ಮನೆ ಮದ್ದು: ಬೆಳಗ್ಗೆ ಎದ್ದೇಳುತ್ತಲೇ ಮೈ ಕೈ ನೋವು ಕಾಣಿಸಿಕೊಳ್ಳುತ್ತಾ, ಈ ಸಮಸ್ಯೆಗೆ ಮನೆಯಲ್ಲೇ ಕಂಡುಕೊಳ್ಳಿ ಮುಕ್ತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 14, 2024 | 5:52 PM

ಬಹುತೇಕರಲ್ಲಿ ಬೆಳಗ್ಗೆ ಎದ್ದಾಗ ಅತಿಯಾದ ಮೈ ಕೈ ನೋವು ಕಾಡುತ್ತದೆ. ಅದರಲ್ಲಿ ವಯಸ್ಸು ಆದವರಲ್ಲಿ ಈ ನೋವಿನ ಪ್ರಮಾಣವು ಅತೀ ಹೆಚ್ಚಿರುತ್ತದೆ. ಮಧುಮೇಹ, ಡಿಹೈಡ್ರೇಷನ್, ನಿದ್ರೆಯ ಕೊರತೆಯಿಂದ ಮೈ ಕೈ ನೋವು ಸಮಸ್ಯೆಯು ಬರುವುದು ಹೆಚ್ಚು. ಆದರೆ ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಈ ಮೈಕೈ ನೋವನ್ನು ಗುಣಮುಖಗೊಳಿಸಬಹುದು.

ಮನೆ ಮದ್ದು: ಬೆಳಗ್ಗೆ ಎದ್ದೇಳುತ್ತಲೇ ಮೈ ಕೈ ನೋವು ಕಾಣಿಸಿಕೊಳ್ಳುತ್ತಾ, ಈ ಸಮಸ್ಯೆಗೆ ಮನೆಯಲ್ಲೇ ಕಂಡುಕೊಳ್ಳಿ ಮುಕ್ತಿ
ಸಾಂದರ್ಭಿಕ ಚಿತ್ರ
Follow us on

ಸ್ವಲ್ಪ ಮೈ ದಂಡಿಸಿ ಕೆಲಸ ಮಾಡಿದರೆ ಸಾಕು, ಅತಿಯಾಗಿ ಮೈ ಕೈ ನೋವು ಸಮಸ್ಯೆಯು ಆರಂಭವಾಗುತ್ತದೆ. ಕೆಲವರಿಗಂತೂ ಬೆಳಗ್ಗೆ ಏಳುವುದಕ್ಕೂ ಆಗುವುದೇ ಇಲ್ಲ. ಈ ನೋವು ವಿಪರೀತವಾದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯ. ಕೆಲವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಆದರೆ ಮನೆಯಲ್ಲಿಯೇ ತಯಾರಿಸ ಬಹುದಾದ ಔಷಧಿಯಿಂದ ಈ ಸಮಸ್ಯೆಯಿಂದ ಮುಕ್ತರಾಗುವುದು ಉತ್ತಮ.

* ಎಳ್ಳೆಣ್ಣೆಯನ್ನು ಮೈ ಕೈ ನೋವಿಗೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡುವುದರಿಂದ ನೋವು ಮಾಯವಾಗುತ್ತದೆ.

* ಹರಳೆಣ್ಣೆಯನ್ನು ದೇಹಕ್ಕೆ ಹಚ್ಚಿ, ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡುವುದರಿಂದ ಮೈ ಕೈ ನೋವು ಕಡಿಮೆಮಾಡಬಹುದಾಗಿದೆ.

* ಹಲಸಿನ ಹಣ್ಣಿಗೆ ಅಕ್ಕಿ ಬೆಲ್ಲ ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ದೋಸೆ ಮಾಡಿ ತಿನ್ನುವುದರಿಂದ ಮೈಕೈ ನೋವು ಗುಣಮುಖವಾಗುತ್ತದೆ.

* ವಾರದಲ್ಲಿ ಒಮ್ಮೆಯಾದರೂ ಮೆಂತ್ಯ ಸೊಪ್ಪಿನ ಸಾರನ್ನು ಸೇವಿಸುವುದರಿಂದ ಮೈ ಕೈ ನೋವು ನಿವಾರಣೆಯಾಗುತ್ತದೆ.

* ಬೆಚ್ಚಗಿನ ನೀರಿನಲ್ಲಿ ಹಸಿಶುಂಠಿಯನ್ನು ತುರಿದು, ಈ ನೀರಿನಲ್ಲಿ ಬಟ್ಟೆಯನ್ನು ಅದ್ದಿ, ನೋವಿರುವ ಭಾಗದ ಮೇಲೆ ಇಡುವುದರಿಂದ ನೋವು ಕಡಿಮೆಯಾಗುತ್ತದೆ.

* ಅರಿಶಿನವನ್ನು ಸೇವಿಸುವುದರಿಂದ ಮೈ ಕೈ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

* ದಿನನಿತ್ಯವು ಸಕ್ಕರೆ ಹಾಕದೇ ಕಾಫಿ ಸೇವನೆ ಮಾಡುವುದರಿಂದ ಮೈ ಕೈ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

* ಮೆಂತ್ಯವನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ರುಬ್ಬಿಕೊಂಡು ಅಂಗೈ ಅಂಗಾಲುಗಳಿಗೆ ಹಚ್ಚುವುದರಿಂದ ಉರಿಯು ಕಡಿಮೆಯಾಗುತ್ತದೆ.

* ಬಾಳೆಹಣ್ಣನ್ನು ಮೊಸರಿನಲ್ಲಿ ಮಿಶ್ರಣ ಮಾಡಿ, ಅದನ್ನು ಅಂಗಾಲಿಗೆ ಹಚ್ಚುತ್ತಿದ್ದರೆ ಉರಿ ಶಮನವಾಗುತ್ತದೆ.

* ಹಲಸಂಡೆ ಕಾಳನ್ನು ಹುರಿದು ಸೇವಿಸುತ್ತಿದ್ದರೆ ಮೈಕೈ ನೋವಿಗೆ ರಾಮಬಾಣವಾಗಿದೆ.

ಇದನ್ನೂ ಓದಿ: ಮನೆ ಮದ್ದು: ಶಿವನಿಗೆ ಪ್ರಿಯವಾದ ತುಂಬೆ ಗಿಡದಲ್ಲಿದೆ ಆರೋಗ್ಯ, ಯಾವೆಲ್ಲ ಸಮಸ್ಯೆಗೆ ಉಪಯುಕ್ತ

* ತುಂಬೆ ಗಿಡದ ಕಾಂಡಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಆ ನೀರಿನಿಂದ ನೋವು ಇರುವ ಜಾಗಕ್ಕೆ ಬಟ್ಟೆಯಿಂದ ಶಾಖ ನೀಡುವುದರಿಂದ ಮೈ ಕೈ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

* ಮೈ ಕೈ ನೋವು ಸಮಸ್ಯೆಯು ಕಾಡುತ್ತಿದ್ದರೆ, ಉಪ್ಪು ನೀರಿನಿಂದ ಶಾಖ ಕೊಡುವುದರಿಂದ ನೋವಿನ ಸಮಸ್ಯೆಯು ಕಡಿಮೆಯಾಗುತ್ತದೆ.

* ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಮೈ ಕೈ ನೋವು ಕಡಿಮೆಯಾಗಿ ದೇಹವು ಹಗುರಾದಂತಹ ಅನುಭವವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:51 pm, Wed, 14 February 24