Navratri 2026: ನವರಾತ್ರಿಯ ಮೂರನೇ ದಿನ ದೇವಿಗೆ ನೈವೇದ್ಯವಾಗಿ ಏನನ್ನು ಅರ್ಪಿಸಿದರೆ ಶ್ರೇಷ್ಠ?

ನವರಾತ್ರಿಯ ಶುಭ ಸಂದರ್ಭದಲ್ಲಿ ಪೂಜೆ, ಆರಾಧನೆಯ ಜೊತೆಗೆ ದೇವಿಯನ್ನು ಒಲಿಸಿಕೊಳ್ಳಲು ನೈವೇದ್ಯವನ್ನು ಅರ್ಪಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನ ಒಂಬತ್ತು ಬಗೆಯ ನೈವೇದ್ಯಗಳನ್ನು ಅರ್ಪಿಸಿ ದುರ್ಗಾಮಾತೆಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಆರಾಧನೆಗೆ ಮೀಸಲಾಗಿದ್ದು, ಈ ದಿನ ದೇವಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅರ್ಪಿಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ.

Navratri 2026: ನವರಾತ್ರಿಯ ಮೂರನೇ ದಿನ ದೇವಿಗೆ ನೈವೇದ್ಯವಾಗಿ ಏನನ್ನು ಅರ್ಪಿಸಿದರೆ ಶ್ರೇಷ್ಠ?
ಸಾಂದರ್ಭಿಕ ಚಿತ್ರ
Image Credit source: vecteezy

Updated on: Oct 12, 2026 | 8:35 PM

ಅಕ್ಟೋಬರ್‌  11, ಭಾನುವಾರದಿಂದ ನವರಾತ್ರಿ (Navratri) ಹಬ್ಬ ಆರಂಭವಾಗಿದ್ದು, ಅಕ್ಟೋಬರ್‌ 19 ರ ವರೆಗೆ ನಡೆಯಲಿದೆ. ಈ ಒಂಬತ್ತು ದಿನಗಳ ಕಾಲ ದೇವಿಯ 9 ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಮೂರನೇ ದಿನ ಈ ದಿನ ದುರ್ಗಾ ಮಾತೆಯನ್ನು ಚಂದ್ರಘಂಟಾ ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವಿಯ ಈ ರೂಪವು ಧೈರ್ಯ, ಶಕ್ತಿ, ಶಾಂತಿ ಮತ್ತು ಧರ್ಮ ರಕ್ಷಣೆಯನ್ನು ಸಂಕೇತಿಸುತ್ತದೆ.  ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಆರಾಧನೆಯ ಸುಸಂದರ್ಭದಲ್ಲಿ ದೇವಿಗೆ  ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅರ್ಪಿಸುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ನವರಾತ್ರಿ ಮೂರನೇ ದಿನ ದೇವಿಗೆ ಹಾಲು, ಹಾಲಿನ ಉತ್ಪನ್ನಗಳನ್ನು ಅರ್ಪಿಸುವುದು ಶ್ರೇಷ್ಠ:

ನವರಾತ್ರಿಯ ಮೂರನೇ ದಿನ ದೇವಿಯ ಚಂದ್ರಘಂಟಾ ಸ್ವರೂಪವನ್ನು ಪೂಜಿಸಲಾಗುತ್ತದೆ. ಚಂದ್ರಘಂಟಾ ದೇವಿಯನ್ನು ಶಾಂತಿ, ಧೈರ್ಯ ಮತ್ತು ಶಕ್ತಿಯನ್ನು ಸಂಕೇತವೆಂದು ಎಂದು ನಂಬಲಾಗಿದೆ. ಇವರ ಆಶೀರ್ವಾದವು ಜೀವನದ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತದೆ ಮತ್ತು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಆರಾಧನೆಯ ಸಂದರ್ಭದಲ್ಲಿ ದೇವಿಗೆ ಹಾಲು ಅಥವಾ ಹಾಲಿನಿಂದ ಮಾಡಿದ ಸಿಹಿ ತಿನಿಸನ್ನು ಅರ್ಪಿಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ನವರಾತ್ರಿಯಲ್ಲಿ ನೀವು ಸಹ ಚಂದ್ರಘಂಟಾ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ,  ಮನೆಯಲ್ಲಿಯೇ ಖೀರ್‌ ತಯಾರಿಸಿ ಈ ನೈವೇದ್ಯವಾಗಿ ಅರ್ಪಿಸಿ.

ಇದನ್ನೂ ಓದಿ: ನವರಾತ್ರಿಯ ಮೂರನೇ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು?

ನೈವೇದ್ಯಕ್ಕೆ ಮಾಡಿ ಖೀರ್:‌

ಖೀರ್ ಮಾಡಲು ಬೇಕಾಕುವ ಸಾಮಾಗ್ರಿಗಳು:

  • 1 ಲೀಟರ್ ಹಾಲು
  • 1/4 ಕಪ್ ಅಕ್ಕಿ
  • 1/2 ಕಪ್ ಸಕ್ಕರೆ
  • 5 ರಿಂದ 6 ಗೋಡಂಬಿ ಮತ್ತು ಬಾದಾಮಿ
  • 4 ರಿಂದ 5 ಏಲಕ್ಕಿ
  • ಕೇಸರಿ (ಐಚ್ಛಿಕ)

ಖೀರ್ ಮಾಡುವ ವಿಧಾನ:

ಮೊದಲು ಸ್ಟೌವ್‌ ಮೇಲೆ ಒಂದು ಪಾತ್ರೆಯನ್ನಿಟ್ಟು ಅದರಲ್ಲಿ ಹಾಲನ್ನು ಕುದಿಸಿ. ಹಾಲು ಕಾದ ಬಳಿಕ ಅದಕ್ಕೆ ತೊಳೆದ ಅಕ್ಕಿ ಸೇರಿಸಿ. ಅಕ್ಕಿ ಮೃದುವಾಗುವವರೆಗೆ ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಸಿಹಿಗೆ ತಕ್ಕಷ್ಟು ಸಕ್ಕರೆಯನ್ನು ಸೇರಿಸಿ. ಕೊನೆಗೆ  ಏಲಕ್ಕಿ ಮತ್ತು ಗೋಡಂಬಿ, ಬಾದಾಮಿ, ದ್ರಾಕ್ಷಿಯಂತಹ ಒಣ ಹಣ್ಣುಗಳನ್ನು ಸೇರಿಸಿ. ಇನ್ನೊಂದು 5 ರಿಂದ 10 ನಿಮಿಷ ಬೇಯಿಸಿ ನಂತರ ಗ್ಯಾಸ್ ಆಫ್ ಮಾಡಿ. ಬೇಕಾದಲ್ಲಿ ನೀವು ಇದಕ್ಕೆ ಕೇಸರಿ ದಳವನ್ನು ಸಹ ಸೇರಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us