Valentine’s Week: ಪ್ರಪೋಸ್ ಡೇಯಂದು ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್​​​​​ಗಳ ಹವಾ ಜೋರು

ವ್ಯಾಲೆಂಟೈನ್ಸ್ ವೀಕ್ ಪ್ರಾರಂಭವಾಗಿದ್ದು, ಈಗಾಗಲೇ ಪ್ರೇಮಿಗಳು ಒಂದು ವಾರದ ಮುಂಚಿತವಾಗಿರುವ ಬರುವ ಪ್ರತಿಯೊಂದು ದಿನವನ್ನು ವಿಶೇಷವಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇಂದು ಫೆಬ್ರವರಿ 8 ಪ್ರಪೋಸ್ ಡೇ (ಪ್ರೇಮ ನಿವೇದನೆ ಮಾಡಿಕೊಳ್ಳುವ ದಿನ ). ಈ ದಿನ ಪ್ರೇಮ ದೋಣಿಯಲ್ಲಿ ಪ್ರಯಾಣಿಸಲು ಬಯಸುವವರು ತಮ್ಮ ಪ್ರೀತಿಯನ್ನು ಪ್ರೀತಿಪಾತ್ರರಿಗೆ ತಿಳಿಸುವ ದಿನ. ಈ ದಿನ ತಮ್ಮ ಪ್ರೇಮಿಯ ಮುಂದೆ ಹೃದಯಾಳದಲ್ಲಿ ಬಚ್ಚಿಕೊಂಡಿರುವ ಪ್ರೀತಿಯ ಪರಿಯನ್ನು ನಿವೇದಿಸಿಕೊಳ್ಳುತ್ತ, ಗ್ರೀನ್ ಸಿಗ್ನಲ್ ಸಿಕ್ಕರೆ ಜೊತೆಯಾಗಿ ಸಾಗುವುದಕ್ಕೆ ಈ ದಿನವೇ ಮುನ್ನುಡಿ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಪ್ರಪೋಸ್ ಡೇಯಂದು ಮೀಮ್ಸ್ ಗಳು ಹಾಗೂ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ.

Valentines Week: ಪ್ರಪೋಸ್ ಡೇಯಂದು ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್​​​​​ಗಳ ಹವಾ ಜೋರು
Edited By:

Updated on: Feb 08, 2024 | 3:03 PM

ಪ್ರೀತಿ ಹೇಗೆ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ..ಆದರೆ ಈ ಪ್ರೀತಿಯನ್ನು ಪ್ರೀತಿಸಿದ ವ್ಯಕ್ತಿಯ ಮುಂದೆ ವ್ಯಕ್ತಪಡಿಸುವುದು ಇನ್ನು ಕಷ್ಟವೇ. ಎಷ್ಟೇ ಧೈರ್ಯವಂತರಾಗಿದ್ದರೂ ಪ್ರೀತಿಸುವ ವ್ಯಕ್ತಿಯು ಎದುರು ಬಂದು ನಿಂತರೆ ಎದೆ ಬಡಿತ ಜೋರಾಗಿ ಮಾತೇ ಹೊರಡುವುದಿಲ್ಲ. ಆದರೆ ತಮ್ಮ ಪ್ರೀತಿಯನ್ನು ಹೇಳಲು ಬೆಸ್ಟ್ ದಿನವೆಂದರೆ ಫೆಬ್ರವರಿ ತಿಂಗಳಲ್ಲಿ ಬರುವ ಪ್ರಪೋಸ್ ಡೇ. ಮನ ಮೆಚ್ಚಿದ ವ್ಯಕ್ತಿಯ ಮುಂದೆ ಪ್ರೀತಿಯನ್ನು ಹೇಳಿಕೊಂಡು ಮನಸ್ಸು ಹಗುರವಾಗಿಸಿಕೊಂಡರೆ ಅದೇ ದೊಡ್ಡ ಸಾಧನೆ. ಗ್ರೀನ್ ಸಿಗ್ನಲ್ ಸಿಕ್ಕರಂತೂ ಪ್ರೀತಿಯ ಹಾದಿಯಲ್ಲಿ ಎರಡು ಹೃದಯಗಳ ಪಯಣ ಆರಂಭ. ಈ ದಿನವನ್ನು ಹೆಚ್ಚುವರಿ ವಿಶೇಷವಾಗಿಸಲು ಹಲವಾರು ವ್ಯಕ್ತಿಗಳು ವಿಭಿನ್ನ ರೀತಿಯಲ್ಲಿಯೇ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾರೆ.

ಆದರೆ ಪ್ರೇಮಿಗಳ ದಿನ ಆರಂಭವಾದರೆ ಸಾಕು, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯಲು ಒಂದಷ್ಟು ಮೀಮ್ಸ್ ಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವುದು ಸರ್ವೇ ಸಾಮಾನ್ಯ. ಕೆಲವು ಮೀಮ್ಸ್ ಪೇಜ್ ಗಳು ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತವೆ. ಇತ್ತ ಪ್ರೀತಿಯಲ್ಲಿ ಬೀಳದೆ ಸಿಂಗಲ್ ಆಗಿರುವವವರು ಈ ಮೀಮ್ಸ್ ಹಾಗೂ ವಿಡಿಯೋಗಳನ್ನು ಸಖತ್ ಎಂಜಾಯ್ ಮಾಡುವ ಮೂಲಕ ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಾರೆ.

ಹೀಗಾಗಿ ಸಾಮಾಜಿಕ ಜಾಲತಾಣಗಳು ಇಂತಹ ಸಂದರ್ಭದಲ್ಲಿ ಇನ್ನಷ್ಟು ಮನೋರಂಜನೆಯ ತಾಣಗಳಾಗಿ ಬಿಡುವುದಿದೆ. ಕೆಲವು ಕಿಲಾಡಿಗಳು ಈ ದಿನವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಾರೆ. ಆದರೆ ಇದೀಗ ಟ್ವಿಟರ್ ನಲ್ಲಿ ಪ್ರಪೋಸ್ ಡೇಯಂದು ಕೆಲವು ತಮಾಷೆಯ ಮೀಮ್ಸ್ ಗಳು ಟ್ರೆಂಡ್ ಆಗುತ್ತಿವೆ.

ಇದನ್ನೂ ಓದಿ: ಚಾಕೋಲೇಟ್ ದಿನದಂದು ನಿಮ್ಮ ಮನದರಸಿಯ ಮನ ಗೆಲ್ಲಲು ಏನು ಮಾಡಿದರೆ ಬೆಸ್ಟ್? ಇಲ್ಲಿದೆ ಸಿಂಪಲ್ ಟಿಪ್ಸ್

ಈ ಮೀಮ್ಸ್ ಗಳನ್ನು ನೋಡಿದ ನೆಟ್ಟಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲಿಯು ಈ ಮೀಮ್ಸ್ ಹಾಗೂ ವಿಡಿಯೋಗಳಲ್ಲಿ ಪ್ರಪೋಸ್ ಮಾಡುವ ರೀತಿಯನ್ನು ನೋಡಿದರೆ ಎಂತಹವರನ್ನು ಒಂದು ಕ್ಷಣ ನಗೆಗಡಲಲ್ಲಿ ತೇಲಿಸುತ್ತಿದೆ. ಕೆಲವರಂತೂ ಈ ಮೀಮ್ಸ್ ಗಳನ್ನು ನೋಡಿ ಸಖತ್ ಎಂಜಾಯ್ ಕೂಡ ಮಾಡುವುದಲ್ಲದೆ ಕಾಮೆಂಟ್ ಗಳನ್ನು ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ