AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2026: ನವರಾತ್ರಿಯ ಮೂರನೇ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು?

ಅಕ್ಟೋಬರ್‌ 11, ಭಾನುವಾರದಿಂದ ನವರಾತ್ರಿ ಹಬ್ಬ ಆರಂಭವಾಗಿದ್ದು, ಅಕ್ಟೋಬರ್‌ 19 ರ ವರೆಗೆ ನಡೆಯಲಿದೆ. ಈ ಒಂಬತ್ತು ದಿನಗಳ ಕಾಲ ದೇವಿಯ 9 ಅವತಾರಗಳನ್ನು ಪೂಜಿಸಲಾಗುತ್ತದೆ. ಜೊತೆಗೆ ಆಯಾ ದಿನಕ್ಕೆ ನಿಗದಿಯಾದ ಬಣ್ಣದ ಉಡುಪುಗಳನ್ನು ಧರಿಸಿ ದುರ್ಗಾ ಮಾತೆಯನ್ನು ಆರಾಧಿಸುವ ವಾಡಿಕೆಯೂ ಇದೆ. ನಾಳೆ ನವರಾತ್ರಿಯ ಮೂರನೇ ದಿನವಾಗಿದ್ದು, ಈ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಿ ದೇವಿಯನ್ನು ಪೂಜಿಸುವುದು ಶುಭ ಎಂಬುದನ್ನು ತಿಳಿದುಕೊಳ್ಳಿ.

Navratri 2026: ನವರಾತ್ರಿಯ ಮೂರನೇ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು?
ನವರಾತ್ರಿ ಹಬ್ಬImage Credit source: Getty Images
ಮಾಲಾಶ್ರೀ ಅಂಚನ್​
|

Updated on: Oct 12, 2026 | 5:55 PM

Share

ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ನವರಾತ್ರಿ (Navratri) ಹಬ್ಬ ಕೂಡ ಒಂದು. ಈ ಬಾರಿಯ ನವರಾತ್ರಿ ಹಬ್ಬ ಅಕ್ಟೋಬರ್‌ 11 ರಿಂದ ಆರಂಭವಾಗಿದ್ದು, ಅಕ್ಟೋಬರ್‌ 19 ರ ವರೆಗೆ ನಡೆಯಲಿದೆ.  ಒಂಬಂತ್ತು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಜಗನ್ಮಾತೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಜೊತೆಗೆ ಈ 9 ದಿನಗಳ ಕಾಲ ಆಯಾ ದಿನಕ್ಕೆ ನಿಗದಿಯಾದ ದೇವಿಗೆ ಪ್ರಿಯವಾದ ಬಣ್ಣದ ಉಡುಪುಗಳನ್ನು ತೊಟ್ಟು ಭಕ್ತರು ಜಗನ್ಮಾತೆಯನ್ನು ಪೂಜಿಸುತ್ತಾರೆ. ನಾಳೆ ನವರಾತ್ರಿಯ ಮೂರನೇ ದಿನವಾಗಿದ್ದು, ಈ ದಿನ ದುರ್ಗಾ ಮಾತೆಯನ್ನು ಚಂದ್ರಘಂಟಾ ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಈ ದಿನದಂದು ಯಾವ ಬಣ್ಣದ ಉಡುಗೆಯನ್ನು ತೊಟ್ಟು ದೇವಿಯನ್ನು ಪೂಜಿಸಿದರೆ ಮಂಗಳಕರ ಎಂಬುದನ್ನು ನೋಡೋಣ ಬನ್ನಿ.

ನವರಾತ್ರಿಯ ಮೂರನೇ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಶುಭ:

ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಕೆಂಪು ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಕೆಂಪು ಬಣ್ಣವು ಜಗನ್ಮಾತೆಯ ನೆಚ್ಚಿನ ಬಣ್ಣವಾಗಿದ್ದು, ಇದು ಶಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ. ಅಲ್ಲದೆ ಚಂದ್ರಘಂಟಾ ಮಾತೆಯು ಶೌರ್ಯ, ಶಾಂರಿ ಮತ್ತು ಬಲದ ಪ್ರತೀಕವಾಗಿದ್ದು, ಪಾಪಗಳನ್ನು, ಕೆಟ್ಟದ್ದನ್ನು ನಾಶ ಮಾಡುವ ಶಕ್ತಿ ಸ್ವರೂಪಿಣಿ. ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಮನಸ್ಸು ಮತ್ತು ದೇಹವು ಚೈತನ್ಯದಿಂದ ಹಾಗೂ ಸಕಾರಾತ್ಮಕತೆಯಿಂದ ಕೂಡಿರುತ್ತದೆ.

ಇದನ್ನೂ ಓದಿ: ನವರಾತ್ರಿಯ 9 ದಿನಗಳಿಗೆ 9 ಬಣ್ಣಗಳ ಉಡುಗೆ: ಸಾಂಪ್ರದಾಯಿಕ ಲುಕ್‌ಗೆ ಇಲ್ಲಿವೆ ಸಲಹೆಗಳು

ಸಾಂಪ್ರದಾಯಿಕ ಲುಕ್‌ಗಾಗಿ ನವರಾತ್ರಿಯ ಮೂರನೇ ದಿನ ಈ ಬಟ್ಟೆಗಳನ್ನು ಧರಿಸಿ:

ನವರಾತ್ರಿ ಹಬ್ಬದ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ನೀವು ಕೆಂಪು ಬಣ್ಣದ ಬಟ್ಟೆಯನ್ನು ತೊಡಬಹುದು. ಕೆಂಪು ಬಣ್ಣವು ಶಕ್ತಿ, ಧೈರ್ಯ, ಪ್ರೀತಿ ಮತ್ತು ಭಕ್ತಿಯನ್ನು ಪ್ರತಿನಿಧಿಸುತ್ತದೆ. ಈ ದಿನದಂದು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ದೇವಿಯನ್ನು ಪೂಜಿಸುವುದರಿಂದ ಭಕ್ತರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.  ಈ ದಿನದಂದು ನೀವು ಸಾಂಪ್ರದಾಯಿಕ ನೋಟದಲ್ಲಿ ಸುಂದರವಾಗಿ ಮತ್ತು ಸ್ಟೈಲಿಶ್ ಆಗಿ ಕಾಣಲು ಬಯಸಿದರೆ, ಕೆಂಪು ಸೀರೆ, ಕೆಂಪು ಕುರ್ತಾ, ಅನಾರ್ಕಲಿ, ಶರರಾ, ಲೆಹೆಂಗಾ ಇತ್ಯಾದಿ ಬಟ್ಟೆಗಳನ್ನು ಧರಿಸಬೇಕು. ದೇವಿಯಂತೆ ಕಂಗೊಳಿಸಲು ಬಯಸಿದರೆ ಕೆಂಪು ಬಣ್ಣದ ಮೈಸೂರ್‌ ಸಿಲ್ಕ್‌, ಕಾಂಚೀಪುರಮ್‌, ಬನಾರಸಿ ಸೀರೆಯನ್ನು ತೊಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More