ಕಾಡುತ್ತದೆ.

ಪರಿಗಣನೆ: ಸಾಮಾನ್ಯವಾಗಿ ನಮ್ಮ ಅಭಿಪ್ರಾಯಗಳನ್ನು ಪ್ರಶ್ನಿಸಿದಾಗ, ನಾವು ಟ್ರಿಗರ್ ಆಗಿ ಅವರ ವಿರುದ್ಧ ಮಾತನಾಡುತ್ತೇವೆ, ಅವರ ದೃಷ್ಟಿಕೋನ ಏನು ಎಂದು ತಿಳಿಯುವ ಗೋಜಿಗೇ ಹೋಗುವುದಿಲ್ಲ.

ಗೌರವ: ಯಾವುದೇ ಅಭಿಪ್ರಾಯವಿರಲಿ, ಕೆಲವು ವಿಷಯಗಳ ಬಗ್ಗೆ ನಾವು ಹೊಂದಿರುವ ದೃಷ್ಟಿಕೋನವನ್ನು ಬೇರೆಯವರು ತಪ್ಪೆಂದ ತಕ್ಷಣ ಅವರ ಮೇಲಿರುವ ಗೌರವನ್ನು ಕಡಿಮೆ ಮಾಡಿಕೊಳ್ಳಬಾರದು. ನೀವು ಅದನ್ನು ಒಪ್ಪಿಕೊಂಡು ದೊಡ್ಡವರಾಗಲು ಪ್ರಯತ್ನಿಸಬೇಕು.

ಪ್ರಯತ್ನ ಮಾಡಿ: ಮಾತಿನಿಂದಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿದೆ. ಕೆಲವೊಮ್ಮೆ ನಮ್ಮ ಅಭಿಪ್ರಾಯವನ್ನು ಇತರೆ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದು ಕಷ್ಟವಾಗಬಹುದು. ಆದರೂ ನಿಮ್ಮ ಮನಸ್ಸಿನ ಭಾವನೆಯನ್ನು ಹೇಳಲು ಪ್ರಯತ್ನಿಸಿ.

ಸಮಯ: ಸಮಯ ಎಂಬುದು ಇದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಕೆಲವೊಮ್ಮೆ ನೀವು ಬೇರೆಯವರ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತೀರಿ. ಅಂತಹ ಸಂದರ್ಭದಲ್ಲಿ ನೀವು ಮೊದಲು ಅವರ ಮಾತನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಬಳಿಕ ಕೆಲ ಸಮಯದ ಬಳಿಕ ಯೋಚನೆ ಮಾಡಿ ಉತ್ತರವನ್ನು ನೀಡಿ.

ಒಂದು ನಿಲುವು ತೆಗೆದುಕೊಳ್ಳಿ: ನೀವು ಬೇರೆಯವರ ದೃಷ್ಟಿಕೋನವನ್ನು ಒಪ್ಪಿಕೊಳ್ಳಬಹುದು ಅಥವಾ ನಿಮ್ಮ ದೃಷ್ಟಿಕೋನದಲ್ಲೇ ನೀವು ನಿಲ್ಲಬಹುದು, ಆದರೆ ಯಾವುದಾದರೂ ಒಂದು ನಿಲುವು ತೆಗೆದುಕೊಳ್ಳುವುದು ಮುಖ್ಯ.