AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವ ಅಭ್ಯಾಸದಿಂದಾಗುವ ಪರಿಣಾಮಗಳೇನು?

ನಮ್ಮಲ್ಲಿ ಹಲವರು ಎದ್ದ ತಕ್ಷಣ ಮಾಡುವ ಮೊದಲ ಕೆಲಸವೆಂದರೆ ಮೊಬೈಲ್‌ ನೋಡುವುದು. ಹೌದು ಬೆಳಗ್ಗೆ ಎಚ್ಚರವಾದ ತಕ್ಷಣವೇ ಮೊಬೈಲ್‌ ಡೇಟಾ ಆನ್‌ ಮಾಡಿ ವಾಟ್ಸಾಪ್ ಮೆಸೇಜ್‌, ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌, ವಿಡಿಯೋಗಳನ್ನು ಸ್ಕ್ರೋಲ್‌ ಮಾಡುತ್ತಾ ಕುಳಿತುಬಿಡುತ್ತಾರೆ. ಮಿಮಗೂ ಕೂಡ ಈ ಅಭ್ಯಾಸ ಇದ್ಯಾ, ಇದು ಆರೋಗ್ಯದ ಮೇಲೆ ಎಷ್ಟೆಲ್ಲಾ ಗಂಭೀರ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವ ಅಭ್ಯಾಸದಿಂದಾಗುವ ಪರಿಣಾಮಗಳೇನು?
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 05, 2026 | 9:32 AM

Share

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್‌ ಫೋನ್‌ (Phone) ಜೀವನದ ಅವಿಭಾಜ್ಯ ಅಂಗವಾಗಿದೆ. ಹೆಚ್ಚಿನವರ ದಿನ ಆರಂಭವಾಗುವುದೇ ಮೊಬೈಲ್‌ ಫೋನ್‌ಗಳಿಂದ ಹೌದು ಅನೇಕರು ಬೆಳಗ್ಗೆ ಎಚ್ಚರಗೊಂಡ ತಕ್ಷಣ, ಎದ್ದು ನಿತ್ಯಕರ್ಮಗಳನ್ನು ಮಾಡುವ ಬದಲು ಹಾಸಿಗೆಯಲ್ಲೇ ಗಂಟೆಗಟ್ಟಲೆ ಮಲಗಿ ಈಮೇಲ್ಸ್‌, ವಾಟ್ಸಾಪ್‌ ಮೆಸೇಜ್‌, ಸೋಷಿಯಲ್‌ ಮೀಡಿಯಾದಲ್ಲಿ ಮೀಮ್ಸ್‌, ವಿಡಿಯೋ, ರೀಲ್ಸ್‌ಗಳನ್ನು ನೋಡುತ್ತಿರುತ್ತಾರೆ. ಈ ಅಭ್ಯಾಸವು ಸಾಮಾನ್ಯದಂತೆ ಕಂಡರೂ, ಇದು ಕ್ರಮೇಣ ದೇಹ, ಮನಸ್ಸು ಮತ್ತು ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಫೋನ್ ನೋಡುವುದು ನಿಮ್ಮ ಮಾನಸಿಕ ಸ್ಥಿತಿ ಮತ್ತು ದಿನವಿಡೀ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವುದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವ ಅಭ್ಯಾಸದಿಂದ ಅಗುವ ತೊಂದರೆಗಳೇನು?

ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ: ಬೆಳಿಗ್ಗೆ ಎದ್ದ ತಕ್ಷಣ, ಮೆದುಳು ಕ್ರಮೇಣ ಸಕ್ರಿಯಗೊಳ್ಳಬೇಕಾಗುತ್ತದೆ. ಹೀಗಿರುವಾಗ ಎಚ್ಚರಗೊಂಡ ತಕ್ಷಣವೇ ಮೊಬೈಲ್‌ ನೋಡಿದರೆ, ಮೊಬೈಲ್ ಫೋನ್‌ನ ಪ್ರಕಾಶಮಾನವಾದ ಬೆಳಕು ಮತ್ತು ಮೊಬೈಲ್‌ ನೋಟಿಫಿಕೇಶನ್‌ಗಳು ಮೆದುಳಿನ ಮೇಲೆ ಒಂದು ರೀತಿಯ ಡಿಜಿಟಲ್ ಒತ್ತಡವನ್ನು ಉಂಟುಮಾಡುತ್ತದೆ, ಇದು ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಆತಂಕವನ್ನು ಹೆಚ್ಚಿಸುತ್ತದೆ.

ಒತ್ತಡದ ಹಾರ್ಮೋನುಗಳು, ಹೃದಯ ಬಡಿತದ ಮೇಲೆ ಪರಿಣಾಮ: ತಜ್ಞರ ಪ್ರಕಾರ, ಬೆಳಿಗ್ಗೆ ನಿಮ್ಮ ಮೊಬೈಲ್ ಫೋನ್ ನೋಡುವುದರಿಂದ ದೇಹದಲ್ಲಿ ಒತ್ತಡದ ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಇದು ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಹಠಾತ್ ಏರಿಕೆಗೆ ಕಾರಣವಾಗಬಹುದು.

ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ: ಬೆಳಿಗ್ಗೆ ಸಾಮಾಜಿಕ ಮಾಧ್ಯಮ ಅಥವಾ ಸುದ್ದಿಗಳನ್ನು ಪರಿಶೀಲಿಸುವುದರಿಂದ ಮನಸ್ಸಿನಲ್ಲಿ ಬಹಳಷ್ಟು ಮಾಹಿತಿ ಸಂಗ್ರಹವಾಗುತ್ತದೆ. ನಕಾರಾತ್ಮಕ ಸುದ್ದಿಗಳು ಹೆಚ್ಚಾಗಿ ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ, ಇದು ದಿನವಿಡೀ ಒತ್ತಡ, ಕಿರಿಕಿರಿ ಮತ್ತು ಚಡಪಡಿಕೆಗೆ ಕಾರಣವಾಗುತ್ತದೆ. ದೀರ್ಘಕಾಲದಲ್ಲಿ ಈ ಅಭ್ಯಾಸವು ಆತಂಕ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ಉತ್ಪಾದಕತೆ ಮತ್ತು ಗಮನ ಕಡಿಮೆಯಾಗುತ್ತದೆ: ಬೆಳಗಿನ ಸಮಯವು ಹೆಚ್ಚಿನ ಗಮನ ಮತ್ತು ಯೋಜನೆಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ, ಆದರೆ ಈ ಸಮಯದಲ್ಲಿ ನೀವು ನಿಮ್ಮ ಮೊಬೈಲ್ ಫೋನ್‌ ನೋಡುವುದರಿಂದ ನಿಮ್ಮ ಗಮನ ಬೇರೆಡೆಗೆ ತಿರುಗಬಹುದು ಮತ್ತು ಅನಗತ್ಯ ಸಮಯ ವ್ಯರ್ಥವಾಗಬಹುದು. ಇದು ದಿನವಿಡೀ ನಿಮ್ಮ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಕೆಲಸದ ಮೇಲೆ ಗಮನಹರಿಸಲು ಕಷ್ಟವಾಗುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವಾಗ ಅತಿಯಾಗಿ ಯೋಚಿಸುವುದರಿಂದ ಉಂಟಾಗುವ ಸಮಸ್ಯೆಗಳೇನು?

ಏಕಾಗ್ರತೆಯ ಕೊರತೆ: ಹೊಸ ಆಲೋಚನೆಗಳು ಮತ್ತು ಸೃಜನಶೀಲತೆಗೆ ಬೆಳಿಗ್ಗೆ ಅತ್ಯುತ್ತಮ ಸಮಯ. ಆದರೆ ನೀವು ಎಚ್ಚರವಾದಾಗ ಮೊಬೈಲ್‌ನಿಂದ ಬರುವ ಸಂದೇಶಗಳು, ಸುದ್ದಿಗಳು ಮತ್ತು ರೀಲ್‌ಗಳನ್ನು ನೋಡುವುದರಿಂದ ನಿಮ್ಮ ಯೋಚಿಸುವ ಮತ್ತು ಗಮನಹರಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದಾಗಿ ನೀವು ದಿನವಿಡೀ ಒಂದೇ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಿಲ್ಲ ಮತ್ತು ನಿಮ್ಮ ಫೋನ್ ಅನ್ನು ನಿರಂತರವಾಗಿ ಪರಿಶೀಲಿಸುವ ಅಭ್ಯಾಸಕ್ಕೆ ಬಲಿಯಾಗುತ್ತೀರಿ.

ಬೆಳಗ್ಗೆ ಫೋನ್‌ ನೋಡುವ ಅಭ್ಯಾಸವನ್ನು ಹೇಗೆ ಬದಲಾಯಿಸುವುದು?

  • ಬೆಳಿಗ್ಗೆ ಎದ್ದ ನಂತರ ಮೊದಲ 30 ನಿಮಿಷಗಳ ಕಾಲ ನಿಮ್ಮ ಫೋನ್ ಮುಟ್ಟಬಾರದು ಎಂಬ ನಿಯಮವನ್ನು ಮಾಡಿ.
  • ಮೊಬೈಲ್‌ ಫೋನ್‌ ನೋಡುವ ಬದಲು ಬೆಳಗ್ಗೆ ವ್ಯಾಯಾಮ ಮಾಡಿ, ಧ್ಯಾನ ಮಾಡಿ, ಮೊಬೈಲ್‌ ಮನೆಯಲ್ಲಿಯೇ ಬಿಟ್ಟು ವಾಕಿಂಗ್‌ ಹೋಗಿ.
  • ಸಕಾರಾತ್ಮಕ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us