
ಓಣಂ (Onam) ಹಬ್ಬವು ಕೇರಳದಲ್ಲಿ ಬಹಳ ವಿಜೃಂಭನೆಯಿಂದ ಆಚರಿಸಲಾಗುವಂತಹ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ. ಈ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಇದಾಗಲೇ ಈ ವರ್ಷದ ಓಣಂ ಹಬ್ಬದ ಆಚರಣೆ ಶುರುವಾಗಿದ್ದು, ಈ ಸಂದರ್ಭದಲ್ಲಿ ಅಮುಲ್ ತನ್ನ ವಿಶೇಷ ಜಾಹೀರಾತಿನ ಮೂಲಕ ಗಮನ ಸೆಳೆದಿದೆ. ಹೌದು ಅಮುಲ್ ಓಣಂ ಹಬ್ಬದ ಸಲುವಾಗಿ ಅಮುಲ್ ಗರ್ಲ್ ಮಹಾಬಲಿ ಜೊತೆ ಬೋಟ್‌ನಲ್ಲಿ ಔರಾ ಫಾರ್ಮಿಂಗ್ (Aura Farming) ಡ್ಯಾನ್ಸ್ ಮಾಡುವಂತಹ ಕ್ಯೂಟ್ ಅನಿಮೇಟೆಡ್ ವಿಡಿಯೋವನ್ನು ಬಿಡುಗಡೆಗೊಳಿಸಿದ್ದು, ಈ ಮುದ್ದಾದ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಇಂಡೋನೇಷ್ಯಾದ 11 ವರ್ಷದ ರೇಯನ್ ಅರ್ಕನ್ ದಿಖಾ ಎಂಬ ಬಾಲಕ ಔರಾ ಫಾರ್ಮಿಂಗ್ ಡ್ಯಾನ್ಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಸೃಷ್ಟಿಸಿದ್ದನು. ಇದೀಗ ಓಣಂ ಹಬ್ಬದ ಪ್ರಯುಕ್ತ ಅಮುಲ್ ಕೂಡ ಇಂತಹದ್ದೇ ವಿಶಿಷ್ಟ ಜಾಹೀರಾತನ್ನು ಸೃಷ್ಟಿಸಿದೆ.
ಸಾಮಾನ್ಯವಾಗಿ ಓಣಂ ಹಬ್ಬದಲ್ಲಿ ವಲ್ಲಮ್ ಕಲಿ ಎಂಬ ಸಾಂಪ್ರದಾಯಿಕ ಬೋಟ್ ರೇಸ್ ಆಟವನ್ನು ಆಡಲಾಗುತ್ತದೆ. ಇದೀಗ ಈ ಬೋಟ್ ರೇಸಿಂಗ್‌ನಲ್ಲಿ ಮಹಾಬಲಿ ಜೊತೆ ಅಮುಲ್ ಗರ್ಲ್ ಔರಾ ಫಾರ್ಮಿಂಗ್ ಡ್ಯಾನ್ಸ್ ಮಾಡುತ್ತಾ ಸಾಗುವಂತಹ ಕ್ಯೂಟ್ ಅನಿಮೇಟೆಡ್ ಜಾಹೀರಾತು ವಿಡಿಯೋವನ್ನು ಅಮಲ್ ಬ್ರ್ಯಾಂಡ್ ಬಿಡುಗಡೆಗೊಳಿಸಿದೆ. ಈ ವಿಡಿಯೋವನ್ನು amulkeramal ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಮುಲ್ ಗರ್ಲ್ ಮತ್ತು ಮಹಾಬಲಿ ಬೋಟ್ ಮೇಲೆ ನಿಂತು ಔರಾ ಫಾರ್ಮಿಂಗ್ ಡ್ಯಾನ್ಸ್ ಮಾಡುತ್ತಾ ಸಾಗುವಂತಹ ಮುದ್ದಾದ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕೇವಲ ಕುಟುಂಬದ ಆಚರಣೆಯಾಗಿದ್ದ ಗಣೇಶ ಚತುರ್ಥಿ ಸಾರ್ವಜನಿಕ ಗಣೇಶೋತ್ಸವವಾಗಿದ್ದು ಹೇಗೆ?
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನಂತೂ ಯಾವಾಗಲೂ ಅಮುಲ್ ಜಾಹೀರಾತಿಗೆ ಅಭಿಮಾನಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ ʼಈ ಜಾಹೀರಾತು ತುಂಬಾನೇ ಮುದ್ದಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅಮುಲ್‌ನ ಈ ಕ್ರಿಯೆಟಿವ್ ಜಾಹೀರಾತಿಗೆ ಮನಸೋತಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ